Advertisement

ಶತಕೋಟಿ ವೀರ ದರ್ಶನ್ : ನೂರು ಕೋಟಿ ಗಳಿಸಿದ ‘ರಾಬರ್ಟ್’   

02:13 PM Mar 31, 2021 | Team Udayavani |

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯಿಸಿರುವ ‘ರಾಬರ್ಟ್’ ಚಿತ್ರ ಎಲ್ಲೆಡೆ ಅಮೋಘ ಪ್ರದರ್ಶನ ಕಾಣುತ್ತಿದೆ. ಕನ್ನಡ ಸಿನಿ ಪ್ರೇಮಿಗಳ ಮನಸೂರೆಗೊಂಡಿರುವ ಈ ಚಿತ್ರದ ಕುರಿತು ಇದೀಗ ಹೊಸ ಸುದ್ದಿಯೊಂದು ಹೊರ ಬಿದ್ದಿದ್ದು, ಈ ಚಿತ್ರದ ಗಳಿಕೆ ನೂರು ಕೋಟಿ ತಲುಪಿದೆ ಎನ್ನಲಾಗುತ್ತಿದೆ.

Advertisement

ಹೌದು, ಬ್ಲಾಕ್ ಬಸ್ಟರ್ ಚೌಕ್ ಚಿತ್ರದ ಖ್ಯಾತಿಯ ತರುಣ್ ಸುಧೀರ್ ಅವರ ಕೈಚಳಕದಲ್ಲಿ ಅದ್ಭುತವಾಗಿ ಮೂಡಿ ಬಂದಿರುವ ‘ರಾಬರ್ಟ್’ ಸಿನಿಮಾ ಬಿಡುಗಡೆಯಾದ ಮೊದಲ ದಿನವೇ ಗೆಲುವಿನ ಸುಳಿವು ನೀಡಿತು. ಫಸ್ಟ್ ಡೇ ಕೋಟ್ಯಂತರ (ಕರ್ನಾಟಕದಲ್ಲಿ 17 ಕೋಟಿ) ರೂಪಾಯಿ ಬಾಚಿಕೊಂಡು ಗಲ್ಲಾ ಪೆಟ್ಟಿಗೆಯಲ್ಲಿ ವಿಜಯದ ನಗೆ ಬೀರಿತು. ಸಿನಿಮಾ ಬಿಡುಗಡೆಯಾಗಿ ಮೂರು ವಾರಗಳಲ್ಲಿ ರಾಬರ್ಟ್ ಸಿನಿಮಾ ಹಣ ಗಳಿಕೆ ಇದೀಗ ನೂರು ಕೋಟಿ ಕ್ಲಬ್ ಸೇರಿದೆ ಎನ್ನುವ ಸುದ್ದಿ ಗಾಂಧಿನಗರದಲ್ಲಿ ಓಡಾಡುತ್ತಿದೆ. ರಾಬರ್ಟ್ ಚಿತ್ರ ಶತ ಕೋಟಿ ಬಾಚಿಕೊಂಡಿದೆ ಎಂದು ಹೇಳುವ ಪೋಸ್ಟರ್ ಗಳು ಸೋಷಿಯಲ್ ಮೀಡಿಯಾದಲ್ಲಿ ಭರ್ಜರಿಯಾಗಿ ಹರಿದಾಡುತ್ತಿವೆ.

ಡಿ ಬಾಸ್ ದರ್ಶನ್ ಅವರಿಗೆ ಬಾಕ್ಸ್ ಆಫೀಸ್ ಸುಲ್ತಾನ್ ಎನ್ನುವ ಬಿರುದು ಇದೆ. ಅದನ್ನು ಮತ್ತೊಮ್ಮೆ ಸಾಬೀತು ಪಡಿಸಿದೆ ರಾಬರ್ಟ್ ಸಿನಿಮಾ. ಅವರ ಈ ಹಿಂದಿನ ‘ಯಜಮಾನ’ ಸಿನಿಮಾ ಶತಕೋಟಿ ಗಳಿಸಿತ್ತು. ಇದೀಗ ಆ ಸಾಲಿಗೆ ರಾಬರ್ಟ್ ಸಿನಿಮಾ ಸೇರಿದೆ ಎಂದು ದಚ್ಚು ಅಭಿಮಾನಿಗಳು ಸಂತಸ ಹಂಚಿಕೊಂಡಿದ್ದಾರೆ.

ಇನ್ನು ತರುಣ್ ಸುಧೀರ್ ನಿರ್ದೇಶನದ ರಾಬರ್ಟ್ ಸಿನಿಮಾ ಮಾರ್ಚ್ 11 ರಂದು ಕರ್ನಾಟಕ ಹಾಗೂ ತೆಲುಗು ರಾಜ್ಯ ( ಆಂಧ್ರ, ತೆಲಂಗಾಣ)ಗಳಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಗಿ ಭರ್ಜರಿ ಪ್ರದರ್ಶನ ಕಾಣುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next