Advertisement
ಜೆನ್‌ರೊಬೋಟಿಕ್ಸ್ ಎಂಬ ಸ್ಟಾರ್ಟ್‌ಅಪ್ ಕಂಪನಿ ಅಭಿವೃದ್ಧಿಪಡಿಸಿರುವ ಈ ರೊಬೋಟ್‌ನ ಪ್ರಾಯೋಗಿಕ ಪರೀಕ್ಷೆ ಯಶಸ್ವಿಯಾಗಿದೆ. ಈ ರೊಬೋಟ್‌ನಲ್ಲಿ ವೈಫೈ, ಬ್ಲೂಟೂಥ್ ವ್ಯವಸ್ಥೆಯೂ ಇದ್ದು, ನಿಯಂತ್ರಣಾ ಫಲಕವನ್ನೂ ಹೊಂದಿದೆ. ರೋಬೋಗೆ ನಾಲ್ಕು ಕೈಗಳು ಮತ್ತು ಬಕೆಟ್ ವ್ಯವಸ್ಥೆ ಅಳವಡಿಸಲಾಗಿದ್ದು, ಅದರ ಮೂಲಕ ತ್ಯಾಜ್ಯವನ್ನು ಹೊರತೆಗೆಯುತ್ತದೆ. ಮೊದಲಿಗೆ 5 ಸಾವಿರ ಚರಂಡಿಗಳನ್ನು ಹೊಂದಿರುವ ತಿರುವನಂತಪುರಂನಲ್ಲಿ ಇದನ್ನು ಬಳಸಲಾಗುತ್ತದೆ. ಒಂದು ಗಂಟೆಯಲ್ಲಿ ನಾಲ್ಕು ಮ್ಯಾನ್ ಹೋಲ್‌ಗಳನ್ನು ಸ್ವತ್ಛಗೊಳಿಸುವ ಸಾಮರ್ಥ್ಯಈ ರೊಬೋಟ್‌ಗಳಿಗಿವೆ.