Advertisement

ಬಂಡೆ ಶೌರ್ಯ ಪ್ರಶಸ್ತಿಗೆ ಅರ್ಹ

08:19 AM Jan 16, 2019 | Team Udayavani |

ಆಳಂದ: ಹುತಾತ್ಮ ಪಿಎಸ್‌ಐ ಮಲ್ಲಿಕಾರ್ಜುನ ಬಂಡೆ ಅವರ ಸ್ವಾಗ್ರಾಮ ಖಜೂರಿ ಗ್ರಾಮದ ಹೊರವಲಯದ ಕರ್ನಾಟಕ, ಮಹಾರಾಷ್ಟ್ರ ಸಂಪರ್ಕ ಹೆದ್ದಾರಿ ಬದಿಯಲ್ಲಿ ಮಂಗಳವಾರ ಮಾಜಿ ಶಾಸಕ ಬಿ.ಆರ್‌. ಪಾಟೀಲ ಸಹಕಾರದಿಂದ ಬಂಡೆ ಪುತ್ಥಳಿ ಅನಾವರಣ ಮಾಡಲಾಯಿತು.

Advertisement

ನಿವೃತ್ತ ಪೊಲೀಸ ಮಹಾನಿರ್ದೇಶಕ ಶಂಕರ ಬಿದರಿ ಪುತ್ಥಳಿ ಅನಾವರಣ ಕೈಗೊಂಡು ಮಾತನಾಡಿ, ವೀರಪ್ಪನ್‌ ಕಾರ್ಯಾಚರಣೆಯಲ್ಲಿ ಹುತಾತ್ಮರಾದ ಪೊಲೀಸರಿಗಿಂತ‌ ಹುತಾತ್ಮ ಬಂಡೆ ಹೆಚ್ಚಿನ ಜನಪ್ರಿಯತೆ ಪಡೆದಿದ್ದಾರೆ. ಹೀಗಾಗಿ ಇವರ ಕುಟುಂಬಕ್ಕೆ ಹೆಚ್ಚಿನ ಸರ್ಕಾರಿ ಸೌಲಭ್ಯ ದೊರೆಯಿತು. ಆದರೆ ವೀರಪ್ಪನ್‌ ಸೇರಿದಂತೆ ಇನ್ನಿತರ ಕಾರ್ಯಾಚರಣೆಯಲ್ಲಿ ಮಡಿದ ಅಧಿಕಾರಿಗಳು ಮತ್ತು ಸಿಬ್ಬಂದಿ ಕುಟುಂಬಕ್ಕೆ ಇನ್ನೂ ನಿರೀಕ್ಷಿತ ಮಟ್ಟದಲ್ಲಿ ಸೌಲಭ್ಯ ದೊರೆತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.

ಹುತಾತ್ಮ ಬಂಡೆ ಅವರಂಥ ಅಧಿಕಾರಿಗಳು ಸಮಾಜಕ್ಕೆ ಅತ್ಯವಶ್ಯಕ. ಅವರ ಸ್ಮಾರಕ ನಿರ್ಮಾಣ ಹಾಗೂ ಅವರಿಗೆ ಮರಣೋತ್ತರವಾಗಿ ರಾಷ್ಟ್ರದ‌ ಅತ್ಯುನ್ನತ ಶೌರ್ಯ ಪ್ರಶಸ್ತಿ ನೀಡಬೇಕು ಎಂದು ಆಗ್ರಹಿಸಿದರು.

ಸಾನ್ನಿಧ್ಯ ವಹಿಸಿದ್ದ ಉಸ್ತುರಿ-ಧುತ್ತರಗಾಂವ ಮಠದ ಶ್ರೀ ವಿಶ್ವನಾಥ ಕೋರಣೇಶ್ವರ ಸ್ವಾಮೀಜಿ ಮಾತನಾಡಿ, ಹುತಾತ್ಮ ಮಲ್ಲಿಕಾರ್ಜುನ ಬಂಡೆ ಕಾನೂನು ರಕ್ಷಣೆಗಾಗಿ ಹೋರಾಡಿ, ದುಷ್ಟ ಶಕ್ತಿಗಳನ್ನು ಸದೆಬಡೆಯಲು ಹೋದಾಗ ಪ್ರಾಣ ತ್ಯಾಗ ಮಾಡಿದ್ದಾರೆ. ಇದು ಬಹುದೊಡ್ಡ ಆದರ್ಶ ಎಂದರು.

