ಮೆಲ್ಬರ್ನ್: ವರ್ಷಾರಂಭದ ಆಸ್ಟ್ರೇಲಿಯನ್ ಓಪನ್ ಗ್ರ್ಯಾನ್‌ಸ್ಲಾಮ್ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುವವರ ಯಾದಿಯನ್ನು ಕೂಟದ ಸಂಘಟಕರು ಗುರುವಾರ ಪ್ರಕಟಿಸಿದ್ದಾರೆ. ಇದರಲ್ಲಿ ರೋಜರ್ ಫೆಡರರ್ ಮತ್ತು ಸಾನಿಯಾ ಮಿರ್ಜಾ ಹೆಸರು ಕಾಣಿಸಿಕೊಂಡಿದೆ.
ಆದರೆ ಮಂಡಿ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ರೋಜರ್ ಫೆಡರರ್ ಈ ಕೂಟದಲ್ಲಿ ಆಡುವ ಸಾಧ್ಯತೆ ಇಲ್ಲ ಎಂದು ಈಗಾಗಲೇ ತಿಳಿಸಿ ದ್ದಾರೆ. ಆದರೂ ಅವರ ಹೆಸರು ಕಂಡುಬಂದಿರುವುದು ಅಚ್ಚರಿಗೆ ಕಾರಣವಾಗಿದೆ. ಸಾನಿಯಾ ಆಡು ವುದು ಕೂಡ ಖಾತ್ರಿಯಾಗಿಲ್ಲ. ಒಟ್ಟು 104 ಆಟಗಾರರಿಗೆ ಇಲ್ಲಿ ನೇರ ಪ್ರವೇಶ ಸಿಗಲಿದೆ.
ಆಸ್ಟ್ರೇಲಿಯನ್ ಓಪನ್‌ನಲ್ಲಿ ಆಡ ಲಿರುವ ಪುರುಷರ ಹಾಗೂ ವನಿತಾ ವಿಭಾಗದ ಅಗ್ರ 10 ಆಟಗಾರರ ಯಾದಿಯನ್ನೂ ಪ್ರಕಟಿಸಲಾಗಿದೆ.
ಪುರುಷರ ಸಿಂಗಲ್ಸ್: 1. ನೊವಾಕ್ ಜೊಕೋವಿಕ್, 2. ರಫೆಲ್ ನಡಾಲ್, 3. ಡೊಮಿನಿಕ್ ಥೀಮ್, 4. ಡ್ಯಾನಿಲ್ ಮೆಡ್ವೆಡೇವ್, 5. ರೋಜರ್ ಫೆಡರರ್, 6. ಸ್ಟೆಫನಸ್ ಸಿಸಿಪಸ್, 7. ಅಲೆಕ್ಸಾಂಡರ್ ಜ್ವೆರೇವ್, 8. ಆ್ಯಂಡ್ರೆ ರುಬ್ಲೇವ್, 9. ಡೀಗೊ ಶಾರ್ಟ್ಸ್ಮನ್, 10. ಮ್ಯಾಟಿಯೊ ಬೆರೆಟಿನಿ.
ವನಿತಾ ಸಿಂಗಲ್ಸ್: 1.ಆ್ಯಶ್ಲಿ ಬಾರ್ಟಿ, 2. ಸಿಮೋನಾ ಹಾಲೆಪ್, 3. ನವೋಮಿ ಒಸಾಕಾ, 4. ಸೋಫಿಯಾ ಕೆನಿನ್, 5. ಎಲಿನಾ ಸ್ವಿಟೋಲಿನಾ, 6. ಕ್ಯಾರೋಲಿನಾ ಪ್ಲಿಸ್ಕೋವಾ, 7. ಬಿಯಾಂಕಾ ಆ್ಯಂಡ್ರಿಸ್ಕೂ, 8. ಪೆಟ್ರಾ ಕ್ವಿಟೋವಾ, 9. ಕಿಕಿ ಬೆರ್ಟೆನ್ಸ್, 10. ಅರಿನಾ ಸಬಲೆಂಕಾ.