Advertisement
ಬೀದಿಯ ಧ್ವಜಕ್ಕೆ ಫ್ಲ್ಯಾಗಥಾನ್ ವಂದನೆ
Related Articles
ಇದು 20-50 ಜನರಿರುವ ಒಂದು ತಂಡ. ಸ್ವಾತಂತ್ರ್ಯ ದಿನಾಚರಣೆಯ ನಂತರ ರಸ್ತೆ ಮೇಲೆ ಬಾವುಟವಾಗಲಿ, ತ್ರಿವರ್ಣದ ಬ್ಯಾಂಡ್ ಅಥವಾ ಇನ್ನಾéವುದೇ ಸಂಕೇತವಾಗಲಿ ಕಾಣಿಸಬಾರದು ಎಂಬುದು ಈ ತಂಡದ ಗುರಿ. ಕಿಶೋರ್ ಪಟವರ್ಧನ್ ಮತ್ತು ಸಮಾನ ಮನಸ್ಕರು ಕಳೆದ 4 ವರ್ಷಗಳಿಂದ ಈ ಕೆಲಸ ಮಾಡುತ್ತಿದ್ದಾರೆ.
Advertisement
ನೀವೂ ಜೊತೆಯಾಗಿಈ ಬಾರಿಯೂ ಆ.15ರ ಮಧ್ಯಾಹ್ನ ಇವರೆಲ್ಲ ಕಬ್ಬನ್ ಪಾರ್ಕ್ ಬಳಿ ಸೇರುತ್ತಾರೆ. ಸುಮಾರು 40 ಜನರಿರುವ ಈ ತಂಡದ ಜತೆ ಆಸಕ್ತ ಸಾರ್ವಜನಿಕರು ಕೂಡ ಕೈ ಜೋಡಿಸಬಹುದು. ನಂತರ ಐದಾರು ತಂಡಗಳಾಗಿ ಇವರು 5-6 ಕಿ.ಮೀ ವ್ಯಾಪ್ತಿಯ ಬೀದಿ ಬೀದಿ ಅಲೆದು, ಅಲ್ಲಲ್ಲಿ ಬಿದ್ದಿರುವ ಬಾವುಟಗಳನ್ನು ಎತ್ತುತ್ತಾರೆ. ಸಂಜೆ 6ಕ್ಕೆ ಮತ್ತೆ ಕಬ್ಬನ್‌ಪಾರ್ಕ್‌ಗೆ ತಂಡ ಮರಳುತ್ತದೆ. ಹೀಗೆ ಸಂಗ್ರಹಿಸಲ್ಪಟ್ಟ ಪ್ಲಾಸ್ಟಿಕ್ ಬಾವುಟಗಳನ್ನು ರಿಸೈಕ್ಲಿಂಗ್ ಮಾಡಲಾಗುತ್ತದೆ. ಮೊದಲ ವರ್ಷ ಬೀದಿಯಲ್ಲಿ 700 ಬಾವುಟಗಳು ಸಿಕ್ಕಿದ್ದವು. ನಂತರದ ವರ್ಷಗಳಲ್ಲಿ ಅದು 500, 150ಕ್ಕೆ ಇಳಿಯಿತು. ಒಂದೇ ಒಂದು ಬಾವುಟ ಕೂಡ ರಸ್ತೆಯಲ್ಲಿ ಬೀಳಬಾರದು. ಅಲ್ಲಿಯವರೆಗೂ ನಾವು ಈ ಕೆಲಸವನ್ನು ಮುಂದುವರಿಸಿಕೊಂಡು ಹೋಗುತ್ತೇವೆ. ರಾಷ್ಟ್ರಧ್ವಜ ಬೀದಿಯಲ್ಲಿ ಎಸೆಯಬಹುದಾದ ವಸ್ತುವಲ್ಲ ಎಂಬುದು ಜನರಿಗೆ ಅರ್ಥವಾಗಬೇಕು. ಆಗ ಮಾತ್ರ ನಮ್ಮ ಶ್ರಮ ಸಾರ್ಥಕ.
ಕಿಶೋರ್ ಪಟವರ್ಧನ್, ಫ್ಲ್ಯಾಗಥಾನ್ ಆಯೋಜಕ ಯಾವ್ಯಾವ ಏರಿಯಾ?
