Advertisement

ರೋಹಿಂಗೋ ಮುಸ್ಲಿಂರಿಗೆ ನ್ಯಾಯ ಒದಗಿಸಲು ಆಗ್ರಹ

09:49 AM Sep 09, 2017 | Team Udayavani |

ಕಲಬುರಗಿ: ಮಾಯನ್ಮಾರ್‌ದಲ್ಲಿ ರೋಹಿಂಗೋ ಮುಸ್ಲಿಂರ ಮೇಲೆ ನಡೆಯುತ್ತಿರುವ ದಬ್ಟಾಳಿಕೆ, ಕೊಲೆಗಳಿಗೆ ತೊಂದರೆಗೊಳಗಾದ ಮುಸ್ಲಿಂರು ದೇಶ ಬಿಟ್ಟು ವಲಸೆ ಹೋಗಬೇಕಾದ ಸ್ಥಿತಿ ಬಂದಿದ್ದು ಅವರಿಗೆ ನ್ಯಾಯ, ರಕ್ಷಣೆ ಒದಗಿಸುವ ನಿಟ್ಟಿನಲ್ಲಿ ಭಾರತ ಸರ್ಕಾರ ಒತ್ತಡ ಹೇರಬೇಕೆಂದು ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಲ್ಲಿ ಮರ್ಕಜ್‌ ಸೀರತ್‌ ಜಿಲ್ಲಾ ಸಮಿತಿ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.

Advertisement

ಮಯನ್ಮಾರ್‌ದಲ್ಲಿ ಕಾರಣವಿಲ್ಲದೇ ಅಲ್ಲಿನ ಮುಸ್ಲಿಂರ ಮೇಲೆ ಅಮಾನವೀಯ ಕೃತ್ಯಗಳಾದ ಬಲಾತ್ಕಾರ, ಅಪಹರಣ ಸೇರಿದಂತೆ ಮುಗ್ಧ ಜನರ ಮೇಲೆ ದಾಳಿ ನಡೆಯುತ್ತಿದೆ ಎಂಬ ಬಗ್ಗೆ ಅಂತರರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿ ಬಂದಿದೆ. ಮುಗ್ಧ ಜನರ ಮೇಲೆ ನಡೆಯುತ್ತಿರುವ ಅಮಾನುಷ ಕೃತ್ಯವನ್ನು ತಡೆಯಬೇಕೆಂದು ಆಗ್ರಹಿಸಿ ಮನವಿ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ಸಮಿತಿಯ ಉಪಾಧ್ಯಕ್ಷ ಹಾಗೂ ಕುಡಾ ಅಧ್ಯಕ್ಷ ಮಹ್ಮದ ಅಸಗರ್‌ ಚುಲಬುಲ್‌, ಸಂಯುಕ್ತ ಮುಸ್ಲಿಂ ಸಂಘಟನೆಯ ಅಧ್ಯಕ್ಷ ಅಬ್ದುಲ್‌ ಜಬ್ಟಾರ್‌ ಗೋಳಾ, ನ್ಯಾಯವಾದಿ, ಹಿರಿಯ ಪತ್ರಕರ್ತ ಅಜೀಜುಲ್ಲಾ ಸರಮಸ್ತ, ಐಯುಎಂಎಲ್‌ ರಾಜ್ಯ ಕಾರ್ಯದರ್ಶಿ ಮೌಲಾನಾ ಮಹ್ಮದ್‌ ನೂಹ್‌, ಜಮಾತೆ-ಇ-ಅಹ್ಲೆಹದೀಸ್‌ನ ಅಧ್ಯಕ್ಷ ಬಾಬಾ ನಜರ್‌ ಮಹ್ಮದ್‌ ಖಾನ್‌, ಜಮಾತೆ ಉಲೆಮಾ ಅಧ್ಯಕ್ಷ ಮೌಲಾನಾ ಶರೀಫ್‌ ಅಹ್ಮದ್‌ ಮಜಹರಿ ಹಾಗೂ ಮಾಜಿ ಮೇಯರ್‌ ಮಹ್ಮದ ಜಾಹೇದ್‌ ಹಾಗೂ ಇತರರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next