Advertisement

ಆಸೀಸ್‌ ವಿರುದ್ಧ ಪ್ರಥಮ ಟಿ20 ಪಂದ್ಯಕ್ಕೆ ರೋಹಿತ್‌ ಇಲ್ಲ?

06:00 AM Nov 12, 2018 | |

ಚೆನ್ನೈ: ಭಾರತ ಸೀಮಿತ ಓವರ್‌ಗಳ ಕ್ರಿಕೆಟ್‌ ತಂಡದ ಉಪನಾಯಕ ರೋಹಿತ್‌ ಶರ್ಮ ಆಸ್ಟ್ರೇಲಿಯದಲ್ಲಿ ನ.21ರಂದು ನಡೆಯುವ ಮೊದಲ ಟಿ20 ಪಂದ್ಯವನ್ನು ತಪ್ಪಿಸಿಕೊಳ್ಳುವ ಸಾಧ್ಯತೆಯಿದೆ. ಅವರು ವಿಂಡೀಸ್‌ ವಿರುದ್ಧ ಟಿ20 ಸರಣಿಯ ನಂತರ ನ್ಯೂಜಿಲೆಂಡ್‌ಗೆ ತೆರಳಿ ಅಲ್ಲಿ ಭಾರತ ಎ ತಂಡದ ಪರ ಟೆಸ್ಟ್‌ ಪಂದ್ಯವಾಡಲಿದ್ದಾರೆ. 

Advertisement

ನ.16ರಿಂದ 19ರವರೆಗೆ ಪಂದ್ಯ ನಡೆಯಲಿದ್ದು, ನ.21ಕ್ಕೆ ಟಿ20 ಪಂದ್ಯವಿದೆ. ಈ ನಡುವೆ ಕೇವಲ 2 ದಿನಗಳ ಅಂತರವಿರುವುದರಿಂದ ರೋಹಿತ್‌ ಮೊದಲ ಪಂದ್ಯದಲ್ಲಿ ಆಡುವುದು ಕಷ್ಟಕರವಾಗಿದೆ. ಸದ್ಯ ರೋಹಿತ್‌ರನ್ನು ಭಾರತ ಟೆಸ್ಟ್‌ ತಂಡಕ್ಕೂ ಪರಿಗಣಿಸಬೇಕೆಂಬ ಆಗ್ರಹ ಜೋರಾಗಿದೆ. ಆದ್ದರಿಂದ ನ್ಯೂಜಿಲೆಂಡ್‌ ಎ ವಿರುದ್ಧ ರೋಹಿತ್‌ ತಮ್ಮ ಸಾಮರ್ಥಯ ಸಾಬೀತು ಪಡಿಸಬೇಕಿದೆ. ಹಾಗಿದ್ದರೆ ಮಾತ್ರ ಅವರಿಗೆ ಟೆಸ್ಟ್‌ನಲ್ಲಿ ಸ್ಥಾನ ಸಿಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next