Advertisement

Thief: ಪಕ್ಕದ ಮನೆಗಳಿಗೆ ಬೀಗ ಹಾಕಿ ನಿವೃತ್ತ ಶಿಕ್ಷಕಿಯ ಮನೆಯ ನಗ ನಗದು ದೋಚಿದ ಕಳ್ಳರು…

03:25 PM Feb 19, 2024 | Team Udayavani |

ಸಂಕೇಶ್ವರ: ಅಕ್ಕ ಪಕ್ಕದ ಮನೆಗಳಿಗೇಲ್ಲ ಬೀಗ ಹಾಕಿದ ಖದೀಮರು ನಿವೃತ್ತ ಶಿಕ್ಷಕಿಯ ಮನೆಯಲ್ಲಿದ್ದ 70 ಗ್ರಾಂ ಚಿನ್ನಾಭರಣ ಹಾಗೂ‌ 1.20 ಲಕ್ಷ ನಗದು ಹಣವನ್ನು ದೋಚಿರುವ ಘಟನೆ ಹುಕ್ಕೇರಿ ತಾಲೂಕಿನ ಕಣಗಲಾ ಗ್ರಾಮದಲ್ಲಿ ರವಿವಾರ ತಡರಾತ್ರಿ ನಡೆದಿದೆ.

Advertisement

ಹುಕ್ಕೇರಿ ತಾಲೂಕಿನ ಕಣಗಲಾ ಗ್ರಾಮದಲ್ಲಿ ರವಿವಾರ ತಡರಾತ್ರಿ ‌ಖದೀಮರ ತಂಡವು ಅಕ್ಕ ಪಕ್ಕದ ಮನೆಗಳಿಗೆ ಹೊರಗಡೆಯಿಂದ ಬಾಗಿಲಿಗೆ ಬೀಗ ಹಾಕಿ ನಿವೃತ್ತ ಶಿಕ್ಷಕಿ ಆಶಾ ಮೋಹಿತೆ ಎಂಬುವರ ಮನೆಗೆ ಹಾಕಲಾಗಿದ್ದ ಬೀಗ ಮುರಿದು‌ ಮನೆಯಲ್ಲಿನ ಕಪಾಟಿನಲ್ಲಿ ಇರಿಸಲಾಗಿದ್ದ ಸುಮಾರು 70 ಗ್ರಾಂ (7 ತೊಲೆ) ಚಿನ್ನಾಭರಣ ಹಾಗೂ 1.20 ಲಕ್ಷ ನಗದು ಹಣವನ್ನು ದೋಚಿ ಪರಾರಿಯಾಗಿದ್ದಾರೆ.

ಸುದ್ದಿ ತಿಳಿದ ಸಂಕೇಶ್ವರ‌ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಘಟನಾ ಸ್ಥಳಕ್ಕೆ ಬೆರಳಚ್ಚು ತಜ್ಞರು ಮತ್ತು ಶ್ವಾನ ದಳ ಸ್ಥಳಕ್ಕೆ ದೌಡಾಯಿಸಿದ್ದು ಖದೀಮರ ಪತ್ತೆಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದ್ದಾರೆ.

ಇದನ್ನೂ ಓದಿ: Hubli; ವಸತಿ ಶಾಲೆಗಳ ದ್ವಾರ ಬರಹ ಬದಲಾವಣೆ ಸಮರ್ಥನೆ ಮಾಡಿಕೊಂಡ ಲಕ್ಷ್ಮೀ ಹೆಬ್ಬಾಳ್ಕರ

Advertisement

Udayavani is now on Telegram. Click here to join our channel and stay updated with the latest news.

Next