Advertisement

ಅಪಘಾತಗಳ ತಡೆಗೆರೋಡ್‌ರನ್ನರ್‌ ಆ್ಯಪ್‌

09:37 AM Mar 21, 2019 | |

ಬೆಂಗಳೂರು: ಭೀಕರ ರಸ್ತೆ ಅಪಘಾತಗಳು ಸಂಭವಿಸುವುದು ಸಾಮಾನ್ಯವಾಗಿ ಹೆದ್ದಾರಿಗಳಲ್ಲಿ. ಅತಿ ವೇಗ ಹಾಗೂ ವೇಗದ ಏಕತಾನತೆಯಿಂದ ಚಾಲಕ ನಿದ್ರೆಗೆ ಜಾರುವುದರಿಂದ, ಹೆದ್ದಾರಿಗಳಲ್ಲಿನ ಅಪಘಾತ ಸೂಕ್ಷ್ಮ ವಲಯಗಳ ಅರಿವು ಚಾಲಕನಿಗೆ ಇರುವುದಿಲ್ಲ.

Advertisement

ಇಂತಹ ಹಲವು ಕಾರಣಗಳಿಂದ ಅಪಘಾತಗಳು ಸಂಭವಿಸುತ್ತವೆ. ಹೀಗೆ ಅಪಘಾತಗಳು ಸಂಭವಿಸುವ ಸೂಕ್ಷ್ಮ ಸ್ಥಳ ತಲುಪುವ ಮುನ್ನವೇ ವಾಹನ ಚಾಲಕನಿಗೆ ಎಚ್ಚರಿಕೆ ನೀಡುವ “ರೋಡ್‌ರನ್ನರ್‌’ ಎಂಬ ಮೊಬೈಲ್‌ ಆ್ಯಪ್‌ ಅನ್ನು ಯಲಹಂಕದ ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ (ಎನ್‌ಎಂಐಟಿ) ವಿದ್ಯಾರ್ಥಿಗಳ ತಂಡ ಅಭಿವೃದ್ಧಿಪಡಿಸಿದೆ.

ಭಾರತ ಸರ್ಕಾರದಿಂದ ನಡೆದ 2019ನೇ ಸಾಲಿನ ಸ್ಮಾರ್ಟ್‌ ಇಂಡಿಯ ಹ್ಯಾಕ ಥಾನ್‌ ಸ್ಪರ್ಧೆಯಲ್ಲಿ ಈ ಅನ್ವೇಷಣೆಗೆ ಪ್ರಥಮ ಬಹುಮಾನ ಲಭಿಸಿದೆ. ಈ ಆ್ಯಪ್‌ಗೆ ಮತ್ತಷ್ಟು ಸುಧಾರಿತ ಅಂಶಗಳನ್ನು ಸೇರಿಸಿ ಅಭಿವೃದ್ಧಿಪಡಿಸುವಂತೆ ಭಾರತ ಸರ್ಕಾರದ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ನಿರ್ವಹಣೆ ಸಚಿ ವಾಲಯ, ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾದ್ಯಾಲಯಕ್ಕೆ ಅಧಿಕೃತವಾಗಿ ಸೂಚಿಸಿದೆ.

ಈ ಆ್ಯಪ್‌ ಸಂಶೋಧನೆ ಹಾಗೂ ಅಭಿವೃದ್ಧಿ ತಂಡದ ನೇತೃತ್ವವನ್ನು ಫಜಲ್‌ ರೆಹಮಾನ್‌ ವಹಿಸಿದ್ದರು. ಇವರಿಗೆ ವಿದ್ಯಾರ್ಥಿಗಳಾದ ಅಭ್ರಜ್ಯೋತಿ ಪಾಲ್‌, ಯಶ್‌ ಜೈಸ್ವಾಲ್‌, ಅಮಿತ್‌ ಕೆ.ಕೆ, ದೀಪ್ತಾ ಎಂ, ಸಾರಂಗ್‌ ಪಾರಿಖ್‌, ಅಜಯ್‌ ಎಂ ಮತ್ತು ಯಶಸ್‌ ಎಂ. ಸಾಥ್‌ ನೀಡಿದ್ದರು. ಎನ್‌ಎಂಐಟಿ ಮಾಹಿತಿ ತಂತ್ರಜ್ಞಾನ ಭಾಗದ ಮುಖ್ಯಸ್ಥ ಡಾ. ಎಚ್‌.ಎ.ಸಂಜಯ್‌ ಮಾರ್ಗದರ್ಶನ ನೀಡಿದ್ದರು.

ಕಾರ್ಯನಿರ್ವಹಣೆ ಹೇಗೆ?: ಜಿ.ಪಿ.ಎಸ್‌ ಆಧಾರಿತ ಜಿಯೋ ಫೆನ್ಸಿಂಗ್‌ ಮೂಲಕ ದತ್ತಾಂಶಗಳನ್ನು ಪರಿಶೀಲಿಸಿ, ಈ ಆ್ಯಪ್‌ ಚಾಲಕನಿಗೆ ಅಪಘಾತ ವಲಯ ತಲುಪುವ ಮುನ್ನವೇ ಎಚ್ಚರಿಕೆ ಸಿಗ್ನಲ್‌ ನೀಡುತ್ತದೆ. ಈಗಾಗಲೇ ಗುರುತಿಸಲ್ಪಟ್ಟ ತಾಣಗಳ ಜತೆಗೆ, ರಸ್ತೆಯನ್ನು ಬಳಸುವ ಚಾಲಕರೂ ಸೂಕ್ಷ್ಮ ಹಾಗೂ ಅತಿಸೂಕ್ಷ್ಮ ತಾಣಗಳನ್ನು ತಾವೇ ಗುರುತಿಸಿ ಅವುಗಳನ್ನೂ ಈ ಆ್ಯಪ್‌ಗೆ ಸೇರಿಸಬಹುದು. ಇದರ ವ್ಯಾಪ್ತಿಯನ್ನು ಹೆದ್ದಾರಿಯ ನಿರ್ವಹಣೆಯ ಹೊಣೆ ಹೊತ್ತವರು ಹಾಗೂ ಬಳಕೆದಾರರೂ ಒಟ್ಟೊಟ್ಟಿಗೆ ವಿಸ್ತರಿಸ ಬಹುದು.

Advertisement
Advertisement

Udayavani is now on Telegram. Click here to join our channel and stay updated with the latest news.

Next