Advertisement

ಹ್ಯುಂಡೈ ಮೋಟಾರ್‌ನಿಂದ ರಸ್ತೆ ಸುರಕ್ಷತಾ ಸಪ್ತಾಹ

06:40 AM Feb 06, 2019 | |

ಬೆಂಗಳೂರು: ದೇಶದ ಖ್ಯಾತ ಕಾರು ತಯಾರಕ ಸಂಸ್ಥೆ ಹ್ಯುಂಡೈ ಮೋಟಾರ್‌ ಇಂಡಿಯಾ ಲಿ., (ಎಚ್‌ಎಂಐಎಲ್‌), ಫೆ.4 ರಿಂದ 10 ರವರೆಗೆ ದೇಶವ್ಯಾಪಿ ರಸ್ತೆ ಸುರಕ್ಷತಾ ಸಪ್ತಾಹ ಬಿ ದಿಬೆಟ್ಟರ್‌ ಗೈ ಉಪಕ್ರಮವನ್ನು ಹಮ್ಮಿಕೊಂಡಿದೆ.

Advertisement

ಸುರಕ್ಷತಾ ಚಾಲನೆಗೆ ಬಗ್ಗೆ ಸಮಾಜದಲ್ಲಿ ಧನಾತ್ಮಕ ಬದಲಾವಣೆ ತರುವ ಉದ್ದೇಶದಿಂದ ಹಾಗೂ ವಾಹನ ಚಾಲಕರು ಸಂಚಾರ ನಿಯಮಗಳನ್ನು ಪಾಲಿಸಲು ಪ್ರೇರೆಪಿಸುವ ಹ್ಯುಂಡೈ ಸೇಫ್‌ ಮೂವ್‌ನಡಿಯಲ್ಲಿ ಸಂಸ್ಥೆ ಬಿ ದಿಬೆಟ್ಟರ್‌ ಗೈ ಅಭಿಯಾನ ಶುರು ಮಾಡಿದೆ. ಈ ಅಭಿಯಾನದಲ್ಲಿ ಏಳು ವಿಶಿಷ್ಟ ರಸ್ತೆ ಸುರಕ್ಷತಾ ನಿಯಮಗಳು ಸಂವಾದಾತ್ಮಕ ರೀತಿಯಲ್ಲಿ ಜನರನ್ನು ತಲುಪುವ ಪ್ರಚಾರ ಮಾಡಲಾಗುತ್ತದೆ.

ಅತಿ ವೇಗ ಬೇಡ, ಸಂಚಾರ ನಿಯಮ ಉಲ್ಲಂಘನೆ ಮಾಡಬಾರದು, ಚಾಲನೆ ಮಾಡುವಾಗ ಮೊಬೈಲ್‌ ಫೋನ್‌ ಬಳಕೆ ಬೇಡ, ಸೀಟ್‌ ಬೆಲ್ಟ್ ಬಳಕೆ, ಮದ್ಯಪಾನ ಮಾಡಿ ವಾಹನ ಚಾಲನೆ ಬೇಡ, ಹಿರಿಯ ನಾಗರಿಕ ಚಾಲನೆಗೆ ಅಣಕ ಮಾಡಬೇಡಿ ಹಾಗೂ ಪಾದಚಾರಿ ಸುರಕ್ಷತೆ ಬಗ್ಗೆ ತಿಳಿವಳಿಕೆ ನೀಡಲಾಗುತ್ತದೆ ಎಂದು ಎಚ್‌ಎಂಐಎಲ್‌ನ ಮಾರುಕಟ್ಟೆ ವಿಭಾಗದ ಗ್ರೂಪ್‌ ಹೆಡ್‌ ಮತ್ತು ಹಿರಿಯ ಜನರಲ್‌ ಮ್ಯಾನೇಜರ್‌ ಪುನೀತ್‌ ಆನಂದ್‌ ತಿಳಿಸಿದರು.

ನಮ್ಮ ಸಂಸ್ಥೆಯ ಸಿಎಸ್‌ಆರ್‌ ಚಟುವಟಿಕೆಯ ಆದ್ಯತಾ ಕ್ರಮ ಸೇಫ್‌ ಮೂವ್‌ ಕಾರ್ಯಕ್ರಮ. ಕೇಂದ್ರ ಸರ್ಕಾರದ ಸಡಕ್‌ ಸುರಕ್ಷಾ- ಜೀವನ್‌ ರಕ್ಷಾ ನಮ್ಮ ರಸ್ತೆ ಸುರಕ್ಷಾ ಸಪ್ತಾಹ-2019 ಅಭಿಯಾನಕ್ಕೆ ಪ್ರೇರಣೆಯಾಗಿದೆ ಎಂದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next