Advertisement
ಇದರೊಂದಿಗೆ ಫೆಡರರ್ ವಿಂಬಲ್ಡನ್‌ನಲ್ಲಿ ಸತತ 32 ಸೆಟ್‌ಗಳನ್ನು ಗೆದ್ದಂತಾಯಿತು. 2005-06ರ ಅವಧಿಯಲ್ಲಿ 34 ಸೆಟ್ ಗೆಲ್ಲುವ ಮೂಲಕ ಫೆಡರರ್ ದಾಖಲೆ ನಿರ್ಮಿಸಿದ್ದರು. ಕೆನಡದ ಬಿಗ್ ಸರ್ವರ್ ಮಿಲೋಸ್ ರಾನಿಕ್ ಕೂಡ ಎಂಟರ ಸುತ್ತು ಪ್ರವೇಶಿಸಿದ್ದು, ಅಮೆರಿಕದ ಮೆಕೆಂಜಿ ಮೆಕ್‌ಡೊನಾಲ್ಡ್ ವಿರುದ್ಧ 6-3, 6-4, 6-7 (5-7), 6-2 ಅಂತರದಿಂದ ಗೆದ್ದು ಬಂದರು.
ವನಿತೆಯರ ಸಿಂಗಲ್ಸ್‌ನಲ್ಲಿ ಸೆರೆನಾ ವಿಲಿಯಮ್ಸ್, ಜೆಲೆನಾ ಒಸ್ಟಾಪೆಂಕೊ, ಜೂಲಿಯಾ ಜಾರ್ಜಸ್, ಆ್ಯಂಜೆಲಿಕ್ ಕೆರ್ಬರ್, ಡರಿಯಾ ಕಸತ್ಕಿನಾ ಕ್ವಾರ್ಟರ್ ಫೈನಲ್ ತಲುಪಿದ್ದಾರೆ. ಸೆರೆನಾ ವಿಲಿಯಮ್ಸ್ ರಶ್ಯದ ಅರ್ಹತಾ ಆಟಗಾರ್ತಿ ಎವೆYನಿಯಾ ರೊಡಿನಾ ಅವರನ್ನು ಕೇವಲ 62 ನಿಮಿಷಗಳಲ್ಲಿ 6-2, 6-2 ನೇರ ಸೆಟ್‌ಗಳಲ್ಲಿ ಮಣಿಸಿದರು. ಲಾತ್ವಿಯಾದ ಜೆಲೆನಾ ಒಸ್ಟಾಪೆಂಕೊ ಬೆಲರೂಸ್‌ನ ಅಲೆಕ್ಸಾಂಡ್ರಾ ಸಾನ್ಸೋವಿಕ್ ಅವರನ್ನು 7-6 (7-4), 6-0 ಅಂತರದಿಂದ ಪರಾಭವಗೊಳಿಸಿದರೆ, ರಶ್ಯದ ಡರಿಯಾ ಕಸತ್ಕಿನಾ ಬೆಲ್ಜಿಯಂನ ಅಲಿಸನ್ ವಾನ್ ಯುಟ್ವಾಂಕ್ ಅವರನ್ನು 6-7 (6-8), 6-3, 6-2 ಅಂತರದಿಂದ ಮಣಿಸಿದರು.
ಜರ್ಮನಿಯ ಜೂಲಿಯಾ ಜಾರ್ಜಸ್ ಕ್ರೊವೇಶಿಯದ ಡೋನಾ ವೆಕಿಕ್ ವಿರುದ್ಧ 6-3, 6-2 ಅಂತರದ ಜಯ ಸಾಧಿಸಿ ಮೊದಲ ಗ್ರ್ಯಾನ್‌ಸ್ಲಾಮ್ ಕ್ವಾರ್ಟರ್ ಫೈನಲ್ ತಲುಪಿದರು.