Advertisement

400 ಸಿಕ್ಸರ್‌ಗಳ ಗಡಿಯಲ್ಲಿ ರೋಹಿತ್‌ ಶರ್ಮ

12:33 AM Dec 05, 2019 | Team Udayavani |

ಮುಂಬಯಿ: ಭಾರತ ಸೀಮಿತ ಓವರ್‌ಗಳ ಕ್ರಿಕೆಟ್‌ ತಂಡದ ಉಪನಾಯಕ ರೋಹಿತ್‌ ಶರ್ಮ ಇನ್ನೊಂದು ಮೈಲುಗಲ್ಲಿನ ಸನಿಹದಲ್ಲಿದ್ದಾರೆ. ಅವರು ಇನ್ನೊಂದು ಸಿಕ್ಸರ್‌ ಹೊಡೆದರೆ, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 400 ಸಿಕ್ಸರ್‌ ದಾಖಲಿಸಿದ ವಿಶ್ವದ 3ನೇ ಹಾಗೂ ಭಾರತದ ಮೊದಲ ಕ್ರಿಕೆಟಿಗ ಎನಿಸಿಕೊಳ್ಳಲಿದ್ದಾರೆ.

Advertisement

ಡಿ. 6ರಿಂದ ಆರಂಭವಾಗಲಿರುವ ವೆಸ್ಟ್‌ ಇಂಡೀಸ್‌ ವಿರುದ್ಧದ ಟಿ20 ಪಂದ್ಯಗಳ ಸರಣಿಯಲ್ಲಿ ರೋಹಿತ್‌ ಶರ್ಮ ಈ ದಾಖಲೆ ನಿರ್ಮಿಸುವುದರಲ್ಲಿ ಅನುಮಾನವಿಲ್ಲ.

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತ್ಯಧಿಕ 534 ಸಿಕ್ಸರ್‌ ಬಾರಿಸಿದ ವಿಶ್ವದಾಖಲೆ ವೆಸ್ಟ್‌ ಇಂಡೀಸ್‌ನ ಕ್ರಿಸ್‌ ಗೇಲ್‌ ಹೆಸರಲ್ಲಿದೆ. ಪಾಕಿಸ್ಥಾನದ ಶಾಹಿದ್‌ ಅಫ್ರಿದಿ 476 ಸಿಕ್ಸರ್‌ ಬಾರಿಸಿ ದ್ವಿತೀಯ ಸ್ಥಾನದಲ್ಲಿದ್ದಾರೆ. ಮುಂದೊಂದು ದಿನ ರೋಹಿತ್‌ ಶರ್ಮ, ಗೇಲ್‌ ದಾಖಲೆಯನ್ನು ಮುರಿದರೂ ಅಚ್ಚರಿಯಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next