Advertisement

ಬಿದ್ಕಲ್‌ಕಟ್ಟೆ –ಶಿರಿಯಾರ –ಬಾರ್ಕೂರು ರಸ್ತೆ ದುರಸ್ತಿ ಕಾರ್ಯ ಆರಂಭ

11:42 PM Dec 10, 2019 | mahesh |

ಕುಂದಾಪುರ: ಬಿದ್ಕಲ್‌ಕಟ್ಟೆಯಿಂದ ಶಿರಿಯಾರ – ಬಾರ್ಕೂರು ಜಿಲ್ಲಾ ಮುಖ್ಯ ರಸ್ತೆಯ ಅಲ್ಲಲ್ಲಿ ಹದಗೆಟ್ಟಿರುವ ರಸ್ತೆಯ ದುರಸ್ತಿ ಕಾಮಗಾರಿ ಕೊನೆಗೂ ಆರಂಭಗೊಂಡಿದೆ. ಗಾವಳಿ ಬಳಿ ಅಪಾಯಕಾರಿ ಸರ್ಕಲ್‌ ಅಗಲೀಕರಣ ಹಾಗೂ ಕಲ್ಮರ್ಗಿ ಸಮೀಪ ಕಾಂಕ್ರೀಟೀಕರಣ ಕಾರ್ಯ ಶುರುವಾಗಿದೆ.

Advertisement

ಕುಂದಾಪುರ ಉಪ ವಿಭಾಗದ ಲೋಕೋಪಯೋಗಿ ಇಲಾಖೆ ವ್ಯಾಪ್ತಿಯ ಗಾವಳಿ ತಿರುವಿನ ಅಗಲೀಕರಣಕ್ಕೆ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಯವರ ಪ್ರಯತ್ನದಿಂದಾಗಿ ಬ್ಲಾಕ್‌ ಸ್ಪಾಟ್‌ನಡಿ ರಸ್ತೆ ಸುರಕ್ಷತಾ ಕಾಮಗಾರಿ ನೆಲೆಯಲ್ಲಿ ಸುಮಾರು 500 ಮೀ. ರಸ್ತೆಗೆ 1 ಕೋ.ರೂ. ಮಂಜೂರಾಗಿದ್ದು, ಅದರ ಕಾಮಗಾರಿ ಆರಂಭಗೊಂಡಿದೆ.

ಉಡುಪಿ ಲೋಕೋಪಯೋಗಿ ಇಲಾಖೆ ವ್ಯಾಪ್ತಿಯ ಕಲ್ಮರ್ಗಿ, ಶಿರಿಯಾರದವರೆಗಿನ ಸುಮಾರು 460 ಮೀ. ರಸ್ತೆಗೆ ಕಾಂಕ್ರೀಟೀಕರಣಕ್ಕಾಗಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಯವರ ಪ್ರಯತ್ನದಿಂದಾಗಿ 50 ಲಕ್ಷ ರೂ. ಮಂಜೂರಾಗಿದ್ದು, ಇದರ ಕಾಮಗಾರಿ ಕೂಡ ಈಗ ಆರಂಭವಾಗಿದೆ.

ಉದಯವಾಣಿ ವರದಿ
ಗಾವಳಿಯಿಂದ ಬಾರ್ಕೂರುವರೆ ಗಿನ ಈ ಜಿಲ್ಲಾ ಮುಖ್ಯ ರಸ್ತೆಯ ಅನೇಕ ಕಡೆ ಹೊಂಡ ಗುಂಡಿ ಗಳಿಂದಾಗಿ ವಾಹನಗಳ ಸುಗಮ ಸಂಚಾರಕ್ಕೆ ತೊಂದರೆ ಕುರಿತು “ಉದಯವಾಣಿ’ಯು “ರೋಡ್‌ ಟ್ರಿಪ್‌’ ಎನ್ನುವ ಸರಣಿಯಲ್ಲಿ ನ. 16ರಂದು ವರದಿಯನ್ನು ಪ್ರಕಟಿಸಿ, ಸಂಬಂಧ ಪಟ್ಟವರ ಗಮನ ಸೆಳೆದಿತ್ತು. ಗಾವಳಿ ತಿರುವಿನಲ್ಲಿ ಅಗಲೀಕರಣ ಕಾಮಗಾರಿ ನಡೆಯುತ್ತಿರುವುದು.

Advertisement

Udayavani is now on Telegram. Click here to join our channel and stay updated with the latest news.

Next