ಚಿಕ್ಕೋಡಿ: ರಾಜ್ಯ ಹೆದ್ದಾರಿಯಿಂದ ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿದ ಸಂಕೇಶ್ವರ-ಜೇವರ್ಗಿ ಹೆದ್ದಾರಿ ಸಂಪೂರ್ಣ ಹಾಳಾಗಿ ಹೋಗಿದೆ. ಚಿಕ್ಕೋಡಿ ನಗರ ಮಧ್ಯೆಹಾದು ಹೋಗಿರುವ ರಸ್ತೆಯಲ್ಲಿ ಭಾರಿ ಗಾತ್ರದ ತಗ್ಗು ಗುಂಡಿಗಳು ಬಿದ್ದಿದ್ದು, ಸವಾರರ ಪಾಲಿಗೆ ಪ್ರಯಾಣ ಬಲು ಸಂಕಟವಾಗಿ ಪರಿಣಮಿಸಿದೆ.
ಚಿಕ್ಕೋಡಿ ನಗರದ ಶ್ರೀದೇವಿ ಹೋಟೆಲ್‌ಮುಂಭಾಗದ ತಿರುವಿನಲ್ಲಿ ಮೊಳಕಾಲು ಉದ್ದದತಗ್ಗುಗಳು ಬಿದ್ದಿವೆ. ನಿತ್ಯ ಸಂಚರಿಸುವ ವಾಹನ ಸವಾರರ ಪಾಲಿಗೆ ಅಕ್ಷರಶ: ನರಕ ಉಂಟಾಗಿದೆ. ಟಂಟಂ, ದ್ವಿಚಕ್ರ ವಾಹನಗಳು, ಸಣ್ಣ ಕಾರುಗಳು, ಅಟೋ ರಿಕ್ಷಾ ಸವಾರರು ಪ್ರಾಣ ಕೈಯಲ್ಲಿ ಹಿಡಿದು ಸಂಚರಿಸಬೇಕಾದ ಸ್ಥಿತಿ ಉಂಟಾಗಿದೆ. ಇಲ್ಲಿಂದ ಸ್ವಲ್ಪ ಮುಂದೆ ಹೋಗುವಷ್ಟರಲ್ಲಿ ಅಂಕಲಿಕೂಟದ ಬಳಿ ಎರಡು ಭಾರಿ ಗಾತ್ರದ ತಗ್ಗು ಗುಂಡಿಗಳು ಬಿದ್ದಿವೆ. ಇನ್ನೂ ಸ್ವಲ್ಪ ಮುಂದೆ ಹೋದರೆ ಅಂಬೇಡ್ಕರ ನಗರದಕ್ರಾಸ್ ಹತ್ತಿರ ದೊಡ್ಡ ಗಾತ್ರದ ತಗ್ಗುಗುಗಳು ಬಿದ್ದಿರುವುದರಿಂದ ಪ್ರಯಾಣಿಕರು ತೀವ್ರ ಪರದಾಡುವಂತಾಗಿದೆ.
ಚಿಕ್ಕೋಡಿ ದಕ್ಷಿಣ ಭಾಗದ ಕಡೆ ನೋಡಿದರೆ ವಿದ್ಯಾ ನಗರದ ಹತ್ತಿರ ನಾಲ್ಕೈದು ಗುಂಡಿಗಳು ಬಾಯಿ ತೆರೆದಿವೆ. ಅಲ್ಲಿಂದ ಸಂಕೇಶ್ವರ ಕ್ರಾಸ್‌ದ ಘಾಟ್ ಬಳಿ ಅಂದಾಜು 200 ಮೀ., ರಸ್ತೆಸಂಪೂರ್ಣ ಹಾಳಾಗಿದೆ. ಮಳೆಗಾಲದಲ್ಲಿ ತಗ್ಗು ಗುಂಡಿಯಲ್ಲಿ ಮಳೆ ನೀರು ನಿಂತು, ವಾಹನ ಸವಾರರು ಪರದಾಡುವಂತಾಗಿದೆ. ರಾಜ್ಯ ಹೆದ್ದಾರಿ ಇರುವಾಗಲೇ ಲೋಕೋಪಯೋಗಿ ಇಲಾಖೆಯಿಂದ ಹಾಳಾದರಸ್ತೆಯನ್ನು ದುರಸ್ತಿ ಮಾಡಲಾಗಿತ್ತು. ಆದರೆರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿದ ಮೇಲೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಹಾಳಾದ ರಸ್ತೆ ದುರಸ್ತಿಗೆ ನಿರ್ಲಕ್ಷ್ಯ ವಹಿಸಿದ್ದಾರೆ.
