Advertisement
ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ, ಜಿಲ್ಲಾಡಳಿತ, ಸಾರಿಗೆ, ಪೊಲೀಸ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಹುಬ್ಬಳ್ಳಿ-ಧಾರವಾಡ ಮೋಟಾರು ವಾಹನ ತರಬೇತಿ ಶಾಲೆಗಳ ಸಹಯೋಗದಲ್ಲಿ 31ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ಬುಧವಾರ ಹಮ್ಮಿಕೊಂಡಿದ್ದ ಕಾರು ರ್ಯಾಲಿಯಲ್ಲಿ ಭಾಗವಹಿಸಿ ಗಮನ ಸೆಳೆದವು. ರ್ಯಾಲಿಗೆ ಸಂಚಾರ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಎಸ್.ಎಂ. ಸಂದಿಗವಾಡ ಚಾಲನೆ ನೀಡಿದರು.
ಹೊಸೂರ ಕ್ರಾಸ್, ವಿದ್ಯಾನಗರ, ಬಿವಿಬಿ ಇಂಜನಿಯರಿಂಗ್ ಕಾಲೇಜ್, ಟೆಂಡರ್ ಶ್ಯೂರ್ ರಸ್ತೆಯ ಮೂಲಕ ಚೇತನಾ ಕಾಲೇಜು ತಲುಪಿತು. ಸೀಟ್ ಬೆಲ್ಟ್ ಧರಿಸಿ, ಸಂಚಾರಿ ನಿಯಮ ಹಾಗೂ ಸಂಜ್ಞೆಗಳನ್ನು ಪಾಲಿಸಿ ಸಾರ್ವಜನಿಕರಿಗೆ ಮಾದರಿಯಾಗುವಂತೆ ವಾಹನ ಚಾಲಕರು ಕಾರು ಚಲಾಯಿಸಿದರು. ಈ ಸಂದರ್ಭದಲ್ಲಿ ಧಾರವಾಡ ಪೂರ್ವ ಪ್ರಾದೇಶಿಕ ಸಾರಿಗೆ ಅಧಿಕಾರಿ ಅಪ್ಪಯ್ಯ ನಲ್ವತ್ವಾಡಮಠ, ಪಶ್ಚಿಮ ಸಾರಿಗೆ ಅಧಿಕಾರಿ ಸಿ.ಡಿ. ನಾಯಕ, ವಾರ್ತಾ ಇಲಾಖೆಯ
ಹಿರಿಯ ಸಹಾಯಕ ನಿರ್ದೇಶಕ ಮಂಜುನಾಥ ಡೊಳ್ಳಿನ, ಮೋಟಾರು ವಾಹನ ನಿರೀಕ್ಷಕರಾದ ಅರುಣ ಕಟ್ಟಿಮನಿ, ರಫಿಕ್ ಅಹಮದ್ ಕಿತ್ತೂರ, ಸಂಚಾರಿ ಪೊಲೀಸ್ ಇನ್‌ಸ್ಪೆಕ್ಟರ್‌ಗಳಾದ ಮಹಾಂತೇಶ ಹೊಸಪೇಟೆ, ರತನ ಕುಮಾರ ಜೀರಗ್ಯಾಳ, ಪ್ರಶಾಂತ ನಾಯ್ಕ, ವಾಹನ ತರಬೇತಿ
ಶಾಲೆಗಳ ತರಬೇತುದಾರರಾದ ಪುಷ್ಪಾ, ಪ್ರತಿಭಾ ಮೊದಲಾದವರಿದ್ದರು.