Advertisement

ಫೆ.16ರ ವರೆಗೆ ಬಂಧನದಿಂದ ರಕ್ಷಣೆ ಪಡೆದ ರಾಬರ್ಟ್‌ ವಾದ್ರಾ

10:46 AM Feb 02, 2019 | udayavani editorial |

ಹೊಸದಿಲ್ಲಿ : ಕಾಂಗ್ರೆಸ್‌ ಅಧಿನಾಯಕಿ ಸೋನಿಯಾ ಗಾಂಧಿ ಅವರ ಅಳಿಯ ಮತ್ತು ಪ್ರಿಯಾಂಕಾ ಗಾಂಧಿ ಅವರ ಪತಿ, ಉದ್ಯಮಿ ರಾಬರ್ಟ್‌ ವಾದ್ರಾ ಅವರಿಗೆ ಹಣಕಾಸು ಅಕ್ರಮ ಕೇಸಿನಲ್ಲಿ ಫೆ.16ರ ವರೆಗಿನ ಅವಧಿಗೆ ದಿಲ್ಲಿ ಕೋರ್ಟಿನಿಂದ ನಿರೀಕ್ಷಣಾ ಜಾಮೀನು ಸಿಕ್ಕಿದೆ. 

Advertisement

ಲಂಡನ್‌ ಆಸ್ತಿಪಾಸ್ತಿ ವ್ಯವಹಾರಕ್ಕೆ ಸಂಬಂಧಿಸಿದಂತೆ  ರಾಬರ್ಟ್‌ ವಾದ್ರಾ ಎಸಗಿರುವರೆಂದು ಆರೋಪಿಸಿ ಜಾರಿ ನಿರ್ದೇಶನಾಲಯ ದಾಖಲಿಸಿರುವ ಕೇಸಿನ ತನಿಖೆಗೆ ವಾದ್ರಾ ಸಹಕರಿಸಲಿದ್ದಾರೆ ಎಂದು ಅವರ ವಕೀಲರು ಹೇಳಿದ್ದಾರೆ. 

ವಾದ್ರಾ ಅವರ ನಿಕಟವರ್ತಿ ಮನೋಜ್‌ ಅರೋರಾ ಅವರು ಇದೇ ಕೇಸಿಗೆ ಸಂಬಂಧಿಸಿ ಈಗಾಗಲೇ ಬಂಧನದಿಂದ ರಕ್ಷಣೆ ಪಡೆದುಕೊಂಡಿದ್ದಾರೆ. 

ತನಿಖಾಧಿಕಾರಿಗಳ ಪ್ರಕಾರ ಅರೋರಾ ಅವರೇ ಈ ಕೇಸಿನ ಪ್ರಧಾನ ಆರೋಪಿಯಾಗಿದ್ದಾರೆ; ಏಕೆಂದರೆ ವಾದ್ರಾ ಅವರ ಬಹಿರಂಗಪಡಿಸದ ಸಾಗರೋತ್ತರ ಆಸ್ತಿಪಾಸ್ತಿ ಬಗ್ಗೆ ಆತನಿಗೆ ಪೂರ್ಣ ಮಾಹಿತಿ ಇದ್ದು ಆತನೇ ಲಂಡನ್‌ ಆಸ್ತಿಪಾಸ್ತಿ ಖರೀದಿಗೆ ಹಣದ ವ್ಯವಸ್ಥೆ ಮಾಡಿದ್ದಾನೆ ಎಂದು ಮೂಲಗಳು ತಿಳಿಸಿವೆ. 

Advertisement

Udayavani is now on Telegram. Click here to join our channel and stay updated with the latest news.

Next