Advertisement

ರಸ್ತೆ ಬದಿ ಔಷಧಿ ತ್ಯಾಜ್ಯ ; ಆಕ್ರೋಶ

05:22 PM Nov 29, 2019 | Suhan S |

ಹುಳಿಯಾರು: ರಾಷ್ಟ್ರೀಯ ಹೆದ್ದಾರಿ 150ಎರಲ್ಲಿನ ಹುಳಿಯಾರಿನಿಂದ ಕೆಂಕೆರೆ ಗ್ರಾಮಕ್ಕೆ ತೆರಳುವ ರಸ್ತೆ ಬದಿಯಲ್ಲಿ ಆಸ್ಪತ್ರೆ ತ್ಯಾಜ್ಯಸುರಿದಿದ್ದು ಸ್ಥಳೀಯ ಪಾದಚಾರಿಗಳಿಗೆ ತೊಡಕಾಗಿ ಪರಿಣಮಿಸಿದೆ.

Advertisement

ಸುರಿದಿರುವ ತ್ಯಾಜ್ಯದಲ್ಲಿ ಅರೆಬರೆ ಬಳಸಲಾಗಿರುವ ಔಷಧಗಳು, ಮಾತ್ರೆಗಳು,ಸೂಜಿಗಳು, ರಕ್ತಸಿಕ್ತ ಬ್ಯಾಂಡೇಜ್‌ ಬಟ್ಟೆಗಳು ಹಾಗೂ ಗ್ಲೂಕೋಸ್‌ ಬಾಟಲ್‌ಗ‌ಳು ಸೇರಿ ದಂತೆ ನಾನಾ ಬಗೆಯ ತ್ಯಾಜ್ಯಗಳು ಬಿದ್ದಿವೆ.

ಜಾನುವಾರುಗಳಿಗೆ ಕಂಟಕ: ಹೀಗೆ ರಾಸಾಯನಿಕ ಯುಕ್ತ ಔಷಧಗಳನ್ನು ತಂದುಸುರಿಯಲಾಗಿರುವ ಪ್ರದೇಶದಲ್ಲಿ ದನಕರುಗಳು, ಕುರಿಗಳನ್ನು ಮೇಯಿಸಲಾಗು ತ್ತದೆ.ಮಳೆಗೆ ತ್ಯಾಜ್ಯ ವಸ್ತುಗಳು ಹಾಗೂ ರಾಸಾಯನಿಕಯುಕ್ತ ಔಷಧಗಳು ಜಾನುವಾರು ಮೇವಿಗೆ ಸೇರಿಕೊಂಡು ಅವುಗಳಆರೋಗ್ಯದಲ್ಲಿ ದುಷ್ಪರಿಣಾಮ ಬೀರುವ ಆತಂಕ ನಿರ್ಮಾಣವಾಗಿದೆ.

ಆರೋಗ್ಯದ ಮೇಲೆ ದುಷ್ಪರಿಣಾಮ: ಈಮಾರ್ಗವಾಗಿ ಲಿಂಗಪ್ಪನಪಾಳ್ಯ, ಕೋಡಿ ಪಾಳ್ಯ,ಕಾಮಶೆಟ್ಟಿಪಾಳ್ಯ, ಕೆ.ಸಿ.ಪಾಳ್ಯ, ಸೋಮಜ್ಜನಪಾಳ್ಯ, ಗೌಡಗೆರೆ ಗ್ರಾಮಗಳ ಶಾಲಾವಿದ್ಯಾರ್ಥಿಗಳು, ಕೂಲಿ ಕಾರ್ಮಿಕರು, ರೈತರು ಹುಳಿಯಾರಿ ನಿಂದ ತಮ್ಮ ಊರುಗಳಿಗೆ ನಡೆದುಕೊಂಡು ಹೋಗುವುದಿದ್ದು ಈ ಔಷಧಿ ತ್ಯಾಜ್ಯ ಇವರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಂಭವವಿದೆ.

