Advertisement

4ನೇ ದಿನವೂ ಬಾಕ್ಸಾಫೀಸ್‌ನಲ್ಲಿ ನಾಗಾಲೋಟ: ಹೊಸ ದಾಖಲೆ ಬರೆದ ‘ರಾಬರ್ಟ್’

08:22 AM Mar 16, 2021 | Team Udayavani |

ಬಿಡುಗಡೆಗೂ ಮೊದಲೇ ದಾಖಲೆಯ ಪ್ರದರ್ಶನ ಕಾಣುವ ಮೂಲಕ ಸದ್ದು ಮಾಡಿದ್ದ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅಭಿನಯದ “ರಾಬರ್ಟ್‌’ ಚಿತ್ರ, ಬಿಡುಗಡೆಯ ನಂತರ ಗಳಿಕೆಯ ಮೂಲಕ ಸದ್ದು ಮಾಡುತ್ತಿದೆ. ಕನ್ನಡ ಮತ್ತು ತೆಲುಗಿನಲ್ಲಿ ಮೊದಲ ದಿನವೇ ಒಟ್ಟು 20 ಕೋಟಿಗೂ ಅಧಿಕ ಹಣ ಗಳಿಕೆ ಮಾಡಿದ್ದ “ರಾಬರ್ಟ್‌’, ಸದ್ಯ ಬಿಡುಗಡೆಯಾದ ನಾಲ್ಕನೇ ದಿನಕ್ಕೆ 50 ಕೋಟಿ ಗಳಿಕೆ ಮಾಡುವ ಮೂಲಕ 50 ಕೋಟಿ ಕ್ಲಬ್‌ ಸೇರ್ಪಡೆಯಾಗಿದೆ.

Advertisement

ಹೌದು, ಮಾರ್ಚ್‌ 11 ರ ಗುರುವಾರ ಶಿವರಾತ್ರಿಯಂದು ತೆರೆಕಂಡಿದ್ದ “ರಾಬರ್ಟ್‌’ ಚಿತ್ರಕ್ಕೆ ನಂತರ ವಾರಾಂತ್ಯದ ರಜೆಗಳು ಸಿಕ್ಕಿದ್ದರಿಂದ, ಬಾಕ್ಸಾಫೀಸ್‌ ಗಳಿಕೆಯಲ್ಲಿ ಚಿತ್ರ ನಿರೀಕ್ಷೆಗೂ ಮೀರಿ ಮುನ್ನಡೆದಿದೆ. ಈ ಮೂಲಕ ಕನ್ನಡ ಚಿತ್ರರಂಗದಲ್ಲಿ ಅತಿ ಕಡಿಮೆ ಅವಧಿಯಲ್ಲಿ 50 ಕೋಟಿ ಕ್ಲಬ್‌ ಸೇರಿದ ಚಿತ್ರ ಎಂಬ ಖ್ಯಾತಿಗೆ “ರಾಬರ್ಟ್‌’ ಪಾತ್ರವಾಗಿದೆ.

ಇದನ್ನೂ ಓದಿ:ಮಾ.16: ಉದಯವಾಣಿ ತೆರೆದಿದೆ ಮನೆ ಬಾ ಅತಿಥಿ ಫೇಸ್ ಬುಕ್ ಲೈವ್ ನಲ್ಲಿ ರಿಷಬ್ ಶೆಟ್ಟಿ

ಇನ್ನು “ರಾಬರ್ಟ್‌’ ಭಾನುವಾರ ಕರ್ನಾಟಕದಲ್ಲಿ 15.68 ಕೋಟಿ ರೂ. ಗಳಿಕೆ ಮಾಡಿದೆ ಎನ್ನಲಾಗಿದೆ. ಸದ್ಯ ಬಾಕ್ಸಾಫೀಸ್‌ ಗಳಿಕೆಯ ಅಂಕಿ-ಅಂಶಗಳ ಬಗ್ಗೆ ವಿವರಣೆ ನೀಡಿರುವ ಚಿತ್ರತಂಡ, ಕರ್ನಾಟಕದಲ್ಲಿ “ರಾಬರ್ಟ್‌’ ಬಿಡುಗಡೆಯಾದ ನಾಲ್ಕು ದಿನಗಳಲ್ಲಿ 59.8 ಕೋಟಿ ರೂ. ಕಲೆಕ್ಷನ್‌ ಆಗಿದೆ ಎನ್ನುವ ವರದಿಗಳನ್ನು ಖಚಿತಪಡಿಸಿದೆ.

ಕನ್ನಡದಂತೆಯೇ, ತೆಲುಗಿನಲ್ಲೂ “ರಾಬರ್ಟ್‌’ ಅಬ್ಬರ ಜೋರಾಗಿಯೇ ಇದ್ದು, ಆಂಧ್ರ ಮತ್ತು ತೆಲಂಗಾಣದಲ್ಲಿ “ರಾಬರ್ಟ್‌’ 4ನೇ ದಿನಕ್ಕೆ 6.17 ಕೋಟಿ ರೂ. ಗಳಿಕೆ ಮಾಡಿದೆ ಎನ್ನಲಾಗಿದೆ.

Advertisement

ಒಟ್ಟಾರೆ ಕಳೆದ ಒಂದು ವರ್ಷದಿಂದ ಕೋವಿಡ್‌ ಆತಂಕ, ಲಾಕ್‌ಡೌನ್‌ ನಿಂದಾಗಿ ಪ್ರೇಕ್ಷಕರಿಲ್ಲದೆ ಖಾಲಿ ಹೊಡೆಯುತ್ತಿದ್ದ ಥಿಯೇಟರ್‌ ಮತ್ತು ಮಲ್ಟಿಪ್ಲೆಕ್ಸ್‌ಗಳಿಗೆ “ರಾಬರ್ಟ್‌’ ಹೊಸ ಕಳೆ ಮತ್ತು ಭರವಸೆ ತುಂಬಿರುವುದಂತೂ ಸುಳ್ಳಲ್ಲ. ಕೊರೊನಾ ಲಾಕ್‌ಡೌನ್‌ ಬಳಿಕ ಬಾಕ್ಸಾಫೀಸ್‌ ಚಿಂತೆಯಲ್ಲಿದ್ದ ಸಿನಿಮಾ ಮಂದಿಗೆ “ರಾಬರ್ಟ್‌’ ಹೊಸ ಜೋಶ್‌ ತುಂಬಲು ಯಶಸ್ವಿಯಾಗಿದ್ದು, ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಚಿತ್ರದ ಗಳಿಕೆಯ ನಾಗಾಲೋಟ ಎಲ್ಲಿಗೆ ಹೋಗಿ ಮುಟ್ಟುತ್ತದೆ ಎಂಬ ಕುತೂಹಲ ಚಿತ್ರೋದ್ಯಮದಲ್ಲಿದೆ.

ಇದನ್ನೂ ಓದಿ: ಸೋಷಿಯಲ್ ಮೀಡಿಯಾಗಳಿಗೆ ಗುಡ್ ಬೈ ಹೇಳಿದ ನಟ ಅಮೀರ್ ಖಾನ್

Advertisement

Udayavani is now on Telegram. Click here to join our channel and stay updated with the latest news.

Next