ನವದೆಹಲಿ: ಕೇಂದ್ರ ಸರ್ಕಾರ ಈ ಸಾಲಿನ ಕ್ರೀಡಾ ಪ್ರಶಸ್ತಿಗಳನ್ನು ಪ್ರಕಟಿಸಿದ್ದು, ಭಾರತ ಕ್ರಿಕೆಟ್ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಮತ್ತು ಉಪ ನಾಯಕ ರೋಹಿತ್ ಶರ್ಮಾ ಸೇರಿದಂತೆ ಐವರಿಗೆ ಕ್ರೀಡಾ ಕ್ಷೇತ್ರದ ಪ್ರತಿಷ್ಠಿತ ಖೇಲ್ ರತ್ನಾ ಪ್ರಶಸ್ತಿಯನ್ನು ಘೋಷಿಸಲಾಗಿದೆ.
ಪ್ಯಾರಾ ಅಥ್ಲೆಟಿಕ್ಸ್ ಮರಿಯಪ್ಪನ್ , ಟೇಬಲ್ ಟೆನಿಸ್ ನಲ್ಲಿ ಮಾನಿಕಾ ಬಾತ್ರಾ, ರೆಸ್ಲಿಂಗ್ -ವಿನೇಶ್ ಮತ್ತು ಹಾಕಿಯಲ್ಲಿನ ಸಾಧನೆಗಾಗಿ ರಾಣಿ ಎಂಬರಿಗೆ ರಾಜೀವ್ ಗಾಂಧಿ ಖೇಲ್ ರತ್ನಾ ಪ್ರಶಸ್ತಿಯನ್ನು ಈ ಬಾರಿ ಘೋಷಿಸಲಾಗಿದೆ.
ಹಿಟ್ ಮ್ಯಾನ್ ಖ್ಯಾತೀಯ ರೋಹಿತ್ ಶರ್ಮಾ ನಿಯಮಿತ ಓವರ್ಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಈ ಹಿನ್ನಲೆಯಲ್ಲಿ ಬಿಸಿಸಿಐ ಪ್ರತಿಷ್ಠಿತ ಪ್ರಶಸ್ತಿಗೆ ರೋಹಿತ್ ಶರ್ಮಾ ಹೆಸರನ್ನು ಶಿಫಾರಸ್ಸು ಮಾಡಿತ್ತು. ಭಾರತದ ಸರ್ಕಾರದ ಯುವಜನ ಸೇವಾ ಮತ್ತು ಕ್ರೀಡಾ ಸಚಿವಾಲಯ 2020ನೇ ವರ್ಷಕ್ಕೆ ಸಾಧನೆ ಮಾಡಿದ್ದ ಕ್ರೀಡಾಪಟುಗಳಿಂದ ಪ್ರಶಸ್ತಿಗೆ ಹೆಸರುಗಳನ್ನು ಆಹ್ವಾನಿಸಿ 2016ರ ಜನವರಿ 1 ರಿಂದ 2019ರ ಡಿಸೆಂಬರ್ 31ರವರೆಗೆ ಕಾಲಾವಧಿಯನ್ನು ನೀಡಿತ್ತು.
ಟೀಂ ಇಂಡಿಯಾದ ವೇಗಿ ಇಶಾಂತ್ ಶರ್ಮಾ, ಅಥ್ಲೇಟಿಕ್ಸ್ ನಲ್ಲಿ ದ್ಯುತಿ ಚಾಂದ್, ಬೆಂಗಳೂರಿನ ಗಾಲ್ಫರ್ ಅದಿತಿ ಅಶೋಕ್, ಕ್ರಿಕೆಟ್ ತಾರೆ ದೀಪ್ತಿ ಶರ್ಮಾ ಸೇರಿದಂತೆ 27 ಮಂದಿ ಅರ್ಜುನ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಇನ್ನು 8 ಕ್ರೀಡಾ ಸಾಧಕರಿಗೆ ದ್ರೋಣಾಚಾರ್ಯ ಪ್ರಶಸ್ತಿ, 15 ಜನರಿಗೆ ಧ್ಯಾನ್ ಚಂದ್ ಪ್ರಶಸ್ತಿ ಲಭಿಸಿದೆ