Advertisement

“ರಾಬರ್ಟ್‌’ಫ‌ಸ್ಟ್‌ಲುಕ್‌ ಮೋಶನ್‌ ಪೋಸ್ಟರ್‌ ರಿಲೀಸ್‌

10:05 AM Dec 27, 2019 | Lakshmi GovindaRaj |

ನಿರೀಕ್ಷೆಯಂತೆಯೇ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅಭಿನಯದ ಮುಂಬರುವ ಚಿತ್ರ “ರಾಬರ್ಟ್‌’ನ ಫ‌ಸ್ಟ್‌ಲುಕ್‌ ಮೋಶನ್‌ ಪೋಸ್ಟರ್‌ ಕ್ರಿಸ್‌ಮಸ್‌ ಹಬ್ಬದ ಸಂದರ್ಭದಲ್ಲಿ ಅದ್ಧೂರಿಯಾಗಿ ಹೊರಬಂದಿದೆ. ಚಿತ್ರತಂಡ ಮೊದಲೇ ತಿಳಿಸಿದಂತೆ, ಬುಧವಾರ (ಡಿ. 25) ಬೆಳಿಗ್ಗೆ 11.45ಕ್ಕೆ “ರಾಬರ್ಟ್‌’ ಚಿತ್ರದ ಫ‌ಸ್ಟ್‌ಲುಕ್‌ ಮೋಶನ್‌ ಪೋಸ್ಟರ್‌ ಸೋಶಿಯಲ್‌ ಮೀಡಿಯಾಗಳ ಮೂಲಕ ಬಿಡುಗಡೆಯಾಗಿದ್ದು, ದರ್ಶನ್‌ ಹೊಸ ಗೆಟಪ್‌, ಡಿಫ‌ರೆಂಟ್‌ ಲುಕ್‌ಗೆ ಅಭಿಮಾನಿಗಳ ಗಮನ ಸೆಳೆಯಲು ಯಶಸ್ವಿಯಾಗಿದೆ.

Advertisement

ದರ್ಶನ್‌ ಅಭಿನಯದ ಇತ್ತೀಚಿನ ಬಹುತೇಕ ಚಿತ್ರಗಳ ಟೀಸರ್‌ನಲ್ಲಿ “ಬಾಸ್‌’ ಅಥವಾ “ಡಿ ಬಾಸ್‌’ ಎನ್ನುವ ಹೆಸರುಗಳು ಹೆಚ್ಚಾಗಿ ಕಾಣುತ್ತಿದ್ದು, ಈ ಹಿಂದೆ ಬಂದ “ಯಜಮಾನ’ ಚಿತ್ರದಲ್ಲೂ ಈ ಪದ ಒಂದಷ್ಟು ಸೌಂಡ್‌ ಮಾಡಿತ್ತು. ಈಗ “ರಾಬರ್ಟ್‌’ ಫ‌ಸ್ಟ್‌ಲುಕ್‌ ಮೋಶನ್‌ ಟೀಸರ್‌ನಲ್ಲೂ ಅದು ಮುಂದುವರೆದಿದ್ದು, “ರಾಬರ್ಟ್‌’ ಚಿತ್ರದ ಮೋಶನ್‌ ಪೋಸ್ಟರ್‌ನಲ್ಲಿ ಬರುವ ಜೀಪ್‌ನ ನಂಬರ್‌ ಪ್ಲೇಟ್‌ನಲ್ಲಿ ನಂಬರ್‌ ಬದಲು “ಬಾಸ್‌’ ಎಂದು ಬರೆಯಲಾಗಿದೆ.

