Advertisement

ರಸ್ತೇಲಿ ನಿಲ್ಸಿದ್ರೂ ಚಾರ್ಜ್‌!

06:40 AM Sep 29, 2017 | Team Udayavani |

ನವದೆಹಲಿ: ಅಡ್ಡರಸ್ತೆ, ಮುಖ್ಯರಸ್ತೆ ಯಾವುದೇ ಇರಲಿ, ಮನೆಗಳ ಮುಂದೆ ಖಾಲಿ ಜಾಗ ಇರುವುದೇ ಇಲ್ಲ. ಅದರಲ್ಲೂ
ಬೆಂಗಳೂರಿನಲ್ಲಂತೂ ಎಲ್ಲರ ಮನೆ ಮುಂದೆಯೂ ಕಾರು, ಬೈಕುಗಳ ಸಾಲೇ ನಿಂತಿರುತ್ತದೆ. ನೀವೂ ನಿಮ್ಮ ವಾಹನಗಳನ್ನು ಮನೆ ಬಳಿ ರಸ್ತೆಯಲ್ಲಿ ನಿಲ್ಲಿಸಿಕೊಂಡಿದ್ದೀರಾ? ಎಚ್ಚರ, ಇನ್ಮುಂದೆ ಅದಕ್ಕೂ ಹಣ ಪಾವತಿಸಬೇಕಾದ ಸಮಯ ಬರಲಿದೆ!

Advertisement

ದೆಹಲಿ ಸರ್ಕಾರ ಇಂಥದ್ದೊಂದು ಕಾನೂನು ಜಾರಿಗೆ ಈಗಾಗಲೇ ತಯಾರಿ ಮಾಡಿಕೊಂಡಿದೆ. ಶೀಘ್ರದಲ್ಲಿಯೇ ಅದನ್ನು
ಅನುಷ್ಠಾನ ಮಾಡುವುದಾಗಿ ಹೇಳಿಕೊಂಡಿದ್ದು, ಗುರುವಾರ ಈ ಸಂಬಂಧ ಸಭೆ ನಡೆಸಿ ಚರ್ಚಿಸಲಾಗಿದೆ. ದೆಹಲಿ ಸಾರಿಗೆ ಸಚಿವ ಕೈಲಾಶ್‌ ಗೆಹ್ಲೋಟ್  ಅವರು ಸಂಚಾರಿ ಪೊಲೀಸರು ಹಾಗೂ ನಾಗರಿಕ ಸಂಸ್ಥೆಗಳೊಂದಿಗೆ ಈ ಕುರಿತು ಸಭೆ ನಡೆಸಿದ್ದಾರೆ. ಸಭೆ ಬಳಿಕ ಮಾತನಾಡಿರುವ ಲೆμrನೆಂಟ್‌ ಗವರ್ನರ್‌ ಅನಿಲ್‌ ಬೈಜಾಲ್‌, “”ಮನೆಗಳಿರುವ ಯಾವುದೇ ಬಡಾವಣೆಗಳ ರಸ್ತೆಯ ಮೇಲೆ ವಾಹನ ನಿಂತಿದ್ದರೆ ತಪಾಸಣೆ ನಡೆಸಲಾಗುತ್ತದೆ. ಈ ಬಗ್ಗೆ ದೆಹಲಿ ನಿರ್ವಹಣೆ ಮತ್ತು ಪಾರ್ಕಿಂಗ್‌ ನಿಯಮಗಳನ್ನು ಪರಿಚಯಿಸಲು ಸಿದಟಛಿತೆ ಮಾಡಿಕೊಂಡಿರುವ ದೆಹಲಿ ಸರ್ಕಾರ ಶೀಘ್ರದಲ್ಲೇ ಇದನ್ನು ಜಾರಿಗೆ ತರಲಿದೆ” ಎಂದು ತಿಳಿಸಿದ್ದಾರೆ.

ಮೂಲಗಳ ಪ್ರಕಾರ, ಪಾರ್ಕಿಂಗ್‌ ವ್ಯವಸ್ಥೆ ಇದ್ದೂ ರಸ್ತೆಗಳಲ್ಲಿ ನಿಲ್ಲಿಸಿದ್ದು ಕಂಡುಬಂದಲ್ಲಿ ದುಪ್ಪಟ್ಟು ವೆಚ್ಚವನ್ನು ನೀಡಬೇಕಾಗುತ್ತದೆ. ಅಲ್ಲದೆ, 500 ಮೀಟರ್‌ ವ್ಯಾಪ್ತಿಯಲ್ಲಿ ಪಾರ್ಕಿಂಗ್‌ ವ್ಯವಸ್ಥೆಗೂ ಅವಕಾಶ ಮಾಡಿಕೊಡಲಾಗುತ್ತದೆ. ದೆಹಲಿ ಸರ್ಕಾರದ ಈ ನಿಯಮ ಯಶಸ್ವಿಯಾದಲ್ಲಿ, ದೇಶದ ಎಲ್ಲಾ ನಗರಗಳಲ್ಲಿಯೂ ಶೀಘ್ರವೇ ಜಾರಿಗೆ ಬಂದರೂ ಅಚ್ಚರಿಪಡಬೇಕಾಗಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next