Advertisement

ಮನಸೋ ಇಚ್ಛೆ ರಸ್ತೆ ಅಗೆದರೆ ಕೇಸ್‌

04:18 PM Feb 22, 2021 | Team Udayavani |

ಮುಧೋಳ: ನಮ್ಮ ಗ್ರಾಮಕ್ಕೆ ಸರಿಯಾದ ರಸ್ತೆಯಿಲ್ಲ, ನಮ್ಮೂರಿಗೆ ಹಾಕಿದ್ದ ಟಾರು ಕಿತ್ತು ಹೋಗಿದೆ, ಅಧಿ ಕಾರಿಗಳು ಹಾಗೂ ಗುತ್ತಿಗೆದಾರರು ಗ್ರಾಮದ ರಸ್ತೆ ಕಾಮಗಾರಿ ಕಳಪೆಯಾಗಿ ನಿರ್ಮಿಸುತ್ತಾರೆಂಬ ದೂರುಗಳೇ ಹೆಚ್ಚಾಗಿ ಕೇಳಿ ಬರುತ್ತಿವೆ. ಆದರೆ, ನಿರ್ಮಾಣವಾಗಿರುವ ರಸ್ತೆ ಬಗ್ಗೆ ನೀವೆಷ್ಟು ಮುತುವರ್ಜಿ ವಹಿಸಿದ್ದೀರಾ ಎಂದು ಸಾರ್ವಜನಿಕರನ್ನು ಪ್ರಶ್ನಿಸಿದರೆ ಬಹುಶಃ ಎಲ್ಲರೂ ಮೌನವಾಗುತ್ತಾರೆ.

Advertisement

ನೂತನವಾಗಿ ನಿರ್ಮಿಸಿರುವ ರಸ್ತೆಗಳ ಬಗ್ಗೆ ಕಾಳಜಿ ವಹಿಸುವುದಕ್ಕಿಂತ ತಮ್ಮ ತಮ್ಮ ಅವಶ್ಯಕತೆಗೆ ತಕ್ಕಂತೆ ಬಳಸಿಕೊಳ್ಳುವವರೇ ಹೆಚ್ಚಾಗಿದ್ದಾರೆ. ರಸ್ತೆ ಅಗೆದು ನೀರಾವರಿಗೆ ಪೈಪ್‌ಗ್ಳ ಅಳವಡಿಸುತ್ತಿರುವುದುಇತ್ತೀಚೆಗೆ ಹೆಚ್ಚಾಗಿ ಕಂಡು ಬರುತ್ತಿದೆ. ಈ ಎಲ್ಲಅವಾಂತರ ತಡೆಯಲು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ನೂತನ ಮಾರ್ಗೋಪಾಯ ಕಂಡುಕೊಂಡಿದ್ದಾರೆ.

ಹೌದು. ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ಪ್ರಕಾರ ಇನ್ಮುಂದೆ ಮನಸೋ ಇಚ್ಛೆ ರಸ್ತೆಅಗೆಯುವಂತಿಲ್ಲ. ಒಂದು ವೇಳೆ ರಸ್ತೆ ಅಗೆಯುವಅನಿವಾರ್ಯತೆ ನಿರ್ಮಾಣವಾದರೆ ಸಂಬಂಧಿಸಿದ ಅಧಿಕಾರಿಗಳನ್ನು ಭೇಟಿಯಾಗಿ ರಸ್ತೆ ಅಗೆಯಲು ಸೂಕ್ತ ಕಾರಣ ನೀಡಿ ಅನುಮತಿ ಪಡೆಯುವುದು ಕಡ್ಡಾಯ. ಅಧಿಕಾರಿಗಳು ಅನುಮತಿ ನೀಡುವ ಮುನ್ನ ಗ್ರಾಮೀಣ ರಸ್ತೆ, ಮುಖ್ಯ ರಸ್ತೆ, ಜಿಲ್ಲಾ ಮುಖ್ಯ ರಸ್ತೆಗಳನ್ನುಗುರುತಿಸಿ ಸರ್ಕಾರ ನಿಗದಿಪಡಿಸಿರುವ ದರವನ್ನು ಸಾರ್ವಜನಿಕರಿಂದ ಪಡೆದು ರಸ್ತೆ ಅಗೆತಕ್ಕೆ ಅನುಮತಿ ನೀಡುತ್ತಾರೆ.

ರಸ್ತೆ ಅಗೆದರೆ ಕೇಸ್‌ :

ಒಂದು ವೇಳೆ ಅಧಿಕಾರಿಗಳ ಅನುಮತಿಯಿಲ್ಲದೇ ರಸ್ತೆ ಅಗೆದರೆ ಸಂಬಂಧಿಸಿದ ಅಧಿಕಾರಿಗಳು ರಸ್ತೆ ಅಗೆದವರ ವಿರುದ್ಧ ದೂರು ದಾಖಲಿಸುತ್ತಾರೆ. ರಸ್ತೆ ಅಗೆಯುವುದನ್ನು ಗಂಭೀರವಾಗಿ ಪರಿಗಣಿಸಿರುವ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರೂ ಸಹ ರಸ್ತೆ ಅನುಮತಿ ಇಲ್ಲದೇ ಅಗೆಯುವವರ ವಿರುದ್ಧದೂರು ದಾಖಲಿಸುವಂತೆ ಹಲವಾರು ಸಭೆಗಳಲ್ಲಿ ಅಧಿಕಾರಿಗೆ ಸೂಚನೆ ನೀಡಿದ್ದಾರೆ.