ಕ್ರಮ ಕೈಗೊಳ್ಳದ ಇಲಾಖೆ: ಇದೇ ರೀತಿ ಐದಾರು ತಿಂಗಳ ಹಿಂದೆ ವಿದ್ಯಾವಾರಿಧಿ ಶಾಲೆ ಸಮೀಪ ರಸ್ತೆಯ ಬದಿ ಔಷಧಿ ತ್ಯಾಜ್ಯ ಸುರಿಯಲಾಗಿತ್ತು. ಔಷಧ ನಿಯಂತ್ರಣ ಇಲಾಖೆ ಈ ಬಗ್ಗೆ ಕಟ್ಟಿನಿಟ್ಟಿನ ಕ್ರಮ ಕೈಗೊಳ್ಳದಿರುವುದರಿಂದ ಉಪಯೋಗಿಸಲ್ಪಟ್ಟ ಔಷಧಿ ತ್ಯಾಜ್ಯವಸ್ತುಗಳನ್ನು ತಾಲೂಕಿನಲ್ಲಿ ಎಲ್ಲೆಂದರಲ್ಲಿ ಬಿಸಾಡುತ್ತಿ ರುವುದು ಮಾಮೂಲಾಗಿದೆ.

Advertisement

ಆಸ್ಪತ್ರೆ ವಿರುದ್ಧ ಕ್ರಮಕ್ಕೆ ಆಗ್ರಹ: ಔಷಧಿ ತ್ಯಾಜ್ಯವಸ್ತುಗಳನ್ನು ವೈಜ್ಞಾನಿಕ ಸಂಸ್ಕರಣೆ ಮೂಲಕ ನಾಶಗೊಳಿಸಬೇಕು. ಗುಂಡಿ ತೆಗೆದುಅದರಲ್ಲಿ ಊಳುವಂತೆಯೂ ನಿದರ್ಶ ನವಿದೆ. ಆದರೆ ಈ ಎಲ್ಲಾ ನಿಯಮಗಳನ್ನೂ ಗಾಳಿಗೆ ತೋರಿ ಬೇಕಾಬಿಟ್ಟಿ ಸಾರ್ವಜನಿಕ ಸ್ಥಳದಲ್ಲಿ ಎಸೆಯಲಾಗಿದೆ. ಇಲ್ಲಿ ಬಿದ್ದಿರುವ ತ್ಯಾಜ್ಯ ವಸ್ತುಗಳು ಖಾಸಗಿ ಆಸ್ಪತ್ರೆಯಲ್ಲಿ ಬಳಸಿರುವುದು ಮೇಲ್ನೋಟಕ್ಕೆ ಖಚಿತಗೊಂಡಿದೆ. ಈಗಲಾದರೂ ಆರೋಗ್ಯ ಇಲಾಖೆ ಅಧಿಕಾರಿಗಳು ಎಚ್ಚೆತ್ತು ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥ ಆಸ್ಪತ್ರೆಯ ಮೇಲೆ ಕ್ರಮ ಜರುಗಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ವೈದ್ಯಕೀಯ ತ್ಯಾಜ್ಯವನ್ನು ರಸ್ತೆ ಬದಿಗೆ ಸುರಿದರೆ ಪರಿಸರ ಅಧಿಕಾರಿಯಾಗಿ ನಾವು ನೋಟಿಸ್‌ ನೀಡಬಹುದೇ ವಿನಃ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದಿಲ್ಲ. ಡಿಎಸ್‌ಒ ಅವರ ಗಮನಕ್ಕೆ ತಂದರೆ ಆಸ್ಪತ್ರೆ ಲೈಸೆನ್ಸ್‌ ರದ್ದು ಮಾಡಲು ಅವಕಾಶವಿದೆ. ಪಪಂಸಿಬ್ಬಂದಿಗೆ ಹೇಳಿ ಈ ಬಗ್ಗೆ ಮಾಹಿತಿ ಸಂಗ್ರಹಿಸಿ ನೋಟಿಸ್‌ ನೀಡುತ್ತೇನೆ. ಜ್ಯೋತಿಶ್ವರಿ, ಪರಿಸರ ಅಧಿಕಾರಿ.

 

-ಕಿರಣ್‌ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next