ಎಂ.ಜಿ. ರಸ್ತೆ, ಕಸ್ತೂರಬಾ ರಸ್ತೆ, ಸೇಂಟ್ ಮಾರ್ಕ್ಸ್ ರಸ್ತೆ, ರೆಸಿಡೆನ್ಸಿ ರಸ್ತೆ, ವಿಠಲ್ ಮಲ್ಯ ರಸ್ತೆ, ಬ್ರಿಗೇಡ್ ರೋಡ್, ಕಬ್ಬನ್ ರೋಡ್. ರಾಬಿನ್ ಹುಡ್ ಆರ್ಮಿಯ ಕೈತುತ್ತು!
ಹೋರಾಟ ಶತ್ರುವೊಂದಿಗಲ್ಲ, ಹಸಿವಿನೊಂದಿಗೆ!
ರಾಬಿನ್ ಹುಡ್ ಆರ್ಮಿ ಅಂದಾಕ್ಷಣ ಯಾವುದೋ ಶತ್ರುಸೇನೆ ಅಂದುಕೊಳ್ಳಬೇಡಿ. ಇದು ಮದ್ದು ಗುಂಡುಗಳೊಂದಿಗೆ ಗುದ್ದಾಡುವ ಸೈನ್ಯವಲ್ಲ. ನೊಂದವರ ಕಷ್ಟಕ್ಕೆ ಸ್ಪಂದಿಸುವ ಮನಸ್ಸುಗಳು ಸೇರಿ ಕಟ್ಟಿದ ಸೇನೆಯಿದು. ಇವರ ಗುದ್ದಾಟ ಹಸಿವಿನೊಂದಿಗೆ. ಹಸಿದವರಿಗೆ ಊಟ ನೀಡುವುದು, ಉಳಿದು ಹಾಳಾಗುವ ಆಹಾರವನ್ನು ಸಂಗ್ರಹಿಸಿ ತಲುಪಬೇಕಾದಲ್ಲಿಗೆ ತಲುಪಿಸುವುದು ಇವರ ಕೆಲಸ!
ಹೌದು, ರಾಬಿನ್ ಹುಡ್ ಆರ್ಮಿ ಈ ಪುಣ್ಯದ ಕೆಲಸವನ್ನು ಮಾಡುತ್ತಿರುವುದು ಸ್ವಾತಂತ್ರ್ಯ ದಿನಾಚರಣೆಯಂದು!
ಸ್ವಾತಂತ್ರ್ಯದ ಹಬ್ಬವನ್ನು ವಿನೂತನವಾಗಿ ಆಚರಿಸುವ ನಿಟ್ಟಿನಲ್ಲಿ ರಾಬಿನ್ ಹುಡ್ ಆರ್ಮಿ ಈ ಬಾರಿ ಮಹಾಕೈಂಕರ್ಯವೊಂದಕ್ಕೆ ಸಜ್ಜಾಗಿದೆ. ಭಾರತದ ಹತ್ತು ಲಕ್ಷ ಬಡವರಿಗೆ ಆಹಾರ ಒದಗಿಸುವ ಕಾರ್ಯ ಹಮ್ಮಿಕೊಂಡಿದೆ ಈ ಆರ್ಮಿ. ಅನಾಥಾಶ್ರಮ, ವೃದ್ಧಾಶ್ರಮ, ಆಸ್ಪತ್ರೆ ರೋಗಿಗಳಿಗೆ ಊಟ ಕೊಡಲಾಗುತ್ತದೆ. ಈ ಎಲ್ಲ ಕೆಲಸಗಳ ಉಸ್ತುವಾರಿಯನ್ನು ಊಬರ್, ಝೊಮ್ಯಾಟೊ,
ಪೇಟಿಎಂ ಕಂಪನಿಗಳು ವಹಿಸಿಕೊಂಡಿವೆ. ನೀವೂ ಕೈ ಜೋಡಿಸಿ…
“#ಮಿಶನ್ 1 ಮಿಲಿಯನ್’ ಕಾರ್ಯದಲ್ಲಿ ನೀವೂ ಕೈ ಜೋಡಿಸಬಹುದು. ಇಲ್ಲಿ ಆರ್ಮಿ ನಿಮ್ಮಿಂದ ಹಣ ಅಥವಾ ದೇಣಿಗೆಯನ್ನು ಬಯಸುತ್ತಿಲ್ಲ. ಅವರಿಗೆ ಬೇಕಾಗಿರುವುದು ನಿಮ್ಮ ಸಮಯವಷ್ಟೇ. ಆಹಾರ ಹಂಚಲು ಸ್ವಯಂ ಸೇವಕರಾಗಿ ನೀವು ಭಾಗವಹಿಸಿದರಾಯ್ತು. ಪಾಲ್ಗೊಳ್ಳುವುದು ಹೇಗೆ?
