Advertisement

ಬೋಪಣ್ಣ-ದಿವಿಜ್‌ ಜೋಡಿಗೆ ಪ್ರಶಸ್ತಿ

12:45 AM Jan 06, 2019 | |

ಪುಣೆ: ರೋಹನ್‌ ಬೋಪಣ್ಣ-ದಿವಿಜ್‌ ಶರಣ್‌ ಜೋಡಿ “ಟಾಟಾ ಓಪನ್‌ ಮಹಾರಾಷ್ಟ್ರ ಟೆನಿಸ್‌ ಟೂರ್ನಿ’ಯ ಡಬಲ್ಸ್‌ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಶನಿವಾರ ನಡೆದ ಫೈನಲ್‌ನಲ್ಲಿ ಭಾರತೀಯ ಜೋಡಿ ಬ್ರಿಟನ್ನಿನ ಲ್ಯೂಕ್‌ ಬಾಂಬ್ರಿಜ್‌-ಜಾನಿ ಓ’ಮಾರ ವಿರುದ್ಧ 6-3, 6-4 ನೇರ ಸೆಟ್‌ಗಳಿಂದ ಗೆದ್ದು ಬಂದಿತು.

Advertisement

ಇದು ಬೋಪಣ್ಣ ಗೆದ್ದ 18ನೇ ಎಟಿಪಿ ಟೂರ್‌ ಪ್ರಶಸ್ತಿ. ಹಾಗೆಯೇ ದಿವಿಜ್‌ ಶರಣ್‌ಗೆ ಒಲಿದ ತವರಿನಂಗಳದ ಮೊದಲ ಪ್ರಶಸ್ತಿ.

“ಮುಂಬರುವ ಆಸ್ಟ್ರೇಲಿಯನ್‌ ಓಪನ್‌ ಗ್ರ್ಯಾನ್‌ಸ್ಲಾಮ್‌ ಹಿನ್ನೆಲೆಯಲ್ಲಿ ಈ ಪ್ರಶಸ್ತಿ ಅತ್ಯಂತ ಮಹತ್ವದ್ದಾಗಿದೆ. ದಿವಿಜ್‌ ಕೂಡ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ’ ಎಂದು ಬೋಪಣ್ಣ ಪ್ರತಿಕ್ರಿಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next