Advertisement
ನಿರಾಶ್ರಿತರ ಶಿಬಿರಗಳಲ್ಲಿರುವ ಇಬ್ಬರಿಗೆ ಕೋವಿಡ್ ಸೋಂಕು ತಗಲಿರುವುದು ಗುರುವಾರ ದೃಢಪಟ್ಟಿದೆ. ಬರೀ ಎರಡು ಪ್ರಕರಣವಾಗಿದ್ದರೂ ನಿರಾಶ್ರಿತ ಶಿಬಿರಗಳಲ್ಲಿರುವವರೆಲ್ಲ ಭಯದಿಂದ ನಡುಗ ತೊಡಗಿದ್ದಾರೆ. ಇಲ್ಲಿರುವವರ ಪರಿಸ್ಥಿತಿ ನಿಜಕ್ಕೂ ಯಾತನಾಮಯವಾಗಿದೆ ಎಂದು ವಿಶ್ವಸಂಸ್ಥೆಯ ವಲಸೆ ವಿಭಾಗ ಕೂಡ ಹೇಳಿದೆ.
Related Articles
Advertisement
2,000 ವೆಂಟಿಲೇಟರ್‌ಗಳ ದೇಶದಲ್ಲಿ ಒಟ್ಟಾರೆಯಾಗಿ ಇರುವುದು 2,000 ವೆಂಟಿಲೇಟರ್‌ಗಳು. ರೋಹಿಂಗ್ಯ ಕ್ಯಾಂಪ್‌ಗ್ಳಲ್ಲಿ ಎಲ್ಲಿಯಾದರೂ ಕೋವಿಡ್ ಹರಡಲು ತೊಡಗಿದರೆ ಬಾಂಗ್ಲಾದೇಶದ ವೈದ್ಯಕೀಯ ಸೌಲಭ್ಯಗಳು ಯಾವ ಮೂಲೆಗೂ ಸಾಲದು. ಐಸಿಯು ಸೌಲಭ್ಯಗಳೂ ಸಾಕಷ್ಟಿಲ್ಲ. ಹೀಗಾಗಿ ಕ್ಯಾಂಪ್‌ಗ್ಳನ್ನು ಸುರಕ್ಷಿತವಾಗಿಡಲು ದೇವರನ್ನು ಪ್ರಾರ್ಥಿಸುವುದೆಂದೇ ನಮ್ಮ ಮುಂದಿರುವ ಮಾರ್ಗ ಎಂದು ಮಾರ್ಮಿಕವಾಗಿ ಹೇಳುತ್ತಾರೆ ಸೇವ್ ದ ಚಿಲ್ಡ್ರನ್ಸ್ ಹೆಲ್ತ್‌ನ ನಿರ್ದೇಶಕಿ ಡಾ| ಶಮೀಮ್ ಜಹಾನ್. ವೈರಸ್ ಜಗತ್ತಿನ ಅತಿ ದೊಡ್ಡ ನಿರಾಶ್ರಿತ ಶಿಬಿರಗಳಲ್ಲಿ ಒಂದಾಗಿರುವ ಕಾಕ್ಸ್ ಬಜಾರ್‌ಗೆ ಪ್ರವೇಶಿಸಿದೆ. ಸಾವಿರಾರು ಮಂದಿ ವೈರಸ್‌ಗೆ ಬಲಿಯಾಗುವ ಅಪಾಯ ಗೋಚರಿಸುತ್ತಿದೆ. ಹೀಗಾದರೆ ಬಾಂಗ್ಲಾದೇಶ ದಶಕಗಳಷ್ಟು ಹಿಂದಕ್ಕೆ ಹೋಗಲಿದೆ ಎಂದಿದ್ದಾರೆ ಡಾ| ಶಮೀಮ್. ಇಂಟರ್‌ನೆಟ್ ಇಲ್ಲ
ಸುಳ್ಳು ಸಂದೇಶಗಳನ್ನು ಹರಡುವುದನ್ನು ತಡೆಯುವ ಸಲುವಾಗಿ ಬಾಂಗ್ಲಾ ಸರಕಾರ ನಿರಾಶ್ರಿತರ ಶಿಬಿರಗಳಲ್ಲಿ ಇಂಟರ್‌ನೆಟ್ ನಿಷೇಧಿಸಿದೆ. ಆದರೆ ಕೋವಿಡ್ ಹಾವಳಿ ಸಂದರ್ಭದಲ್ಲಿ ಇದರಿಂದ ಬಹಳ ಸಮಸ್ಯೆ ಎದುರಾಗಿದೆ. ಜನರಿಗೆ ವೈರಸ್‌ನ ಅಪಾಯದ ಕುರಿತು ನೈಜ ಮಾಹಿತಿಯನ್ನು ನೀಡಲು ಸಾಧ್ಯವಾಗುತ್ತಿಲ್ಲ. ಆರೋಗ್ಯ ರಕ್ಷಣೆಗೆ ವಹಿಸಿಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳನ್ನು ತಿಳಿದುಕೊಳ್ಳಲು ಜನರಿಗೆ ಆಗುತ್ತಿಲ್ಲ. ಕೋವಿಡ್‌ಗೆ ಹೆದರಿ ನಿರಾಶ್ರಿತರಿಗಾಗಿ ದುಡಿಯುತ್ತಿರುವ ಸ್ವಯಂ ಸೇವಕರು ಅಲ್ಲಿಂದ ಕಾಲ್ಕಿತ್ತಿದ್ದಾರೆ. ಹೀಗೆ ಸಮಸ್ಯೆಗಳ ಮೇಲೆ ಸಮಸ್ಯೆಗಳು ಎರಗಿರುವುದರಿಂದ ರೋಹಿಂಗ್ಯಗಳು ಕಂಗಾಲಾಗಿದ್ದಾರೆ.