ಈ ತಗ್ಗು ಗುಂಡಿಯಲ್ಲಿ ದಿನನಿತ್ಯ ಹತ್ತಾರುವಾಹನಗಳು ಕೆಟ್ಟು ನಿಲ್ಲುತ್ತಿವೆ. ಹಾಳಾದ ರಸ್ತೆಯ ಮೇಲೆ ಬಿದ್ದಿರುವ ತಗ್ಗು ಗುಂಡಿ ಮುಚ್ಚಲುಸರ್ಕಾರ ಸೂಕ್ತ ಕ್ರಮ ವಹಿಸಬೇಕು ಎನ್ನುತ್ತಾರೆ ಸ್ಥಳೀಯರು. ಜಿಲ್ಲಾ ಸ್ಥಾನಮಾನ ಹೊಂದಿರುವ ಚಿಕ್ಕೋಡಿ ನಗರದ ಹೃದಯ ಭಾಗದಲ್ಲಿ ಈ ಹೆದ್ದಾರಿ ಹಾದು ಹೋಗಿದ್ದು, ನಗರ ಮಾರ್ಗವಾಗಿದಿನನಿತ್ಯ ಸಾವಿರಾರು ವಾಹನ ಚಲಿಸುತ್ತವೆ. ಸರಕಾರ ಕೂಡಲೇ ರಸ್ತೆಯ ತಗ್ಗು ಗುಂಡಿ ಮುಚ್ಚಿಸವಾರರಿಗೆ ಅನುಕೂಲ ಮಾಡಿಕೊಡಬೇಕು ಎನ್ನುತ್ತಾರೆ ಸವಾರರು.
ಗುಣಮಟ್ಟದ ರಸ್ತೆ ನಿರ್ಮಿಸುವಲ್ಲಿಸರ್ಕಾರ ವಿಫಲವಾಗಿದೆ. ರಸ್ತೆಕೆಟ್ಟಿರುವುದು ಗಮನಕ್ಕೆ ಬಂದಿದೆ. ತಗ್ಗು ಗುಂಡಿ ಮುಚ್ಚಿ ಸವಾರರಿಗೆಅನುಕೂಲ ಕಲ್ಪಿಸಲು ಕೂಡಲೇ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡುತ್ತೇನೆ.
– ಗಣೇಶ ಹುಕ್ಕೇರಿ, ಶಾಸಕರು.
ಈಗ ರಾಷ್ಟ್ರೀಯ ಹೆದ್ದಾರಿಯಾಗಿಮೇಲ್ದರ್ಜೆಗೇರಿದೆ. ಈಗಾಗಲೇ ತಗ್ಗು ಗುಂಡಿ ಬಿದ್ದಿರುವುದನ್ನು ರಾಷ್ಟ್ರೀಯಹೆದ್ದಾರಿ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಮತ್ತೂಮ್ಮೆ ಸಂಬಂಧಿಸಿದ ಅಧಿಕಾರಿಗಳಿಗೆ ಮಾಹಿತಿ ನೀಡಲಾಗುತ್ತದೆ.
– ಬಿ.ಬಿ.ಬೇಡಕಿಹಾಳೆ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ಲೋಕೋಪಯೋಗಿ ಇಲಾಖೆ, ಚಿಕ್ಕೋಡಿ.