Advertisement

ರೋಹಿಣಿ ವರ್ಗ: ತೀರ್ಪು ಕಾಯ್ದಿರಿಸಿದ ಸಿಎಟಿ

06:45 AM Apr 03, 2018 | Team Udayavani |

ಬೆಂಗಳೂರು: ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ಹಾಸನ ಜಿಲ್ಲಾಧಿಕಾರಿ ಹುದ್ದೆಯಿಂದ ವರ್ಗಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಆಡಳಿತಾತ್ಮಕ ನ್ಯಾಯಮಂಡಳಿ ( ಸಿಎಟಿ ) ತೀರ್ಪು ಕಾಯ್ದಿರಿಸಿದೆ.

Advertisement

ರಾಜ್ಯಸರ್ಕಾರದ ವರ್ಗಾವಣೆ ಆದೇಶದ ಕ್ರಮ ಪ್ರಶ್ನಿಸಿರುವ ರೋಹಿಣಿ ಸಿಂಧೂರಿ ಸಲ್ಲಿಸಿರುವ ಅರ್ಜಿಯನ್ನು ಪುನರ್‌ ವಿಚಾರಣೆ ನಡೆಸುವಂತೆ ಹೈಕೋರ್ಟ್‌ ಸೂಚನೆ ಹಿನ್ನೆಲೆಯಲ್ಲಿ, ಸೋಮವಾರ ವಿಚಾರಣೆ ನಡೆಸಿದ ಸಿಎಟಿ, ವಾದ -ಪ್ರತಿವಾದ ಆಲಿಸಿ ತೀರ್ಪು ಕಾಯ್ದಿರಿಸಿತು.ಜತೆಗೆ ಅಂತಿಮ ಆದೇಶದವರೆಗೂ ಹಾಸನ ಜಿಲ್ಲಾಧಿಕಾರಿಯಾಗಿ ಮುಂದುವರೆಯಬಹುದು ಎಂದು ನಿರ್ದೇಶಿಸಿತು.

ರೋಹಿಣಿ ಸಿಂಧೂರಿ ಪರ ವಾದಿಸದ ಹಿರಿಯ ವಕೀಲ ಸುಬ್ರಹ್ಮಣ್ಯ ಜೋಯಿಸ್‌, ರಾಜ್ಯಸರ್ಕಾರ ರಾಜಕೀಯ ಉದ್ದೇಶದಿಂದ ಅರ್ಜಿದಾರರನ್ನು ಏಕಾಏಕಿ ವರ್ಗಾವಣೆಗೊಳಿಸಿದೆ. ಈ ಕ್ರಮ ಕಾನೂನುಬಾಹಿರವಾಗಿದೆ. ಹೀಗಾಗಿ ವರ್ಗಾವಣೆ ಆದೇಶ ರದ್ದುಪಡಿಸುವಂತೆ ಕೋರಿದರು.

Advertisement

Udayavani is now on Telegram. Click here to join our channel and stay updated with the latest news.

Next