Advertisement

ರಸ್ತೆ ಸುರಕ್ಷತೆ ಅರಿವು ಕಾರ್ಯಾಗಾರ

08:22 PM Jul 13, 2019 | sudhir |

ಬ್ರಹ್ಮಾವರ: ರಸ್ತೆ ಸುರಕ್ಷತೆಗೆ ವಾಹನ ಚಾಲಕರ ಜತೆಗೆ, ಪಾದಚಾರಿಗಳೂ ಜಾಗರೂಕರಾಗಿ ನಡೆದುಕೊಳ್ಳಬೇಕು ಎಂದು ಮಲ್ಪೆ ಪೊಲೀಸ್‌ ಠಾಣಾ ಉಪನಿರೀಕ್ಷಕ ಮಧು ಬಿ.ಇ. ಹೇಳಿದರು.

Advertisement

ಕಲ್ಯಾಣಪುರ ಮಿಲಾಗ್ರಿಸ್‌ ಆಂಗ್ಲ ಮಾಧ್ಯಮ ಶಾಲೆಯಲ್ಲಿ ರಸ್ತೆ ಸುರಕ್ಷೆ ವಾರ ಆಚರಣೆಯ ಪ್ರಯುಕ್ತ ವಿದ್ಯಾರ್ಥಿಗಳಿಗೆ ಮತ್ತು ವಾಹನ ಚಾಲಕರಿಗೋಸ್ಕರ ಏರ್ಪಡಿಸಲಾದ ಅರಿವು ಕಾರ್ಯಾಗಾರವನ್ನು ಉದ್ದೇಶಿಸಿ ಅವರು ಮಾತನಾಡಿದರು.

ಶಾಲಾ ವಿದ್ಯಾರ್ಥಿಗಳಿಗೆ ಸುರಕ್ಷೆಯ ಸಂದೇಶವು ಮನಸ್ಸಿಗೆ ಮುಟ್ಟುವಂತೆ ವಿಭಿನ್ನ ರೀತಿಯಲ್ಲಿ ರಸ್ತೆ ಸುರಕ್ಷೆ ವಾರವನ್ನು ಆಚರಿಸಿ ಬಿತ್ತಿ ಚಿತ್ರಗಳ ರೂಪದಲ್ಲಿ ಪ್ರದರ್ಶನವನ್ನೂ ಆಯೋಜಿಸಲಾಯಿತು.

ಶಾಲೆಯ ಪ್ರಾಂಶುಪಾಲ ರೆ| ಫಾ| ಲ್ಯಾನ್ಸಿ ಫೆರ್ನಾಂಡಿಸ್‌ ಎಸ್‌.ಜೆ., ಮುಖ್ಯೋಪಾಧ್ಯಾಯಿನಿ ವೀರಾ ಡಿಸಿಲ್ವಾ, ಶಾಲಾ ರಕ್ಷಕ-ಶಿಕ್ಷಕ ಸಂಘದ ಸುನಿತಾ ಲಸ್ರಾದೊ ಮತ್ತು ರೆಜಿನಾಲ್ಡ್‌ ಲೂವಿಸ್‌ ಉಪಸ್ಥಿತರಿದ್ದರು.
ನೆಲ್ಸನ್‌ ಡಿ’ಸೋಜಾ ಕಾರ್ಯಕ್ರಮ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next