ನವದೆಹಲಿ: ಸುರಕ್ಷತಾ ಸಂಚಾರದ ಬಗ್ಗೆ ಆದ್ಯತೆ ನೀಡುವ ಹೋಂಡಾ ಮೋಟಾರ್ ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ಪ್ರೈ.ಲಿ., ಇತ್ತೀಚೆಗೆ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ-2019 ಅನ್ನು ಆಯೋಜಿಸಿತ್ತು.
ಈ ವೇಳೆ ಮಾತನಾಡಿದ ಸಂಸ್ಥೆಯ ಬ್ರ್ಯಾಂಡ್ ಮತ್ತು ಸಂವಹನ ಉಪಾಧ್ಯಕ್ಷ ಪ್ರಭು ನಾಗರಾಜ್ ಅವರು, ಹೋಂಡಾ 2ವೀಲರ್ ಪ್ರತಿಯೊಬ್ಬರಿಗೂ ಸುರಕ್ಷೆ ಎನ್ನುವ ಧ್ಯೇಯವನ್ನು ತಲುಪಿಸಲು ಬದ್ಧವಾಗಿದೆ. ಈ ಸುರಕ್ಷಾ ಅಭಿಯಾನವನ್ನು ಹೊಸ ವರ್ಷದ ಆರಂಭದಲ್ಲಿ ಆರಂಭಿಸಿದ್ದು, ಇದನ್ನು ಮತ್ತಷ್ಟು
ವಿಸ್ತರಿಸುತ್ತಿದ್ದೇವೆ. ಅಲ್ಲದೆ, ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ನಿಗದಿಪಡಿಸಿದ ಸಡಕ್ ಸುರಕ್ಷಾ ಜೀವನ್ ರಕ್ಷಾ ಎಂಬ ಘೋಷವಾಕ್ಯದಡಿ ಹೋಂಡಾ #HelmetOnLifeOn ಸಂದೇಶವನ್ನು ಮನೆಮನೆಗೆ ತಲುಪಿಸುವ ಗುರಿ ಹಾಕಿಕೊಂಡಿದ್ದೇವೆ.
ಈ ಜಾಗೃತಿ ಕಾರ್ಯಕ್ರಮವನ್ನು ದೇಶಾದ್ಯಂತ ಹರಡುವ ಸಲುವಾಗಿ ಹೋಂಡಾ ಸುರಕ್ಷಾ ಸವಾರಿಯ ಪ್ರತಿಜ್ಞೆಗಳನ್ನು 986 ಡೀಲರ್‌ಗಳು, 4 ಉತ್ಪಾದನಾ ಘಟಕಗಳು, 16 ವಿಭಾಗೀಯ ಕಚೇರಿಗಳು, 5 ವಲಯ ಕಚೇರಿಗಳು ಹಾಗೂ ಕೇಂದ್ರ ಕಚೇರಿಯಲ್ಲಿ ಕೈಗೊಳ್ಳುವ ಮೂಲಕ ಫೆ.4 ರಿಂದ 10 ರವರೆಗೆ ಸಪ್ತಾಹ ಆಚರಿಸಲಾಯಿತು. 5800ಕ್ಕೂ ಅಧಿಕ ಹೋಂಡಾ ಟಚ್‌ಪಾಯಿಂಟ್‌ಗಳ ಮೂಲಕ ಸಮಾಜವನ್ನು ವಿಸ್ತೃತವಾಗಿ ತಲುಪುವ ಕಾರ್ಯ ಯೋಜನೆ ಇದಾಗಿತ್ತು ಎಂದರು.