Advertisement

ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿ ಪರಾರಿಯಾಗಿದ್ದ ಕಳ್ಳರ ಬಂಧನ

11:31 AM Nov 11, 2021 | Team Udayavani |

ದೊಡ್ಡಬಳ್ಳಾಪುರ: ಮುಂಜಾನೆ ಮನೆ ಬಾಗಿಲು ಮೀಟಿ ಒಳ ನುಗ್ಗಿದ ಕಳ್ಳರು ಚಿನ್ನಾಭರಣ ಕಳವು ಮಾಡಿ ಮನೆಯಲ್ಲಿದ್ದ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿ ಪರಾರಿಯಾಗಿದ್ದರು. ಈ ಸಂಬಂಧ ರಾಜಾನುಕುಂಟೆ ಪೊಲೀಸರು ಇಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಜಿಲ್ಲಾ ಪೊಲೀಸ್‌ ಅಧೀಕ್ಷಕ ಕೋನ ವಂಶಿಕೃಷ್ಣ ತಿಳಿಸಿದ್ದಾರೆ.

Advertisement

ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡಿ, ಯಲಹಂಕ ತಾಲೂಕಿನ ಅದ್ದಿ ಗಾನಹಳ್ಳಿಯ ಕಾಪೆìಂಟರ್‌ ಕೆಲಸ ಮಾಡುವ ಅಚ್ಚೇಲಾಲ್‌ ಮನೆಗೆ ನುಗ್ಗಿದ ನಾಲ್ವರು ಕಳ್ಳರು ಚಾಕು ಮತ್ತು ಕಬ್ಬಿಣದ ರಾಡ್‌ ತೋರಿಸಿ ಹೆದರಿಸಿ 10 ಸಾವಿರ ರೂ. ಮತ್ತು ಚಿನ್ನಾಭರಣ ದೋಚಿ ದ್ದಷ್ಟೇ ಅಲ್ಲದೇ ಮನೆಯಲ್ಲಿ ಮಹಿಳೆಯರ ಮೇಲೆ ಅತ್ಯಾ ಚಾರಕ್ಕೆ ಯತ್ನಿಸಿ ಪರಾರಿಯಾಗಿದ್ದರು. ದರೋಡೆ ಪ್ರಕರಣ ರಾಜಾನುಕುಂಟೆ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದ್ದು ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು ಮತ್ತಿಬ್ಬರು ತಲೆಮರೆಸಿ ಕೊಂಡಿದ್ದಾರೆ.

ಬಂಧಿತರಿಂದ 7 ಲಕ್ಷ ರೂ. ಮೌಲ್ಯದ 151 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದ್ದು, ಪ್ರಕರಣದಲ್ಲಿ ಭಾಗಿಯಾಗಿದ್ದ ಮತ್ತಿಬ್ಬರು ಆರೋಪಿಗಳು ಬಂಧನ ನಂತರ ಆರೋಪಿಗಳ ಹೆಸರು ತಿಳಿಸಲಾಗುವುದು ಎಂದರು.

ಡಿವೈಎಸ್ಪಿ ನಾಗರಾಜು, ರಾಜಾನುಕುಂಟೆ ಪಿಎಸ್‌ಐ ಭವಿತಾ, ವೃತ್ತ ನಿರೀಕ್ಷಕ ನವೀನ್‌ ಕುಮಾರ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next