Advertisement

ರಸ್ತೆ ಕಾಮಗಾರಿಗೆ ಶಾಸಕರಿಂದ ಚಾಲನೆ

06:22 PM Aug 28, 2020 | Suhan S |

ಚಿಕ್ಕೋಡಿ: ಗಡಿಭಾಗದ ಮತ್ತು ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸದಲಗಾ ಪಟ್ಟಣದಲ್ಲಿ ಕೇಂದ್ರೀಯ ಮಹಾವಿದ್ಯಾಲಯ ಆಡಳಿತಾತ್ಮಕ ಮಂಜೂರಾತಿ ಪಡೆದಿದ್ದು, ಶಾಲೆಗೆ ಬರುವ ವಿದ್ಯಾರ್ಥಿಗಳಿಗೆ ಮತ್ತು ಪಾಲಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ರಸ್ತೆ ನಿರ್ಮಾಣ ಕೈಗೊಳ್ಳಲಾಗಿದೆ ಎಂದು ಶಾಸಕ ಗಣೇಶ ಹುಕ್ಕೇರಿ ಹೇಳಿದರು.

Advertisement

ತಾಲೂಕಿನ ಸದಲಗಾ ಪಟ್ಟಣದ ವ್ಯಾಪ್ತಿಯ ಬೈನಾಕವಾಡಿ ಗ್ರಾಮದಿಂದ  ಕೇಂದ್ರೀಯ ಮಹಾವಿದ್ಯಾಲಯದ ಮಾರ್ಗವಾಗಿ ಸದಲಗಾ-ನಾಗರಾಳ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು. ರಸ್ತೆ ಕಾಮಗಾರಿಗೆ ಎಸ್‌ ಎಫ್‌ಸಿ ಅನುದಾನದ ಯೋಜನೆಯಡಿ 15.55 ಲಕ್ಷ ರೂ. ಅನುದಾನ ಮಂಜೂರಾಗಿದ್ದು, ಒಂದು ತಿಂಗಳಲ್ಲೇ ಕಾಮಗಾರಿ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚಿಸಿದರು.

ಚಿಕ್ಕೋಡಿ-ಸದಲಗಾ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಶೈಕ್ಷಣಿಕ ಕ್ಷೇತ್ರ ಅಭಿವೃದ್ಧಿ ದೃಷ್ಟಿಕೋನ ಇಟ್ಟುಕೊಂಡು ಶ್ರಮಿಸಲಾಗುತ್ತಿದೆ. ರೈತರ ಬಗ್ಗೆ ಕಾಳಜಿ ವಹಿಸಿ ನೀರಾವರಿ ಯೋಜನೆಗಳನ್ನು ಅನುಷ್ಟಾನಗೊಳಿಸುವುದರ ಜೊತೆಗೆ ಆರೋಗ್ಯದ ಕುರಿತು ಕಾಳಜಿ ವಹಿಸಲಾಗುತ್ತಿದೆ ಎಂದರು.

ಅಭಿಜಿತ ಪಾಟೀಲ, ಸತೀಶ ಪಾಟೀಲ, ಬಸವರಾಜ ಹಣಬರ, ಉದಯ ಬದನಿಕಾರಿ, ರವಿ ಗೋಸಾವಿ, ಪ್ರಕಾಶ ಅನೂರೆ, ಸಂತೋಷ ನವಲೆ, ಸಮೀರ ಪಾಟೀಲ, ಪೀರಗೌಡ ಪಾಟೀಲ, ಅಪ್ಪಾಸಾಬ ಕುರಬೇಟ್ಟಿ, ದಿಲೀಪ ಹಂಚನಾಳೆ, ಋತುರಾಜ ಪಾಟೀಲ, ಸಚಿನ್‌ ಬಿಂದಗೆ ಇದ್ದರು.

……………………………………………………………………………………………………………………… 

Advertisement

ಕೋವಿಡ್ ವಾರಿಯರ್ಸ್‌ಗೆ ಚಿರಋಣಿ : ಹುಕ್ಕೇರಿ: ಕೋವಿಡ್ ನಿಯಂತ್ರಣಕ್ಕಾಗಿ ಸರ್ಕಾರ ಹೊರಡಿಸಿದ ಲಾಕ್‌ಡೌನ್‌ ಸಮಯದಲ್ಲಿ ತಾಲೂಕಾ ಆಡಳಿತದೊಡನೆ ಸಹಕರಿಸಿದ ಸಾರ್ವಜನಿಕರಿಗೆ ಹಾಗೂ ವಾರಿಯರ್ಸ್‌ಗಳಿಗೆ ಚಿರಋಣಿಯಾಗಿದ್ದೇನೆಂದು ತಹಶೀಲ್ದಾರ್‌ ಅಶೋಕ ಗುರಾಣಿ ಹೇಳಿದರು. ಪಟ್ಟಣದ ವಿಕರ್ತಮಠದಲ್ಲಿ ವೃತ್ತಿನಿರತ ಛಾಯಾಗ್ರಾಹಕರ ದಿನಾಚರಣೆಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ದಿನದಿಂದ ದಿನಕ್ಕೆ ಕೋವಿಡ್ ರೋಗವು ವ್ಯಾಪಿಸುತ್ತಿದೆ. ಸರ್ಕಾರದ ನಿಯಮಾವಳಿಗಳನ್ನು ನಾವೆಲ್ಲರೂ ಪಾಲಿಸಿದಲ್ಲಿ ರೋಗ ನಿಯಂತ್ರಣ ಮಾಡಲು ಸಾಧ್ಯವಾಗುತ್ತದೆ. ಕೋವಿಡ್ ವಾರಿಯರ್‌ಗಳಾಗಿ ಸೇವೆ ಸಲ್ಲಿಸುತ್ತಿರುವ ಪರ್ತಕರ್ತರು, ಆರೋಗ್ಯ, ಕಂದಾಯ ಸಿಬ್ಬಂದಿ, ಛಾಯಾಗ್ರಾಹಕರು ಸೇರಿದಂತೆ ಇನ್ನಿತರ ಇಲಾಖೆ ಅಧಿಕಾರಿಗಳು ಕೂಡ ಜಾಗೃತಿಯಿಂದ ಕಾರ್ಯನಿರ್ವಹಿಸಬೇಕೆಂದು ಸಲಹೆ ನೀಡಿದರು.

ಸಂಘದ ಅಧ್ಯಕ್ಷ ಸುರೇಶ ಜಿನರಾಳೆ ಪ್ರಾಸ್ತಾವಿಕ ಮಾತನಾಡಿದರು. ಜಿಲ್ಲಾ ಸಂಘದ ಅಧ್ಯಕ್ಷ ಸತೀಶ ಶೆಟ್ಟಿ, ಕಾರ್ಯದರ್ಶಿ ಮಂಜುನಾಥ ಕುಂದರಗಿ, ನಿರ್ದೇಶಕ ಬಸವರಾಜ ರಾಮಣ್ಣವರ, ಮಧು ಸೋನಗೋಜೆ, ಹಿರಿಯ ಛಾಯಾಗ್ರಾಹಕ ಶಶಿಕಾಂತ ಮಿಶ್ರಕೋಟಿ, ಬಾಬು ನಾಯಿಕ, ಅಪ್ಪು ಹುಕ್ಕೇರಿ ಉಪಸ್ಥಿತರಿದ್ದರು. ಶಿದ್ರಾಮ ಮೂತ್ತೂರ ಸ್ವಾಗತಿಸಿದರು. ಸಿ.ಎಂ. ದರಬಾರಿ ನಿರೂಪಿಸಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next