Advertisement
ವೆಚ್ಚದಲ್ಲಿ ಎಣ್ಣೆಹೊಳೆಯಿಂದ ಪುಲ್ಕೆರಿ ಜಂಕ್ಷನ್‌ವರೆಗಿನ ಒಟ್ಟು 13 ಕಿ.ಮೀ. ರಸ್ತೆ ವಿಸ್ತರಣೆಯೊಂದಿಗೆ ಡಾಮರೀಕರಣವಾಗಿದ್ದು ಬಂಗ್ಲೆಗುಡ್ಡೆಯಿಂದ ಭವಾನಿ ಮಿಲ್ ವರೆಗಿನ ರಸ್ತೆಯನ್ನು ಚತುಷ್ಪಥಗೊಳಿಸಲಾಗಿತ್ತು.ಡಾಮರೀಕರಣ ಕಾಮಗಾರಿ ಪೂರ್ಣಗೊಳಿಸಿ ತಿಂಗಳು ಹಲವು ಕಳೆದರೂ ಡಿವೈಡರ್ ಸೇರಿದಂತೆ ಇನ್ನಿತರ ಕೆಲಸ ಕಾರ್ಯಗಳು ಅರೆಬರೆಯಾಗಿವೆೆ. ಉಳಿದಂತೆ ಬೀದಿದೀಪ, ನಾಮಫಲಕ ಅಳವಡಿಕೆ ಕಾರ್ಯವೂ ಆಗಿಲ್ಲ.
ಜಯಂತಿ ನಗರದಲ್ಲಿರುವ ಸರ್ವಜ್ಞ ವೃತ್ತ ಬಳಿ ಡಿವೈಡರ್ ಕಾಮಗಾರಿ ಪೂರ್ಣಗೊಳ್ಳದೇ ಅಪಾಯಕಾರಿ ಯಾಗಿದ್ದು, ವಾಹನ ಸವಾರರಿಗೆ ಇದರಿಂದ ಸಾಕಷ್ಟು ತೊಂದರೆಯಾಗುತ್ತಿದೆ. ಆದ್ದರಿಂದ ಶೀಘ್ರವಾಗಿ ಕಾಮಗಾರಿ ಮುಗಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ. ಸರ್ವಜ್ಞ ವೃತ್ತದ ಸಮೀಪದಲ್ಲೇ ಲೋಕೋಪಯೋಗಿ ಇಲಾಖೆ ಕಚೇರಿಯಿದೆ. ಹೀಗಿದ್ದರೂ ಡಿವೈಡರ್ ಕಾಮಗಾರಿ ಪೂರ್ಣವಾಗದಿರುವುದು ಇಲಾಖಾಧಿಕಾರಿಗಳ ಗಮನಕ್ಕೆ ಬಂದಿಲ್ಲವೇ ? ಅಥವಾ ಅಧಿಕಾರಿಗಳು ಕಂಡು ಕಾಣದಂತಿದ್ದಾರೆಯೇ ಎನ್ನುವುದು ಸಾರ್ವಜನಿಕರ ಪ್ರಶ್ನೆಯಾಗಿದೆ.
Related Articles
ಗುತ್ತಿಗೆದಾರರು ಕಾಮಗಾರಿ ಮುಗಿಸಿಕೊಡುವುದಾಗಿ ಹೇಳುತ್ತಿದ್ದರೂ ಪೂರ್ಣಗೊಳಿಸಿಲ್ಲ. ಹಾಗಾಗಿ ಗುತ್ತಿಗೆದಾರರಿಗೆ ನೋಟಿಸ್ ನೀಡಲಾಗಿದೆ. ಶೀಘ್ರದಲ್ಲೇ ಕಾಮಗಾರಿ ಪೂರ್ಣಗೊಳಿಸದಿದ್ದಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗುವುದು.
-ಎಚ್.ಕೆ. ಸುಂದರ, ಎಇಇ, ಲೋಕೋಪಯೋಗಿ ಇಲಾಖೆ, ಕಾರ್ಕಳ
Advertisement