ಮುಂಬೈ : ಎ. 30 ರ ಒಳಗಾಗಿ ಬಾಲಿವುಡ್ ನಟ ಸಲ್ಮಾನ್ ಖಾನ್‌ನನ್ನು ಕೊಲ್ಲುವುದಾಗಿ ಬೆದರಿಕೆ ಕರೆ ಮಾಡಿದ್ದವನನ್ನು ಪೋಲಿಸರು ಬಂಧಿಸಿದ್ದಾರೆ.
ಎ.10ರಂದು ಮುಂಬೈನ ಪೋಲಿಸ್ ಕಂಟ್ರೋಲ್ ರೂಂಗೆ ಫೋನ್ ಕರೆ ಮಾಡಿದ್ದ ವ್ಯಕ್ತಿಯೊಬ್ಬ ತನ್ನ ಹೆಸರು ರಾಕಿ ಭಾಯಿ, ರಾಜಸ್ಥಾನದ ಜೋಧ್‌ಪುರದಿಂದ ಕರೆ ಮಾಡುತ್ತಿದ್ದೇನೆ. ತಾನೊಬ್ಬ ಗೋ ರಕ್ಷಕನಾಗಿದ್ದು, ನಟ ಸಲ್ಮಾನ್ ಖಾನ್‌ನನ್ನು ಎ.30 ರ ಒಳಗಾಗಿ ಕೊಲ್ಲುತ್ತೇನೆ ಎಂದು ಬೆದರಿಕೆಯೊಡ್ಡಿದ್ದ.
ಈ ಕರೆಯ ಬೆನ್ನು ಬಿದ್ದ ಮುಂಬೈ ಪೋಲಿಸರು ಅಪ್ರಾಪ್ತನೊಬ್ಬನನ್ನು ಬಂಧಿಸಿದ್ದಾರೆ. ʻಅಪ್ರಾಪ್ತ ಬಾಲಕನೊಬ್ಬ ತನ್ನನ್ನು ರಾಕಿ ಭಾಯಿ ಎಂದು ಪರಿಚಯಿಸಿಕೊಂಡು ಸಲ್ಮಾನ್ ಖಾನ್‌ರನ್ನು ಕೊಲ್ಲುವುದಾಗಿ ಬೆದರಿಕೆ ಕರೆ ಮಾಡಿದ್ದ. ಇದೀಗ ಆತನನ್ನು ಬಂಧಿಸಲಾಗಿದ್ದು ಯಾವುದೇ ಗಂಭೀರತೆಯಿಂದ ಕರೆ ಮಡಿದ್ದಲ್ಲ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ. ಆದರೆ ತನಿಖೆ ಬಳಿಕವಷ್ಟೇ ಈತ ಯಾವ ಉದ್ದೇಶಕ್ಕಾಗಿ ಕರೆ ಮಾಡಿದ್ದಾನೆ ಎಂಬುದು ಖಚಿತವಾಗಿ ತಿಳಿಯಬಹುದಾಗಿದೆʼ ಎಂದು ಪೋಲಿಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಳೆದ ಕೆಲ ದಿನಗಳಿಂದ ಸಲ್ಮಾನ್ ಖಾನ್‌ಗೆ ಮೇಲಿಂದ ಮೇಲೆ ಬೆದರಿಕೆ ಸಂದೇಶಗಳು, ಕರೆಗಳು ಬರುತ್ತಿದ್ದು ಅವುಗಳ ಪೈಕಿ ಕೆಲವೊಂದು ಹುಸಿ ಕರೆಗಳೆಂಬುದು ತನಿಖೆ ವೇಳೆ ತಿಳಿದುಬಂದಿದೆ. ಆದರೂ ಕೆಲ ಕರೆಗಳಿಗೆ ಭೂಗತ ಲೋಕದ ನಂಟಿರುವುದು ದೃಢಪಟ್ಟಿದ್ದು ಸಲ್ಮಾನ್ ನಿದ್ದೆಗೆಡಿಸಿವೆ.
ಈ ಕಾರಣದಿಂದಾಗಿ ಕಳೆದ ವಾರವಷ್ಟೇ ಸಲ್ಮಾನ್ ಬುಲೆಟ್ ಪ್ರೂಫ್ ಕಾರು ಕಾರು ಖರೀದಿಸಿ ಸುದ್ದಿಯಾಗಿದ್ದರು.