ಮಂಗಳೂರು: ಬಟ್ಟೆ ವ್ಯಾಪಾರ ಮಾಡುತ್ತಿದ್ದ ವ್ಯಾಪಾರಿ ಹಾಗೂ ಅವರ ಗೆಳೆಯನನ್ನು ತಡೆದು ನಿಲ್ಲಿಸಿದ್ದಲ್ಲದೆ, ಚೂರಿ ತೋರಿಸಿ ಜೀವಬೆದರಿಕೆ ಹಾಕಿ ನಗದು ಸಹಿತ ಮೊಬೈಲ್ ಸುಲಿಗೆ ಮಾಡಿ ಪರಾರಿಯಾದ ಪ್ರಕರಣಕ್ಕೆ ಸಂಬಂಧಿಸಿ ಗ್ರಾಮಾಂತರ ಪೊಲೀಸರು ಇಬರನ್ನು ಬಂಧಿಸಿದ್ದಾರೆ.ವಾಮಂಜೂರಿನ ತಿರುವೈಲು ನಿವಾಸಿ ಮೊಹಮ್ಮದ್ ಆಸಿಫ್ (29) ಮತ್ತು ವಾಮಂಜೂರು ನಿವಾಸಿ ಮೊಹಮ್ಮದ್ ಆರಿಫ್ (23) ಬಂಧಿತರು. ಆರೋಪಿಗಳಿಂದ 4,500 ರೂ., ಮೊಬೈಲ್ ಫೋನ್ ಮತ್ತು ಚೂರಿ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇನ್ನೋರ್ವ ಆರೋಪಿ ವಾಮಂಜೂರಿನ ರಿಕ್ಷಾ ಚಾಲಕ ಸಫಾÌನ್ (25) ತಲೆಮರೆಸಿಕೊಂಡಿದ್ದು ಆತನಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.
ಪ್ರಕರಣದ ಹಿನ್ನೆಲೆ: ಅತ್ತಾವರ ನಿವಾಸಿ ವೇಲು ಮುರುಗನ್ ಅವರು ಫೆ.21ರಂದು ತನ್ನ ಗೆಳೆಯ ಸುಬ್ರಮಣಿ ಅವರ ಜತೆ ಬೈಕ್‌ನಲ್ಲಿ ನೀರುಮಾರ್ಗ, ಬೈತುರ್ಲಿ, ಪೆರ್ಮಂಕಿ, ಉಳಾಯಿಬೆಟ್ಟುವಿನಲ್ಲಿ ಬಟ್ಟೆ ವ್ಯಾಪಾರ ಮುಗಿಸಿ ಸಂಜೆ ಬಿತ್ತ್ಪಾದೆ ಸಮೀಪ ತೆರಳುತ್ತಿದ್ದಾಗ ಬೈಕೊಂದರಲ್ಲಿ ಆಗಮಿಸಿದ 3 ಮಂದಿ ಯುವಕರು ಅವರ ಬೈಕ್ ಅನ್ನು ಅಡ್ಡವಿರಿಸಿದ್ದರು.
ಬಳಿಕ ಅವರಲ್ಲಿ ಒಬ್ಟಾತ ಚೂರಿ ತೋರಿಸಿ ಜೀವಬೆದರಿಕೆ ಹಾಕಿ ಹಣ ಕೇಳಿದ. ಈ ಸಂದರ್ಭ ಸುಬ್ರಮಣಿ ಕಿಸೆಯಲ್ಲಿದ್ದ 25,000 ರೂ. ಹಾಗೂ ವೇಲು 5,300 ರೂ. ಮತ್ತು ಮೊಬೈಲ್ ಕೊಟ್ಟರು. ಸುಲಿಗೆ ಮಾಡಿದ ದುಷ್ಕರ್ಮಿಗಳು ಬಳಿಕ ನೀರುಮಾರ್ಗ ಕಡೆಗೆ ಪರಾರಿಯಾಗಿದ್ದರು. ಈ ಘಟನೆಯ ಬಗ್ಗೆ ವೇಲು ಅವರು ಗ್ರಾಮಾಂತರ ಠಾಣೆಗೆ ದೂರು ನೀಡಿದ್ದರು.
ದೂರಿನ ಆಧಾರದಲ್ಲಿ ತನಿಖೆ ಕೈಗೊಂಡ ಗ್ರಾಮಾಂತರ ಪೊಲೀಸರು ಆರೋಪಿಗಳು ಮತ್ತೂಂದು ಕಡೆ ಸುಲಿಗೆಗೆ ಹೊಂಚು ಹಾಕುತ್ತಿದ್ದ ಸಂದರ್ಭದಲ್ಲಿ ಅವರನ್ನು ಬಂಧಿಸಿದರು. ಈ ಕಾರ್ಯಾಚರಣೆಯಲ್ಲಿ ಮಂಗಳೂರು ದಕ್ಷಿಣ ಉಪವಿಭಾಗ ಸಹಾಯಕ ಪೊಲೀಸ್ ಆಯುಕ್ತ ಶ್ರುತಿ ನಿರ್ದೇಶನದಂತೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯ ನೀರೀಕ್ಷಕ ಮಹಮ್ಮದ್ ಶರೀಫ್ ರಾವುತರ್, ಎಸ್‌ಐ ಸುಧಾಕರ್, ವೆಂಕಟೇಶ್, ಅಪರಾಧ ವಿಭಾಗದ ಎಸ್‌ಐ ಹರೀಶ್ ವಿ. ಮತ್ತು ಎಸ್‌ಐ ಚಂದ್ರಶೇಖರ್ ಆಚಾರ್ಯ, ಸಿಬಂದಿ ಎಚ್‌ಸಿ ಸುಭಾಶ್ಚಂದ್ರ, ಮೋಹನ್, ಪಿಸಿಗಳಾದ ಕುಶಲ… ಹೆಗ್ಡೆ, ರಫೀಕ್, ಸದಾಶಿವ ಭಾಗವಹಿಸಿದ್ದರು.