Advertisement

ಸಿಕ್ಸರ್‌ ಏಟು ತಿಂದ ಅಭಿಮಾನಿಗೆ ಕ್ಯಾಪ್‌ ನೀಡಿದ ರೋಹಿತ್‌

01:09 AM Jul 04, 2019 | Sriram |

ಬರ್ಮಿಂಗ್‌ಹ್ಯಾಮ್: ಬಾಂಗ್ಲಾದೇಶದ ವಿರುದ್ಧ ಭರ್ಜರಿ ಶತಕ ದಾಖಲಿಸಿದ ರೋಹಿತ್‌ ಶರ್ಮ ಈ ವೇಳೆ 5 ಸಿಕ್ಸರ್‌ ಸಿಡಿಸಿದ್ದರು. ಈ ಪೈಕಿ ಒಂದು ಸಿಕ್ಸರ್‌ ವೇಳೆ ಚೆಂಡು ಪ್ರೇಕ್ಷಕರ ಗ್ಯಾಲರಿಯಲ್ಲಿದ್ದ ಮೀನಾ ಎಂಬ ಭಾರತದ ವನಿತಾ ಕ್ರಿಕೆಟ್‌ ಅಭಿಮಾನಿಯೊಬ್ಬರಿಗೆ ಹೋಗಿ ಬಡಿದಿತ್ತು. ಇದರಿಂದ ಅವರಿಗೆ ಸ್ವಲ್ಪ ಏಟಾಗಿತ್ತು. ಇದನ್ನು ನೋಡಿದ ರೋಹಿತ್‌ ಶರ್ಮ ಪಂದ್ಯ ಮುಗಿದ ಬಳಿಕ ಮೀನಾ ಅವರನ್ನು ಭೇಟಿ ಮಾಡಿ, ಗಾಯದ ಬಗ್ಗೆ ವಿಚಾರಿಸಿದ್ದಾರೆ. ಜತೆಗೆ ತಮ್ಮ ಹಸ್ತಾಕ್ಷರವುಳ್ಳ ಕ್ಯಾಪ್‌ ಒಂದನ್ನು ನೀಡಿ ಕ್ರೀಡಾಸ್ಫೂರ್ತಿ ಮೆರೆದಿದ್ದಾರೆ. ರೋಹಿತ್‌ ಆ ಅಭಿಮಾನಿ ಜತೆಗೆ ಮಾತನಾಡುತ್ತಿರುವ ಚಿತ್ರವನ್ನು ಬಿಸಿಸಿಐ ತನ್ನ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ಪೋಸ್ಟ್‌ ಮಾಡಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next