Advertisement

ಹೊಸ ಮಾರ್ಗೋಪಾಯ :

ಸದ್ಯ ತಾಲೂಕಿನಲ್ಲಿ ನಿರ್ಮಾಣಗೊಳ್ಳುತ್ತಿರುವ ನೂತನ ರಸ್ತೆಗಳಲ್ಲಿ ದೊಡ್ಡ ಪ್ರಮಾಣದ ಪೈಪ್‌ ಅಳವಡಿಸಲು ಮುಂದಾಗಿದ್ದಾರೆ. ಈ ಪೈಪ್‌ಗ್ಳ ಮೂಲಕ ರೈತರು ತಮ್ಮ ನೀರಾವರಿ ಪೈಪ್‌ಗ್ಳನ್ನು ರಸ್ತೆಯ ಒಂದು ಬದಿಯಿಂದಮತ್ತೂಂದು ಬದಿಗೆ ರಸ್ತೆ ಅಗೆಯದೇ ತೆಗೆದುಕೊಂಡು ಹೋಗಬಹುದು. ಇದರಿಂದ ರಸ್ತೆ ಅಗೆಯುವುದುತಪ್ಪಲಿದೆ. ಹಾಗೆಯೇ ಅನುಮತಿಗಾಗಿ ಸರ್ಕಾರಿ ಕಚೇರಿಗಳಿಗೆ ಅಲೆಯುವ ತಾಪತ್ರಯವೂ ತಪ್ಪಲಿದೆ ಎನ್ನುವುದು ಅಧಿಕಾರಿಗಳ ಅಭಿಮತ

6 ತಿಂಗಳಲ್ಲಿ ಪೂರ್ಣ :

ತಾಲೂಕಿನಲ್ಲಿ ಪ್ರವಾಹ ಹಾಗೂ ಮಹಾಪೂರದಿಂದ ಬಹುತೇಕ ರಸ್ತೆಗಳು ಹಾಳಾಗಿದ್ದವು. ಅವುಗಳ ನಿರ್ಮಾಣ ಕಾರ್ಯ ಬಹುತೇಕ ಪೂರ್ಣಗೊಳ್ಳುವ ಹಂತದಲ್ಲಿವೆ. ಮುಂದಿನ ಆರು ತಿಂಗಳಲ್ಲಿ ತಾಲೂಕಿನ ಬಹುತೇಕ ರಸ್ತೆಗಳ ಕಾಮಗಾರಿ ಪೂರ್ಣಗೊಳ್ಳಲಿವೆ ಎನ್ನುತ್ತಾರೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು.

ರಸ್ತೆಗಳನ್ನು ಕಾಪಾಡಿಕೊಳ್ಳುವಲ್ಲಿ ಸಾರ್ವಜನಿಕರ ಸಹಕಾರ ಅವಶ್ಯ. ಹೊಸದಾಗಿ ನಿರ್ಮಾಣವಾಗುತ್ತಿರುವ ರಸ್ತೆಯಲ್ಲಿ ಪೈಪ್‌ ಕ್ರಾಸಿಂಗ್‌ಗಾಗಿಪ್ರತ್ಯೇಕವಾಗಿ ರಸ್ತೆಗೆ ಅಡ್ಡಲಾಗಿ ಪೈಪ್‌ ಹಾಕಲಾಗುತ್ತಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆಯಬೇಕು. ತೀರ ಅನಿವಾರ್ಯತೆ ಎದುರಾದಾಗ ಮಾತ್ರ ಅ ಧಿಕಾರಿಗಳಅನುಮತಿ ಪಡೆದು ರಸ್ತೆ ಅಗೆಯಬೇಕು.  –ಗೋವಿಂದ ಕಾರಜೋಳ ಉಪ ಮುಖ್ಯಮಂತ್ರಿ

ರೈತರು ಹೊಲದಲ್ಲಿನ ಪೈಪ್‌ಗ್ಳನ್ನು ಒಂದು ಬದಿಯಿಂದ ಮತ್ತೂಂದು ಬದಿಗೆ ತೆಗೆದುಕೊಂಡು ಹೋಗುವ ಉದ್ದೇಶದಿಂದ ರಸ್ತೆ ಅಗೆದರೆ ಹೊಸ ರಸ್ತೆಗಳು ಬೇಗ ಹಾಳಾಗುತ್ತವೆ. ರೈತರ ಅನೂಕೂಲಕ್ಕಾಗಿ ಹೊಸ ರಸ್ತೆ ನಿರ್ಮಾಣ ಕಾರ್ಯದ ವೇಳೆ ಪೈಪ್‌ ಅಳವಡಿಸಲಾಗುತ್ತಿದೆ. ರಸ್ತೆ ಅಗೆಯುವ ಅನಿವಾರ್ಯತೆ ಎದುರಾದರೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿದರೆ ನಾವುಪರಿಶೀಲಿಸಿ ಅನುಮತಿ ನೀಡುತ್ತೇವೆ. –ಸೋಮಶೇಖರ ಸಾವನ್‌, ಕಾರ್ಯಪಾಲಕ ಅಭಿಯಂತರ, ಲೋಕೋಪಯೋಗಿ ಇಲಾಖೆ ಮುಧೋಳ

 

ಗೋವಿಂದಪ್ಪ ತಳವಾರ

Advertisement

Udayavani is now on Telegram. Click here to join our channel and stay updated with the latest news.

Next