Advertisement

“ಸಂಯುಕ್ತ-2′ಚಿತ್ರದ ಆಡಿಯೋ ರಿಲೀಸ್‌ ಮಾಡಿದ ರಾಕಿಂಗ್ ಸ್ಟಾರ್

02:44 PM Nov 05, 2017 | Team Udayavani |

ಸಿನಿಮಾದ ಆಡಿಯೋ ಬಿಡುಗಡೆ ಎಂದರೆ ತುಂಬಾನೇ ಅದ್ದೂರಿಯಾಗಿ, ಜನರ ಮಧ್ಯೆ ನಡೆಯಬೇಕೆಂಬ ಸಂಪ್ರದಾಯವಿತ್ತು. ಅದಕ್ಕೆ ಸರಿಯಾಗಿ ಹಿಂದೆಲ್ಲಾ ಆಡಿಯೋ ಬಿಡುಗಡೆಗಳು ಕಲರ್‌ಫ‌ುಲ್‌ ಆಗಿ ಓಪನ್‌ ಗ್ರೌಂಡ್‌ನ‌ಲ್ಲಿ ನಡೆಯುವ ಮೂಲಕ ಅಭಿಮಾನಿಗಳಿಗೂ ಖುಷಿ ಸಿಗುತ್ತಿತ್ತು. ಆದರೆ, ಈಗ ಅದ್ಧೂರಿ ಆಡಿಯೋ ರಿಲೀಸ್‌ ಕಾರ್ಯಕ್ರಮಗಳು ಅಪರೂಪವಾಗಿಬಿಟ್ಟಿವೆ.

Advertisement

ಸಣ್ಣ ಸಭಾಂಗಣಕ್ಕೆ ಆಡಿಯೋ ರಿಲೀಸ್‌ ಖುಷಿ ಮುಗಿದು ಹೋಗುತ್ತದೆ. ಹೀಗಿರುವಾಗಲೇ “ಸಂಯುಕ್ತ-2′ ಚಿತ್ರತಂಡ ಚಿತ್ರದ ಆಡಿಯೋ ಬಿಡುಗಡೆಯನ್ನು ಅದ್ಧೂರಿಯಾಗಿ ಬಿಡುಗಡೆ ಮಾಡಿತು. ಬಸವೇಶ್ವರ ನಗರ ಬಳಿಯ ಮೈದಾನವೊಂದರಲ್ಲಿ ಹಾಕಲಾದ ಕಲರ್‌ಫ‌ುಲ್‌ ಸೆಟ್‌ನಲ್ಲಿ ಸಾವಿರಾರು ಮಂದಿಯ ಮುಂದೆ ಚಿತ್ರದ ಆಡಿಯೋ ಬಿಡುಗಡೆಯಾಯಿತು.

ನಟ ಯಶ್‌ ಈ ಆಡಿಯೋ ರಿಲೀಸ್‌ಗೆ ಅತಿಥಿಯಾಗಿ ಬಂದಿದ್ದರು. ಓಪನ್‌ ಗ್ರೌಂಡ್‌ಗೆ ಯಶ್‌ ಬರುತ್ತಾರೆಂದರೆ ಅವರನ್ನು ನೋಡಲು ಬರುವ ಜನರನ್ನು ತಡೆಯಲಾಗುತ್ತಾ? ಸಾವಿರಾರು ಮಂದಿ ಆ ಕಾರ್ಯಕ್ರಮವನ್ನು ಕಣ್ತುಂಬಿಕೊಂಡರು. ಯಶ್‌ ಅಲ್ಲದೇ ಶಾಸಕ ಸೋಮಶೇಖರ್‌ ಸೇರಿದಂತೆ ಅನೇಕ ಮಂದಿ ಈ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ್ದರು. 

ಚೇತನ್‌ ಚಂದ್ರ ಈ ಚಿತ್ರದ ನಾಯಕ. ನೇಹಾ ಪಾಟೀಲ್‌ ಹಾಗೂ ಐಶ್ವರ್ಯಾ ಸಿಂಧೋಗಿ ನಾಯಕಿರು. ಡಾ.ಮಂಜುನಾಥ್‌ ನಿರ್ಮಿಸಿರುವ ಈ ಸಿನಿಮಾವನ್ನು ಅಭಿರಾಮ್‌ ನಿರ್ಮಿಸಿದ್ದಾರೆ. ರವಿಚಂದ್ರ ಅವರ ಸಂಗೀತ ಚಿತ್ರಕ್ಕಿದೆ. ಚಿತ್ರ ನವೆಂಬರ್‌ 10 ರಂದು ತೆರೆಕಾಣುತ್ತಿದೆ. 

Advertisement

Udayavani is now on Telegram. Click here to join our channel and stay updated with the latest news.

Next