ಬೆಂಗಳೂರು: ನಾಗರಬಾವಿ ಪಾಪರೆಡ್ಡಿ ಪಾಳ್ಯದ ಬಳಿ ಹಾಡಹಗಲೇ ಅಂಗಡಿಯೊಂದಕ್ಕೆ ಎಂಟ್ರಿ ಕೊಟ್ಟ ಮೂವರು ದುಷ್ಕರ್ಮಿಗಳು, ಸಿನಿಮೀಯ ಶೈಲಿಯಲ್ಲಿ ಸಿಗರೇಟ್ ಡಿಸ್ಟ್ರಿಬ್ಯೂಟರ್‌ಗೆ ಮಚ್ಚು, ಗನ್ ತೋರಿಸಿ, ಮುಖಕ್ಕೆ ಪೆಪ್ಪರ್ ಸ್ಪ್ರೇ ಮಾಡಿ 15 ಲಕ್ಷ ರೂ. ಕಸಿದುಕೊಂಡು ಪರಾರಿಯಾಗಿದ್ದಾರೆ.
ಎಂಬಿ ಡಿಸ್ಟ್ರಿಬ್ಯೂಟರ್ ಏಜೆಂಟ್ ಗೋಪಾಲ್ ದರೋಡೆಗೆ ಒಳಗಾದವರು.
ಎಂಬಿ ಡಿಸ್ಟ್ರಿಬ್ಯೂಟರ್ ಏಜೆಂಟ್ ಗೋಪಾಲ್ ಕೆಂಗೇರಿಯಿಂದ ವಿವಿಧ ಅಂಗಡಿಗಳಲ್ಲಿ ಸಿಗರೇಟ್ ಬಿಲ್ ಸಂಗ್ರಹಿಸಿಕೊಂಡು ಬರುತ್ತಿದ್ದರು. ನಾಗರಭಾವಿ ಪಾಪರೆಡ್ಡಿಪಾಳ್ಯದಲ್ಲಿ ಗೋಪಾಲ್ ನಾತೂರಾಮ್ ಎಂಬುವವರ ಅಂಗಡಿ ಬಳಿ ಸಿಗರೇಟ್ ಬಿಲ್ ಸಂಗ್ರಹ ಮಾಡಲು ಬಂದಿದ್ದರು. ಈ ವೇಳೆ ಡಿಯೋ ದ್ವಿಚಕ್ರವಾಹನದಲ್ಲಿ ಹೆಲ್ಮೆಟ್ ಧರಿಸಿ ಏಕಾಏಕಿ ಎಂಟ್ರಿ ಕೊಟ್ಟ ಮೂವರು ದರೋಡೆಕೋರರು, ಗೋಪಾಲ್ ಅವರನ್ನು ಸುತ್ತುವರಿ ದಿದ್ದರು. ಮೂವರ ಪೈಕಿ ಇಬ್ಬರು ಗೋಪಾಲ್ ಮುಖಕ್ಕೆ ಪೆಪ್ಪರ್ ಸ್ಪ್ರೆà ಹಾಕಿದರೆ, ಒಬ್ಬ ಗನ್ ತೋರಿಸಿ ಬೆದರಿದ್ದ. ನಂತರ ದುಷ್ಕರ್ಮಿಗಳು ಲಾಂಗ್ ತೆಗೆದಾಗ ಆತಂಕಗೊಂಡ ಗೋಪಾಲ್ ಪ್ರಾವಿಜನ್ ಸ್ಟೋರ್ ಒಳಗೆ ಓಡಿ ಹೋಗಿದ್ದರು. ಗೋಪಾಲ್ ಅವರನ್ನು ಅಟ್ಟಾಡಿಸಿಕೊಂಡು ಹೋಗಿದ್ದರು. ದುಷ್ಕರ್ಮಿಗಳು ಲಾಂಗ್ ಬೀಸಿದ ರಭಸಕ್ಕೆ ಗೋಪಾಲ್ ಅವರ ಬಳಿಯಿದ್ದ ಬ್ಯಾಗ್ ತುಂಡಾಗಿ ಕೆಳಕ್ಕೆ ಬಿದ್ದಿದೆ.
ತಕ್ಷಣ ದುಡ್ಡಿದ್ದ ಬ್ಯಾಗನ್ನು ಹೊತ್ತು ದರೋಡೆಕೋರರು ಪರಾರಿಯಾಗಿದ್ದಾರೆ. ಬ್ಯಾಗ್‌ನಲ್ಲಿ 15 ಲಕ್ಷ ರೂ. ಇತ್ತು ಎನ್ನಲಾಗಿದೆ. ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.