ಗಾಜಾ: ಇಸ್ರೇಲ್, ಪ್ಯಾಲೆಸ್ತೀನ್ ಸಮರ ಈಗ ಇನ್ನೊಂದು ತಿರುವನ್ನು ಪಡೆದಿದ್ದು, ಎರಡೂ ದೇಶಗಳು ಶನಿವಾರ ಪರಸ್ಪರ ಕ್ಷಿಪಣಿ ದಾಳಿ ನಡೆಸಿವೆ. ಮೊದಲು ಇಸ್ರೇಲ್ ವಿರುದ್ಧ 90ಕ್ಕೂ ಹೆಚ್ಚು ರಾಕೆಟ್‌ಗಳನ್ನು ಗಾಜಾ ಬಂಡುಕೋರರು ಉಡಾಯಿಸಿದ್ದಾರೆ. ಇದಕ್ಕೆ ಪ್ರತಿದಾಳಿ ನಡೆಸಿದ ಇಸ್ರೇಲ್ ಗಾಜಾ ಪಟ್ಟಿಯಲ್ಲಿನ ಮೂರು ಸೇನಾನೆಲೆಗಳನ್ನು ಗುರಿ ಮಾಡಿದೆ. ಇಸ್ರೇಲ್ನ ಪ್ರತಿದಾಳಿ ಯಿಂದಾಗಿ ಒಬ್ಬ ಪ್ಯಾಲೆಸ್ತೀನ್ ನಾಗರಿಕ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ. ಆದರೆ ಇಸ್ರೇಲ್ನಲ್ಲಿ ಯಾವುದೇ ಸಾವುನೋವು ಸಂಭವಿಸಿದ ವರದಿಯಾಗಿಲ್ಲ. ಕಳೆದ ತಿಂಗಳು ಇಸ್ರೇಲ್ನಲ್ಲಿ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಈಜಿಪ್ಟ್ ಹಾಗೂ ವಿಶ್ವಸಂಸ್ಥೆಯ ಮಧ್ಯಸ್ಥಿಕೆಯಲ್ಲಿ ಕದನ ವಿರಾಮ ಘೋಷಣೆ ಮಾಡಲಾಗಿತ್ತಾದರೂ, ಚುನಾವಣೆ ಮುಗಿಯುತ್ತಿದ್ದಂತೆಯೇ ಕದನ ವಿರಾಮ ಉಲ್ಲಂಘಿಸಿ ದಾಳಿ ಆರಂಭವಾಗಿದೆ. ಇದರ ಬೆನ್ನಿಗೇ ಶಾಂತಿ ಪ್ರಕ್ರಿಯೆಯೂ ಆರಂಭವಾಗಿದ್ದು, ನಿಯೋಗ ವೊಂದು ಈಜಿಪ್ಟ್ಗೆ ತೆರಳಿ ಶಾಂತಿ ಮಾತುಕತೆ ಆರಂಭಿಸಿದೆ.