Advertisement

ED ಎದುರು ಇಂದು ಹಾಜರಾಗುವ ವಾದ್ರಾ; ನ್ಯಾಯಾಂಗದಲ್ಲಿ ಪೂರ್ಣ ವಿಶ್ವಾಸ

05:23 PM Jun 01, 2019 | Team Udayavani |

ಹೊಸದಿಲ್ಲಿ : ಹಣಕಾಸು ಅಕ್ರಮ ಮತ್ತು ಲಂಡನ್‌ ಆಸ್ತಿ ಖರೀದಿ ಪ್ರಕರಣಕ್ಕೆ ಸಂಬಂಧಿಸಿ ಮತ್ತೆ  ಸಮನ್ಸ್‌ ಪಡೆದಿರುವ ಉದ್ಯಮಿ, ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಪತಿ, ರಾಬರ್ಟ್‌ ವಾದ್ರಾ ಅವರು ಇಂದು ಗುರುವಾರ ಜಾರಿ ನಿರ್ದೇಶನಾಲಯದ (ಇಡಿ) ಕಾರ್ಯಾಲಯದಲ್ಲಿ ತನಿಖೆಗೆ ಹಾಜರಾಗಲಿದ್ದಾರೆ.

Advertisement

ED  ಕಾರ್ಯಾಲಯಕ್ಕೆ ತೆರಳುವ ಮುನ್ನ ಮಾಡಿರುವ ಟ್ವೀಟ್‌ ನಲ್ಲಿ ವಾದ್ರಾ ಅವರು “ನನಗೆ ನ್ಯಾಯಾಂಗದಲ್ಲಿ ಪೂರ್ಣ ವಿಶ್ವಾಸವಿದೆ; ಈ ಹಿಂದೆಯೂ ನಾನು ಎಲ್ಲ ಸಮನ್ಸ್‌ ಮತ್ತು ತನಿಖೆಗಳಿಗೆ ಸೂಕ್ತವಾಗಿ ಸ್ಪಂದಿಸಿ ಸಹಕರಿಸಿದ್ದೇನೆ; ಮಂದೆಯೂ ಹಾಗೇ ಮಾಡಲಿದ್ದೇನೆ’ ಎಂದು ಬರೆದುಕೊಂಡಿದ್ದಾರೆ.

ವಾದ್ರಾ ತಮ್ಮ ಕೇಸುಗಳಿಗೆ ಸಂಬಂಧಿಸಿ ಈಗಾಗಲೇ  11 ಬಾರಿ ತನಿಖೆಗೆ ಒಳಪಟ್ಟಿದ್ದಾರೆ. ತನ್ನ ವಿರುದ್ಧದ ಆರೋಪಗಳೆಲ್ಲ ಸುಳ್ಳೆಂದು ಸಾಬೀತಾಗುವ ತನಕವೂ ತಾನು ತನಿಖಾ ಸಂಸ್ಥೆಗಳೊಂದಿಗೆ ಪೂರ್ತಿಯಾಗಿ ಸಹಕರಿಸುತ್ತೇನೆ  ಎಂದು ವಾದ್ರಾ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next