ಜಿಲ್ಲಾ ಪೊಲೀಸ್‌ ವಷ್ಠಾಧಿಕಾರಿ ಎನ್‌. ಶಶಿಕುಮಾರ ಮಾತನಾಡಿ, ಬಂಡೆ ಅವರಂತ ಹುತಾತ್ಮರ ದಿನಾಚರಣೆಯನ್ನು ಸಾರ್ವತ್ರಿಕವಾಗಿ ಆಚರಿಸುವುದು ಇಂದಿನ ಅಗತ್ಯವಾಗಿದೆ. ಕುಟುಂಬದಲ್ಲಿ ಸ್ಮರಣೆ ಮಾಡುವುದಕ್ಕಿಂತ ಸಾರ್ವಜನಿಕವಾಗಿ ಮೂರ್ತಿ ಅನಾವರಣ ಮಾಡುವ ಕಾರ್ಯ ಮಾದರಿಯಾಗಿದೆ ಎಂದು ಹೇಳಿದರು.

Advertisement

ಪುತ್ಥಳಿ ದಾನಿ, ಮಾಜಿ ಶಾಸಕ ಬಿ.ಆರ್‌. ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಲ್ಲಿಕಾರ್ಜುನ ಬಂಡೆ ಅವರ ಬಲಿದಾನದ ಕೆಲಸ ಯುವ ಪೀಳಿಗೆಗೆ ಮಾದರಿಯಾಗಲಿ ಎನ್ನುವ ಉದ್ದೇಶದಿಂದ ಪುತ್ಥಳಿ ಸ್ಥಾಪಿಸಲಾಗಿದೆ ಎಂದರು.

ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಿ. ಪ್ರಕಾಶ, ಡಿವೈಎಸ್‌ಪಿ ಟಿ.ಎಸ್‌. ಸುಲಪಿ ನಿವೃತ್ತ ಡಿವೈಎಸ್‌ಪಿ ಆರ್‌.ಸಿ. ಘಾಳೆ, ಮಲ್ಲಣ್ಣಗೌಡ ಪಾಟೀಲ ಕೋರವಾರ, ಕರಬಸಪ್ಪ ಬಂಡೆ, ಜಿಪಂ ಸದಸ್ಯ ಸಿದ್ದರಾಮ ಪ್ಯಾಟಿ, ತಾಪಂ ಸದಸ್ಯ ಶಿವಪ್ಪ ವಾರಿಕ, ಡಿಸಿಸಿ ಬ್ಯಾಂಕ್‌ ನಿರ್ದೇಶಕ ಅಶೋಕ ಸಾವಳೇಶ್ವರ ವೇದಿಕೆಯಲ್ಲಿದ್ದರು. ಸುತ್ತಲಿನ ಗ್ರಾಮಗಳ ಗ್ರಾಮಸ್ಥರು, ಬಂಡೆ ಅವರ ಮೊಕ್ಕಳು, ಕುಟುಂಬದ ಇನ್ನಿತರ ಸದಸ್ಯರು ಪಾಲ್ಗೊಂಡಿದ್ದರು.

ಭೀಮರಾವ್‌ ಢಗೆ, ಶರಣಪ್ಪ ಹೊಸಮನಿ, ಕರಬಸಪ್ಪ ಸುಲ್ತಾನಪು ಹಾಜರಿದ್ದರು. ಕುಮಾರ ಬಂಡೆ ಸ್ವಾಗತಿಸಿದರು, ಹಣಮಂತ ಶೇರಿ ನಿರೂಪಿಸಿ, ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next