ನಾಗ್ಪುರ: ಟೀಂ ಇಂಡಿಯಾದ ನಾಯಕ ರೋಹಿತ್ ಶರ್ಮಾ ಅವರು ಬಾರ್ಡರ್ – ಗಾವಸ್ಕರ್ ಟ್ರೋಫಿಯ ಮೊದಲ ಪಂದ್ಯದಲ್ಲೇ ಶತಕ ಬಾರಿಸಿ ಮಿಂಚಿದ್ದಾರೆ.
Advertisement
ಒಂದೆಡೆ ವಿಕೆಟ್ ಬೀಳುತ್ತಿದ್ದರೂ ಮತ್ತೊಂದೆಡೆ ನಿಧಾನವಾಗಿ ಬ್ಯಾಟ್ ಬೀಸಿದ ರೋಹಿತ್ ಶರ್ಮಾ 120 ರನ್ ಗಳಿಸಿದರು. ಮೊದಲ ದಿನದಾಟದಲ್ಲಿ ವೇಗವಾಗಿ ಬ್ಯಾಟ್ ಬೀಸಿದ್ದ ರೋಹಿತ್ ಇಂದು ಪರಿಸ್ಥಿತಿಗೆ ತಕ್ಕಂತೆ ಕ್ರೀಸ್ ಕಚ್ಚಿ ನಿಂತು ಆಡಿದರು.
9ನೇ ಟೆಸ್ಟ್ ಶತಕ ಗಳಿಸಿದ ರೋಹಿತ್ ಇಂದು ಎರಡು ಸಿಕ್ಸರ್ ಬಾರಿಸಿದರು. ಅಲ್ಲದೆ ನಾಯಕನಾಗಿ ಏಕದಿನ, ಟೆಸ್ಟ್ ಮತ್ತು ಟಿ20 ಶತಕ ಗಳಿಸಿದ ಏಕೈಕ ಭಾರತೀಯ ಆಟಗಾರ ಎಂಬ ದಾಖಲೆಗೂ ರೋಹಿತ್ ಪಾತ್ರರಾದರು.