Advertisement
ನಥನ್ ಲಿಯಾನ್ ಎಸೆದ ಇನ್ನಿಂಗ್ಸಿನ 16ನೇ ಓವರಿನಲ್ಲಿ ಸಿಕ್ಸರ್ ಎತ್ತುವ ಮೂಲಕ ರೋಹಿತ್ ಈ ಮೈಲುಗಲ್ಲು ನೆಟ್ಟರು. ಒಟ್ಟಾರೆಯಾಗಿ ಇದು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ರೋಹಿತ್ ಬಾರಿಸಿದ 424ನೇ ಸಿಕ್ಸರ್. ಈ ಯಾದಿಯಲ್ಲಿ ಅವರಿಗೆ 3ನೇ ಸ್ಥಾನ. ಒಂದೇ ದೇಶದ ವಿರುದ್ಧ, ಎಲ್ಲ ಮೂರು ಮಾದರಿಗಳಲ್ಲಿ ಅತ್ಯಧಿಕ ಸಿಕ್ಸರ್ ಹೊಡೆದ ದಾಖಲೆ ಕ್ರಿಸ್ ಗೇಲ್ ಹೆಸರಲ್ಲಿದೆ. ಅವರು ಇಂಗ್ಲೆಂಡ್ ಎದುರು 140 ಸಿಕ್ಸರ್ ಸಿಡಿಸಿದ್ದಾರೆ.
ದ್ವಿತೀಯ ದಿನದ ಆಟದ ವೇಳೆ ಆಸ್ಟ್ರೇಲಿಯದ ಬ್ಯಾಟ್ಸ್‌ಮನ್ ಮಾರ್ನಸ್ ಲಬುಶೇನ್ ಟೀಮ್ ಇಂಡಿಯಾ ಆರಂಭಿಕರಾದ ಶುಭಮನ್ ಗಿಲ್ ಮತ್ತು ರೋಹಿತ್ ಶರ್ಮ ಅವರನ್ನು ಪದೇಪದೇ ಕೆಣಕಿದರು. ಮೊದಲು ಗಿಲ್ ತಂಟೆಗೆ ಹೋದ ಅವರು, “ನಿಮಗೆ ಸಚಿನ್ ಮತ್ತು ಕೊಹ್ಲಿ ನಡುವೆ ಯಾರು ಇಷ್ಟ’ ಎಂದು ಕೇಳಿದರು. ಇದಕ್ಕೆ ಗಿಲ್ ಉತ್ತರಿಸಲಿಲ್ಲ. ಅನಂತರ ರೋಹಿತ್ ಸ್ಟ್ರೈಕ್‌ಗೆ ಬಂದರು. ಆಗ, ಕ್ವಾರಂಟೈನ್ ವೇಳೆ ಏನು ಮಾಡಿದಿರಿ ಎಂದು ಕೆಣಕಿದರು. ಇದನ್ನು ರೋಹಿತ್ ನಿರ್ಲಕ್ಷಿಸಿ ಸುಮ್ಮನಾದರು. ಆಟಗಾರರ ಏಕಾಗ್ರತೆಗೆ ಭಂಗ ತರಲು ಆಸೀಸ್ ಕ್ರಿಕೆಟಿಗರು ಇಂಥ ತಂತ್ರ ಹೂಡುವುದು ಮಾಮೂಲು.