Advertisement

ಯೂಟ್ಯೂಬ್ ನಲ್ಲಿ ಧೂಳೆಬ್ಬಿಸಿದ ರಾಬರ್ಟ್ ಫಸ್ಟ್ ಲುಕ್: ನಿಮ್ಮ ಪ್ರೀತಿಗೆ ಸದಾ ಅಭಾರಿ ಎಂದ ದಾಸ

10:02 AM Dec 26, 2019 | Mithun PG |

ಬೆಂಗಳೂರು:  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷಿತ ರಾಬರ್ಟ್ ಚಿತ್ರದ ಫಸ್ಟ್ ಲುಕ್ ಮೋಷನ್ ಪೋಸ್ಟರ್  ವಿಡಿಯೋ ಬಿಡುಗಡೆಯಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ಧೂಳೆಬ್ಬಿಸಿದೆ. ಆ ಮೂಲಕ ದರ್ಶನ್ ತಮ್ಮ ಅಭಿಮಾನಿಗಳಿಗೆ ಕ್ರಿಸ್ ಮಸ್ ಹಬ್ಬದ ಉಡುಗೊರೆ ನೀಡಿದ್ದಾರೆ. ತರುಣ್​ ಸುಧೀರ್​ ನಿರ್ದೇಶನದ ಈ ಚಿತ್ರದಲ್ಲಿ ಆಶಾ ಭಟ್​ ನಾಯಕಿಯಾಗಿ ನಟಿಸಿದ್ದಾರೆ.

Advertisement

ಕ್ರಿಸ್ ಮಸ್ ಹಬ್ಬದ ಸಂದರ್ಭದಲ್ಲಿ ಮೋಷನ್ ಪೋಸ್ಟರ್ ಬಿಡುಗಡೆ ಮಾಡಿ “ ನಿಮ್ಮ ಪ್ರೀತಿಗೆ ದಾಸ ಸದಾ ಅಭಾರಿ ಎಂದು ದರ್ಶನ್ ಟ್ವೀಟ್ ಮಾಡಿದ್ದಾರೆ.

ರಾಬರ್ಟ್ ಚಿತ್ರದ ಫಸ್ಟ್ ಲುಕ್ ವಿಡಿಯೋದಲ್ಲಿ ದಚ್ಚು, ಬ್ಲ್ಯಾಕ್ ಅಂಡ್ ವೈಟ್ ಪೋಷಾಕಿನಲ್ಲಿ ವಿಭಿನ್ನ ಹೇರ್ ಸ್ಟೈಲ್ ನಲ್ಲಿ ಕೈಯಲ್ಲಿ ಗನ್ ಹಿಡಿದು ಮಿಂಚಿದ್ದಾರೆ. ಪೋಸ್ಟರ್ ನೋಡಿದರೆ ಇದೊಂದು ಪಕ್ಕಾ ಮಾಸ್ ಸಿನಿಮಾ ಎಂಬುದು ಸ್ಪಷ್ಟವಾಗುತ್ತದೆ. . ಕೇವಲ ಮೋಷನ್​ ಪೋಸ್ಟರ್​ ಧೂಳೆಬ್ಬಿಸುವಂತಿದ್ದರೆ, ಇನ್ನು ಟೀಸರ್ ಟ್ರೈಲರ್​ ಹೇಗಿರಬಹುದು ಎಂಬ ಕುತೂಹಲ ಅಭಿಮಾನಿಗಳಲ್ಲಿದೆ.

ಬಿಡುಗಡೆಯಾದ ಕೇವಲ ಒಂದೂವರೆ ಗಂಟೆಯಲ್ಲೇ ಮೋಷನ್​ ಪೋಸ್ಟರ್​ ವಿಡಿಯೋವನ್ನು ಸುಮಾರು 4 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಣೆ ಮಾಡಿದ್ದು, 74 ಸಾವಿರ ಮಂದಿ ಲೈಕ್​​ ಮಾಡಿದ್ದಾರೆ. ಇನ್ನೂ ಕಮೆಂಟ್​ ವಿಭಾಗದಲ್ಲಂತೂ ದರ್ಶನ್​ ಲುಕ್​ ಬಗ್ಗೆ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗುತ್ತಿವೆ. ಇನ್ನೊಂದು ವಿಶೇಷವೆಂದರೆ ಬಿಡುಗಡೆಯಾದ 5 ನಿಮಿಷದಲ್ಲಿ ಲಕ್ಷ ವೀಕ್ಷಣೆ ಪಡೆಯುವ ಮೂಲಕವೂ ರಾಬರ್ಟ್​ ದಾಖಲೆ ಬರೆದಿದೆ.

ಚಿತ್ರವನ್ನು ಚೌಕ ಚಿತ್ರ ಖ್ಯಾತಿಯ ತರುಣ್​ ಸುಧೀರ್​ ನಿರ್ದೇಶನ ಮಾಡುತ್ತಿದ್ದು, ಸುದೀಪ್​ ಅಭಿನಯದ ಹೆಬ್ಬುಲಿ ಚಿತ್ರಕ್ಕೆ ಬಂಡವಾಳ ಹೂಡಿದ್ದ ಉಮಾಪತಿ ರಾಬರ್ಟ್​ಗೂ ದುಡ್ಡು ಸುರಿದಿದ್ದಾರೆ. ಚಿತ್ರಕ್ಕೆ ಮ್ಯಾಜಿಕಲ್​ ಕಂಪೋಸರ್​ ಅರ್ಜನ್​ ಜನ್ಯ ಅವರ ಸಂಗೀತವಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next