Advertisement

ನಿತ್ಯ ಗುಂಡಿಬಿದ ರಸ್ತೆಯಲ್ಲಿ ವಾಹನ ಸಂಚಾರ

04:44 PM Jul 25, 2022 | Team Udayavani |

ಅರಕಲಗೂಡು: ತಾಲೂಕಿನ ಕೇರಳಾಪುರ-ಬಸವಾಪಟ್ಟಣ ನಡುವಿನ ರಸ್ತೆ ಸಂಚಾರ ಸಾರ್ವಜನಿಕರ ಪ್ರಯಾಣಕ್ಕೆ ಅಪಾಯ ತಂದೊಡ್ಡಿದೆ.

Advertisement

ಮಾಗಡಿ- ಸೋಮವಾರಪೇಟೆ ಮಾರ್ಗವಾಗಿ ಹಾದು ಹೋಗಿರುವ ಈರಸ್ತೆ ಕಾಮಗಾರಿ ಆರಂಭವಾಗಿ ಎರಡುವರ್ಷಕಳೆಯುತ್ತಾ ಬಂದಿದ್ದರೂ ಕೂಡರಾಮನಾಥಪುರ ಮತ್ತು ಕೇರಳಾಪುರನಡುವಿನ ರಸ್ತೆ ಸಂಪೂರ್ಣವಾಗಿ ಪೂರ್ಣಗೊಳಿಸಿಲ್ಲ. ಪರಿಣಾಮ ಕೇರಳಾಪುರ,

ಕಾಳೇನಹಳ್ಳಿ, ಹೊನ್ನೇನಹಳ್ಳಿ, ಬಸವಾಪಟ್ಟಣ, ರಾಮನಾಥಪುರ ನಡುವಿನರಸ್ತೆಯಲ್ಲಿ ತೆರೆದುಕೊಂಡಿರುವ ಗುಂಡಿಗಳಮೇಲೆ ವಾಹನ ಸಂಚಾರ ತೀವ್ರ ಸಂಕಷ್ಟದಿಂದ ಕೂಡಿದೆ.

ಪ್ರಯಾಣಿಕರಿಗೆ ನಿತ್ಯ ನರಕ: ಕ್ಷೇತ್ರದಲ್ಲಿ ಇದುವರೆಗೆ ಶಾಸಕರಾಗಿ ಆಯ್ಕೆಯಾಗಿದ್ದಹಾಲಿ ಮತ್ತು ಮಾಜಿ ಶಾಸಕರು ಹಲವಾರು ದಶಕಗಳ ಕಾಲ ಹದಗೆಟ್ಟುಹೋಗಿದ್ದ ರಸ್ತೆ ಅಭಿವೃದ್ಧಿಗೆ ಮನಸ್ಸುಮಾಡದ ಪರಿಣಾಮ ಈ ದುಸ್ಥಿತಿ ತಲೆದೋರಿದೆ. ಜನವಸತಿ ಪ್ರದೇಶದಲ್ಲಿ ರಸ್ತೆ ಹಾದುಹೋಗಿರುವ ಹಿನ್ನೆಲೆ ರಸ್ತೆಯಲ್ಲಿಬಿದ್ದಿರುವ ಗುಂಡಿಗಳಲ್ಲಿ ಮಳೆ ನೀರುಸಂಗ್ರಹವಾಗಿದೆ. ಮಳೆಯಲ್ಲಿ ಸವಾರರು ಜೀವ ಕೈಯಲ್ಲಿ ಹಿಡಿದು ಪಯಣಿಸುತ್ತಿದ್ದಾರೆ.

ಕೆಲವರು ಗುಂಡಿ ಇಳಿಸುವುದನ್ನು ತಪ್ಪಿಸುವ ಸಲುವಾಗಿ ದಿಕ್ಕು ತಪ್ಪಿದವರಂತೆವಿರುದ್ಧ ದಿಕ್ಕಿನಲ್ಲಿ ಚಲಿಸುತ್ತಿ ದ್ದು ಹಾಳಾದಈ ರಸ್ತೆ ಅಕ್ಷರಶಃ ಪ್ರಯಾಣಿಕರಿಗೆ ಯಮ ಲೋಕದ ರಹದಾರಿಯಾಗಿ ಬದಲಾಗಿದೆ.

Advertisement

ಜನಪ್ರತಿನಿಧಿಗಳ ನಿರ್ಲಕ್ಷ್ಯ: ರಾಮನಾಥಪುರ-ಕೇರಳಾಪುರ ನಡುವಿನ ರಸ್ತೆ ಅಭಿವೃದ್ಧಿ ಹಿನ್ನಡೆಗೆ ಹಾಲಿ ಶಾಸಕರು, ಮಾಜಿ ಶಾಸಕರು ನೇರ ಕಾರಣವಾಗಿದ್ದಾರೆ.ಪರಿಹಾರ ಕಾರ್ಯ ಇನ್ನೂ ಪೂರ್ಣಗೊಳ್ಳದ ಪರಿಣಾಮ ಜನವಸತಿ ಪ್ರದೇಶದಲ್ಲಿ ನೂತನ ರಸ್ತೆ ಅಭಿವೃದ್ಧಿ ಕೆಲಸ ನನೆಗುದಿಗೆ ಬಿದ್ದಿದೆ. ಇನ್ನಾದರೂ ಜನಪ್ರತಿನಿಧಿಗಳು ರಸ್ತೆ ಅಭಿವೃದ್ಧಿಯನ್ನುಜರೂರಾಗಿ ಕೈಗೊಳ್ಳುವ ನಿಟ್ಟಿನಲ್ಲಿ ಮುಂದಾಗಬೇಕು. ಇಲ್ಲವಾದರೇ ನಿತ್ಯವೂ ತೊಂದರೆಅನುಭವಿಸುತ್ತಿರುವ ಪ್ರಯಾಣಿಕರು,ವಾಹನ ಚಾಲಕರು, ಸಾರ್ವಜನಿಕರು ರಸ್ತೆತಡೆ, ಪ್ರತಿಭಟನೆಯನ್ನು ಹಮ್ಮಿಕೊಳ್ಳಲಿದ್ದಾರೆಎಂದು ಸ್ಥಳೀಯ ಮುಖಂಡರಾದಕೃಷ್ಣೇಗೌಡ, ಕುಮಾರ, ಚಲುವರಾಜು ಎಚ್ಚರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next