ಆಗಸ್ಟ್ 14 ಮತ್ತು 15ರಂದು ಬೆಂಗಳೂರು, ಮುಂಬೈ, ದೆಹಲಿ, ಗುರ್ಗಾಂವ್, ಪುಣೆಯಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಹಾಯ ಮಾಡೋಕೆ ರೆಡಿ ಇದ್ದೇನೆ ಅನ್ನುವವರು ಫೇಸ್‌ಬುಕ್‌ನಲ್ಲಿ
www.facebook.com/robinhoodarmy ಪೇಜ್‌ಗೆ ಭೇಟಿ ನೀಡಿ ಹೆಚ್ಚಿನ ವಿವರ ಪಡೆಯಿರಿ. ಸ್ವಾತಂತ್ರ್ಯ “ಊಟ’!
ಭಾರತದ ಆತ್ಮ ಇರುವುದು ಹಳ್ಳಿಗಳಲ್ಲಿ. ಗೊತ್ತಿರೋ ಸಂಗತಿಯೇ ಇದು. ಆದರೆ, ಇಲ್ಲಿ ಹೇಳಹೊರಟಿರುವುದು ಆ ಸ್ಲೋಗನ್ ಅನ್ನೇ ಹೆಸರಾಗಿಸಿಕೊಂಡಿರೋ ಹೋಟೆಲ್ ಬಗ್ಗೆ. ಇದನ್ನು ಥೀಮ್ ಹೋಟೆಲ್ ಎಂದರೆ ಹೆಚ್ಚು ಸೂಕ್ತ. ಹಳ್ಳಿಯ ಸೊಗಡನ್ನು ನೆನಪಿಗೆ ತರುವ ಹಳ್ಳಿ ಕಟ್ಟೆ, ಸೈಕಲ್‌ನಲ್ಲಿ ಸರ್ವ್ ಮಾಡುವ ಸರ್ವರ್‌ಗಳು ಮತ್ತು ಹೋಟೆಲ್‌ನ ಒಳಾಂಗಣ ವಿನ್ಯಾಸ ಇಲ್ಲಿದೆ.
ಉತ್ತರ ಮತ್ತು ದಕ್ಷಿಣ ಭಾರತದ ಸಾಂಪ್ರದಾಯಿಕ ತಿಂಡಿ ತಿನಿಸುಗಳು ಇಲ್ಲಿ ಸಿಗುತ್ತವೆ. ಸ್ವಾತಂತ್ರ್ಯ ದಿನದ ಸಂಭ್ರಮಾಚರಣೆಯ ಸಲುವಾಗಿ ಮನೆಯೊಡತಿಗೆ ರಜೆ ಕೊಟ್ಟು ಹೊರಗಡೆ ಡೈನ್ ಮಾಡುವ
ಸ್ಥಳವನ್ನೇನಾದರೂ ಹುಡುಕುತ್ತಿದ್ದರೆ, ಈ ಸ್ಥಳದತ್ತ ಒಮ್ಮೆ ಕಣ್ಣು ಹಾಯಿಸಬಹುದು. ಸ್ವಾತಂತ್ರ್ಯ ದಿನಾಚರಣೆಯಂದು “ವಿಲೇಜ್’ನಲ್ಲಿ “ಇಂಡಿಪೆಂಡೆನ್ಸ್ ಡೇ ಸ್ಪೆಷಲ್’ ಮೆನುವನ್ನು ಸಿದ್ಧಪಡಿಸುತ್ತಾರೆ. ಇದೇ ಸಂದರ್ಭದಲ್ಲಿ ಗ್ರಾಹಕರ ಮನರಂಜನೆಗೆ ಮ್ಯೂಸಿಕ್ ಚೇರ್ ಮುಂತಾದ ಆಟ, ತಿರಂಗಾ ಸ್ಪೆಷಲ್, ಮೆಹಂದಿ ಸ್ಟಾಲ್ ಮತ್ತು ಗೊಂಬೆಯಾಟಗಳೂ ಆಯೋಜನೆಯಾಗಿವೆ. ಜಯನಗರದ ಸೆಂಟ್ರಲ್ ಮಾಲ್, ಮಲ್ಲೇಶ್ವರಂನ ಸಂಪಿಗೆ ರಸ್ತೆ ಮತ್ತು ಸರ್ಜಾಪುರದ ಮಾರ್ಕೆಟ್ ಸ್ಕ್ವೇರ್ ಮಾಲ್ ಸೇರಿದಂತೆ ಒಟ್ಟು ಮೂರು ಕಡೆಗಳಲ್ಲಿ ಈ ಹೋಟೆಲ್‌ನ ಶಾಖೆಗಳಿವೆ.