ಗುಂಡ್ಲುಪೇಟೆ: ತಾಲೂಕಿನ ಬಸವಾಪುರ ಗ್ರಾಮದಿಂದ ಬೆಂಡರವಾಡಿಗೆ ಸಂಪರ್ಕ ಕಲ್ಪಿಸುವ ಸುಮಾರು 3 ಕಿ.ಮೀ ರಸ್ತೆ ಸಂಪೂರ್ಣ ಗುಂಡಿಮಯವಾಗಿದ್ದು, ಸಂಚಾರಕ್ಕೆ ತೀವ್ರ ತೊಂದರೆಉಂಟಾಗಿದೆ.
ಬೆಂಡರವಾಡಿ ಗ್ರಾಮದಲ್ಲಿಸುಮಾರು 700ರಿಂದ800 ಮಂದಿ ವಾಸ ಮಾಡುತ್ತಿದ್ದು, ಗುಂಡ್ಲುಪೇಟೆಪಟ್ಟಣಕ್ಕೆ ತೆರಳಲು ಪ್ರಮುಖವಾಗಿ ಬಸವಾಪುರಮಾರ್ಗದ ಈ ರಸ್ತೆಯನ್ನೇ ಅವಲಂಬಿಸಬೇಕಾಗಿದೆ.ಬೆಳಗ್ಗೆ ಮತ್ತು ಸಂಜೆ ಸಮಯ ಮಾತ್ರ ಬಸ್‌ವ್ಯವಸ್ಥೆಯಿದ್ದು, ಕೊರೊನಾ ಹಿನ್ನೆಲೆ ಕಳೆದ 2ವರ್ಷದಿಂದ ಅದೂ ಬರುತ್ತಿಲ್ಲ
.ಗ್ರಾಮಕ್ಕೆ ಬಸ್ ಆಗಮಿಸದ ಹಿನ್ನೆಲೆ ಕೆಲವು ಜನಕಾಲ್ನಡಿಯಲ್ಲಿ ಹೆದ್ದಾರಿ ರಸ್ತೆಗೆ ಬಂದರೆ, ಅಧಿಕಮಂದಿ ದ್ವಿಚಕ್ರ ವಾಹನ ಅವಲಂಬಿಸಿದ್ದಾರೆ. ರಸ್ತೆಕಿತ್ತು ಹೋಗಿರುವ ಜತೆಗೆ ಅಲ್ಲಲ್ಲಿ ತಿರುವುಇರುವುದರಿಂದ ಸವಾರರು ಬಿದ್ದುಗಾಯಗೊಂಡಿರುವ ಹಲವು ನಿದರ್ಶನಗಳಿವೆ.ಮಕ್ಕಳು ಇದರ ಮೂಲಕವೇ ಶಾಲಾ-ಕಾಲೇಜಿಗೆತೆರಳಬೇಕಾಗಿರುವುದರಿಂದ ತುಂಬಾ ತೊಂದರೆಅನುಭವಿಸುವಂತಾಗಿದೆ.
ಮಳೆ ಬಂದರೆ ಸಂಚಾರ ದುಸ್ತರ: 3ಕಿ.ಮೀ ರಸ್ತೆಸಂಪೂರ್ಣ ಕಿತ್ತು ಹೋಗಿ ದೊಡ್ಡ ದೊಡ್ಡಗುಂಡಿಗಳಾಗಿ ಮಾರ್ಪಾಡಾಗಿವೆ. ಮಳೆ ಬಂದರೆಗುಂಡಿಗಳಲ್ಲಿ ನೀರು ನಿಂತು ಕೆರೆಯಂತಾಗುತ್ತಿದ್ದು,ಈ ವೇಳೆ ಬೈಕ್ ಸವಾರರು ಸಂಚಾರ ಮಾಡುವುದೇದುಸ್ತರವಾಗಿದೆ.
ಕಗ್ಗತ್ತಲಲ್ಲಿ ಸಂಚಾರ: ಬಸವಾಪುರದಿಂದಬೆಂಡರವಾಡಿ ಗ್ರಾಮದ ರಸ್ತೆಯಲ್ಲಿ ವಿದ್ಯುತ್ ಕಂಬಅಳವಡಿಸದ ಹಿನ್ನೆಲೆ ಜನ ರಾತ್ರಿ ವೇಳೆ ಕಗ್ಗತ್ತಲಲ್ಲಿಸಂಚಾರ ಮಾಡಬೇಕಾಗಿದೆ. ತುರ್ತುಸಂದರ್ಭದಲ್ಲಂತೂ ಸಮಸ್ಯೆ ಮತ್ತಷ್ಟುಬಿಗಡಾಯಿಸುತ್ತಿದ್ದು, ಸರಿಯಾದ ಸಮಯಕ್ಕೆಆಸ್ಪತ್ರೆಗೆ ತೆರಳಲು ಸಾಧ್ಯವಾಗುತ್ತಿಲ್ಲ ಎಂದು ಸ್ಥಳೀಯರಾದ ಪುರುಷೋತ್ತಮ್ ಆಕ್ರೋಶ ವ್ಯಕ್ತಪಡಿಸಿದರು.
ಕಾಡು ಪ್ರಾಣಿಗಳ ಭೀತಿ: ಮುಖ್ಯ ರಸ್ತೆಯಿಂದಬೆಂಡರವಾಡಿಗೆ ತೆರಳುವ ಮಾರ್ಗ ಮಧ್ಯೆ ಕಾಡುಪ್ರಾಣಿಗಳ ಕಾಟ ಹೆಚ್ಚಾಗಿದೆ. ಚಿರತೆ, ಹಂದಿಗಳುಹಲವು ಬಾರಿ ಗೋಚರಿಸಿವೆ. ಹಾವುಗಳು ರಸ್ತೆಆಸುಪಾಸಿನಲ್ಲೇ ಸಿಗುತ್ತಿರುವ ಹಿನ್ನೆಲೆ ಜನಭಯದಿಂದ ಸಂಚಾರ ಮಾಡುತ್ತಿದ್ದಾರೆ.
ಉಪ ಆರೋಗ್ಯ ಕೇಂದ್ರ ತೆರೆಯಲು ಒತ್ತಾಯ:ಬೆಂಡರವಾಡಿಯಲ್ಲಿ ಜನರಿಗೆ ಅನಾರೋಗ್ಯ ಸಮಸ್ಯೆಉಂಟಾದರೆ ಪಕ್ಕದ ಹಂಗಳ ಹಾಗೂ ಗುಂಡ್ಲುಪೇಟೆ ಆಸ್ಪತ್ರೆಯನ್ನೇ ಅವಲಂಬಿಸಬೇಕಾಗಿರುವ ಹಿನ್ನೆಲೆ ಗ್ರಾಮದಲ್ಲೇ ಉಪ ಆರೋಗ್ಯ ಕೇಂದ್ರ ತೆರೆದುಪ್ರಾಥಮಿಕ ಚಿಕಿತ್ಸೆ ದೊರಕುವಂತೆ ಮಾಡಬೇಕೆಂದುಮುಖಂಡರಾದ ರಾಮಸ್ವಾಮಿ ಒತ್ತಾಯಿಸಿದ್ದಾರೆ.
ಬಸವರಾಜು ಎಸ್.ಹಂಗಳ