Advertisement

ದರೋಡೆ : ಡಿಸಿಐಬಿ ಪೊಲೀಸರ ಕ್ಷಿಪ್ರ ಕಾರ್ಯಾಚರಣೆ 

12:34 PM Mar 25, 2017 | Team Udayavani |

ಉಡುಪಿ: ಚಿನ್ನದ ವ್ಯಾಪಾರಿಯ ದರೋಡೆ ಪ್ರಕರಣವನ್ನು ಕ್ಷಿಪ್ರ ಗತಿಯಲ್ಲಿ ಭೇದಿಸುವಲ್ಲಿ ಉಡುಪಿ ಪೊಲೀಸರ ಸಹಕಾರದೊಂದಿಗೆ ಜಿಲ್ಲಾ ಅಪರಾಧ ಗುಪ್ತವಾರ್ತಾ ವಿಭಾಗವು (ಡಿಸಿಐಬಿ) ಸಫ‌ಲವಾಗಿರುವ ಪರಿಣಾಮ ಹಿರಿಯ ಅಧಿಕಾರಿಗಳು ಬಹುಮಾನ ಘೋಷಿಸಿದ್ದಾರೆ. ಗುರುವಾರ ಪತ್ರಿಕಾ ಗೋಷ್ಠಿಯಲ್ಲಿ ಎಸ್‌ಪಿ ಕೆ.ಟಿ. ಬಾಲಕೃಷ್ಣ ಅವರು ವಿವರಿಸಿದ ಬಳಿಕ ಎಲ್ಲ 7 ಮಂದಿ ಆರೋಪಿಗಳನ್ನು ಮಾಧ್ಯಮದ ಎದುರು ಕರೆತರಲಾಯಿತು.

Advertisement

ಹೆಚ್ಚುವರಿ ಎಸ್‌ಪಿ ಎನ್‌.ವಿಷ್ಣುವರ್ಧನ್‌ ಇದ್ದರು.6 ಮಂದಿಗೆ ಮಾತ್ರ ಮಾಸ್ಕ್ ಯಾಕೆ?: ಸದ್ಯ ಬಂಧನವಾಗಿರುವ 7 ಮಂದಿ ಪೈಕಿ ಪ್ರಮುಖ ಆರೋಪಿ ಹರಿಖಂಡಿಗೆ ಉಗ್ರಾಣಿಬೆಟ್ಟು ನಿವಾಸಿ ಪೆರ್ಡೂರು ಗಾಯತ್ರಿ ಜುವೆಲರಿಯ ಹರಿಕೃಷ್ಣ ಭಟ್‌ (25) ಮುಖವನ್ನು ಹೊರತುಪಡಿಸಿ ಉಳಿದೆಲ್ಲ ಆರೋಪಿಗಳ ಮುಖಕ್ಕೆ ಮಾಸ್ಕ್ ಹಾಕಲಾಗಿತ್ತು. ಅದು ಯಾಕೆಂದರೆ ಕೊಲೆ, ಸುಲಿಗೆ, ಅತ್ಯಾಚಾರ, ದರೋಡೆ ಮೊದಲಾದ ಗಂಭೀರ ಪ್ರಕರಣಗಳು ನಡೆದಾಗ ದೂರುದಾರ/ಸಂತ್ರಸ್ತರು ಪರಿಚಯವಿಲ್ಲದ ವ್ಯಕ್ತಿಗಳನ್ನು ಕೃತ್ಯದಲ್ಲಿ ನೋಡಿದಾಗ, ಆರೋಪಿಗಳನ್ನು ಖಚಿತಪಡಿಸಿಕೊಳ್ಳಲು ಪೊಲೀಸರು, ತಹಶೀಲ್ದಾರರ ಸಮ್ಮುಖದಲ್ಲಿ “ಗುರುತು ಪತ್ತೆ ಪರೇಡ್‌’ (ಟೆಸ್ಟ್‌ ಐಡೆಂಟಿಫಿಕೇಶನ್‌) ಎನ್ನುವ ಪ್ರಕ್ರಿಯೆಯನ್ನು ನಡೆಸುತ್ತಾರೆ. ಇದೊಂದು ಸಾಕ್ಷ್ಯವಾಗಿ ನ್ಯಾಯಾಲಯದಲ್ಲಿ ಪರಿಗಣನೆಗೆ ಬರುತ್ತದೆ. ದೂರುದಾರರಿಗೆ ಆರೋಪಿಯ ಗುರುತು ಮೊದಲೇ ಇದ್ದರೆ ಮಾಸ್ಕ್ ಹಾಕಲಾಗುವುದಿಲ್ಲ.
 

Advertisement

Udayavani is now on Telegram. Click here to join our channel and stay updated with the latest news.

Next