ಈ ಮೂಲಕ ನಿರ್ದೇಶಕ ತರುಣ್‌ ಸುಧೀರ್‌ ಮತ್ತೂಮ್ಮೆ “ರಾಬರ್ಟ್‌’ ಟೀಸರ್‌ನಲ್ಲಿ ದರ್ಶನ್‌ ಅಭಿಮಾನಿಗಳಿಗೆ “ಬಾಸ್‌’ ನಾಮ ಸ್ಮರಣೆ ಮಾಡಿಸಿದ್ದಾರೆ. ಇನ್ನು ಬಹುತೇಕ ಅಂತಿಮ ಹಂತದ ಚಿತ್ರೀಕರಣಕ್ಕೆ ಬಂದಿರುವ “ರಾಬರ್ಟ್‌’, ಉತ್ತರ ಪ್ರದೇಶದ ವಾರಣಾಸಿ ಸದ್ಯ ತನ್ನ ಕೊನೆ ಹಂತದ ಚಿತ್ರೀಕರಣದಲ್ಲಿ ನಿರತವಾಗಿದೆ. “ರಾಬರ್ಟ್‌’ ಚಿತ್ರದಲ್ಲಿ ದರ್ಶನ್‌ಗೆ ನಾಯಕಿಯಾಗಿ ಆಶಾ ಭಟ್‌ ಜೋಡಿಯಾಗಿ ಕಾಣಿಸಿಕೊಳ್ಳುತ್ತಿದ್ದು,

ಉಳಿದಂತೆ ವಿನೋದ್‌ ಪ್ರಭಾಕರ್‌, ತೆಲುಗು ನಟ ಜಗಪತಿ ಬಾಬು, ರವಿ ಕಿಶನ್‌, ತೇಜಸ್ವಿನಿ ಪ್ರಕಾಶ್‌ ಮೊದಲಾದವರು ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಈ ಹಿಂದೆ ಕಿಚ್ಚ ಸುದೀಪ್‌ ಅಭಿನಯದ “ಹೆಬ್ಬುಲಿ’ ಚಿತ್ರವನ್ನು ನಿರ್ಮಿಸಿದ್ದ ಉಮಾಪತಿ ಶ್ರೀನಿವಾಸ ಗೌಡ ಈ ಚಿತ್ರ ನಿರ್ಮಿಸುತ್ತಿದ್ದು, ತರುಣ್‌ ಸುಧೀರ್‌ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಚಿತ್ರದ ಹಾಡುಗಳಿಗೆ ಅರ್ಜುನ್‌ ಜನ್ಯ ಸಂಗೀತ ಸಂಯೋಜನೆಯಿದ್ದು, 2020ರ ಮಧ್ಯ ಭಾಗದಲ್ಲಿ “ರಾಬರ್ಟ್‌’ ತೆರೆಗೆ ಬರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

Advertisement

ಒಟ್ಟಾರೆ ಈಗಾಗಲೇ ಬಿಡುಗಡೆಯಾಗಿರುವ “ರಾಬರ್ಟ್‌’ ಚಿತ್ರದ ಫ‌ಸ್ಟ್‌ಲುಕ್‌ ಪೋಸ್ಟರ್‌, ಮೋಶನ್‌ ಟೀಸರ್‌ ಎಲ್ಲದಕ್ಕೂ ಸೋಶಿಯಲ್‌ ಮೀಡಿಯಾಗಳಲ್ಲಿ ಭರ್ಜರಿ ರೆಸ್ಪಾನ್ಸ್‌ ಸಿಗುತ್ತಿದ್ದು, ದರ್ಶನ್‌ ಅಭಿಮಾನಿಗಳಂತೂ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆಯ ಮಾತುಗಳನ್ನಾಡುತ್ತಿದ್ದಾರೆ. “ರಾಬರ್ಟ್‌’ ತೆರೆಮೇಲೆ ಹೇಗೆ ಕಾಣುತ್ತಾನೆ, ಎಷ್ಟರ ಮಟ್ಟಿಗೆ ಪ್ರೇಕ್ಷಕರಿಗೆ ಇಷ್ಟವಾಗುತ್ತಾನೆ ಅನ್ನೋ ಕುತೂಹಲಕ್ಕೆ ಉತ್ತರ ಸಿಗಬೇಕಾದರೆ ಇನ್ನೂ ಕೆಲವು ತಿಂಗಳು ಕಾಯಬೇಕು.

Advertisement

Udayavani is now on Telegram. Click here to join our channel and stay updated with the latest news.

Next