ಕಾಬೂಲ್ : ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರ ಪ್ರಾಬಲ್ಯ ಮತ್ತಷ್ಟು ಹೆಚ್ಚಾಗುತ್ತಿದೆ. ಅದಕ್ಕೆ ಪೂರಕವಾಗಿ ಉಗ್ರರು ಸಿಡಿಸಿದ ಮೂರು ರಾಕೆಟ್‌ಗಳ ಪೈಕಿ ಒಂದು ಅಧ್ಯಕ್ಷ ಅಶ್ರಫ್ ಘನಿ ಅವರ ಅರಮನೆ ಸಮೀಪವೇ ಬಿದ್ದಿದೆ. ಈ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ.
ಘಟನೆಯ ಬಗ್ಗೆ ಯಾರೂ ಹೊಣೆ ಹೊತ್ತುಕೊಳ್ಳದೇ ಇದ್ದರೂ, ತಾಲಿಬಾನಿಗಳೇ ಅದನ್ನು ನಡೆಸಿದ್ದು ಖಚಿತವಾಗಿದೆ.
ಘಟನೆಯನ್ನು ಖಂಡಿಸಿರುವ ಅಫ್ಘಾನಿಸ್ತಾನದ ಅಧ್ಯಕ್ಷ ಅಶ್ರಫ್ ಘನಿ, ತಾಲಿಬಾನ್‌ಗೆ ದೇಶದಲ್ಲಿ ಶಾಂತಿ ಸ್ಥಾಪಿಸುವ ಯಾವುದೇ ಉದ್ದೇಶವಿಲ್ಲ. ಪ್ರಸಕ್ತ ಸಾಲಿನ ಬಕ್ರೀದ್, “ಸಂಘರ್ಷದಲ್ಲಿ ಹುತಾತ್ಮರಾದ ಯೋಧರಿಗೆ ಅರ್ಪಣೆ’ ಎಂದು ಹೇಳಿದ್ದಾರೆ.
ಇದನ್ನೂ ಓದಿ :ಪಿಎಂ-ಕಿಸಾನ್ ಯೋಜನೆ : ದೇಶದ 42 ಲಕ್ಷ ರೈತರಿಗೆ 3 ಸಾವಿರ ಕೋಟಿ ರೂ. ನೀಡಿಕೆ
ಮತ್ತೂಂದು ಬೆಳವಣಿಗೆಯಲ್ಲಿ ಅಫ್ಘಾನಿಸ್ತಾನದ ಸೇನಾ ಮುಖ್ಯಸ್ಥ ಜ.ವಲಿ ಮೊಹಮ್ಮದ್ ಅಹ್ಮಾಜೈ ಜು.27ರಿಂದ ಮೂರು ದಿನಗಳ ಕಾಲ ಭಾರತ ಪ್ರವಾಸ ಕೈಗೊಳ್ಳಲಿದ್ದಾರೆ. ಎರಡೂ ದೇಶಗಳ ರಕ್ಷಣಾ ಕ್ಷೇತ್ರದ ಬಾಂಧವ್ಯ ಮತ್ತಷ್ಟು ವೃದ್ಧಿಸಲು ಇದು ಸಹಕಾರಿಯಾಗಲಿದೆ ಎಂದು ನಿರೀಕ್ಷಿಸಲಾಗಿದೆ.