Advertisement
ಈ ಸಾಲಿಗೆ ರಾಯಲ್ ಎನ್‌ಫೀಲ್ಡ್ ಕೂಡ ಸೇರಿಕೊಳ್ಳುತ್ತದೆ. ಈಗಂತೂ ಎನ್‌ಫೀಲ್ಡ್‌ಗಳ ಮೇಲಿನ ಕ್ರೇಜ್ ಮತ್ತಷ್ಟು ಹೆಚ್ಚಿದೆ. ಒಂದು ಕಾಲದಲ್ಲಿ ಎನ್‌ಫೀಲ್ಡ್ ಬೈಕ್‌ಗಳಲ್ಲಿ ಬಂದಿಳಿದರೆ, ಕಣ್ಣರಳಿಸಿ ಪಾದದಿಂದ ನೆತ್ತಿಯತನಕ ದಿಟ್ಟಿಸಿ ನೋಡುವ ಕಾಲವೊಂದಿತ್ತು. ಇಂದು ಹಾಗಿಲ್ಲ, ರಾಯಲ್ ಎನ್‌ಫೀಲ್ಡ್ ಬೈಕ್‌ಗಳನ್ನು ಸಾಮಾನ್ಯನೂ ಕೊಂಡುಕೊಳ್ಳಬಲ್ಲ. ಅಂದರೆ, ಬೆಲೆ ಎಷ್ಟು ಎನ್ನುವುದಕ್ಕಿಂತಲೂ ಕಂಪನಿ ತನ್ನ ಜನಪ್ರಿಯತೆಯನ್ನು ಇನ್ನಷ್ಟು ವೃದ್ಧಿಸಿಕೊಂಡಿದೆ.
Related Articles
ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 500 ಮತ್ತು ಹಿಮಾಲಯನ್ 500 ಬೈಕ್‌ಗಳಲ್ಲಿ ಎಬಿಎಸ್ ವ್ಯವಸ್ಥೆ ಅಳವಡಿಕೆ ಆಗಿರುವುದೇ ವಿಶೇಷ. ಕ್ಲಾಸಿಕ್ 500 499 ಸಿಸಿ ಬೈಕ್. ಏರ್ ಕೂಲ್ಡ್ ಸಿಂಗಲ್ ಸಿಲಿಂಡರ್‌ನಿಂದ 27.2ಬಿಎಚ್‌ಪಿ ಮತ್ತು 41.3ಎನ್‌ಎಂ ಟಾರ್ಕ್ ಶಕ್ತಿ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಉಳಿದಂತೆ, 5 ಸ್ಪೀಡ್ ಗೇರ್‌ಬಾಕ್ಸ್ ಹೊಂದಿದ್ದು, ಆಫ್ ರೋಡ್‌ನಲ್ಲಿಯೂ ಚಿರತೆ ಓಟಕ್ಕೆ ಸೈ ಎನ್ನುವಂತೆ ತಯಾರಿಸಲಾಗಿದೆ.
Advertisement
ಹಿಮಾಲಯನ್ 500 ಬೈಕ್‌ನಲ್ಲೂ ಇದೇ ಸಾಮರ್ಥ್ಯ ಇರುವಂತೆ ನೋಡಿಕೊಳ್ಳಲಾಗಿದೆ. ಇದು 411ಸಿಸಿಯಿಂದ ಕೂಡಿದ್ದು, ಏರ್ ಕೂಲ್ಡ್ ಫ್ಯೂಯೆಲ್ ಇಂಜೆಕ್ಟೆಡ್ ವ್ಯವಸ್ಥೆ ಇದರಲ್ಲಿದೆ. ಸಿಂಗಲ್ ಸಿಲಿಂಡರ್‌ನಿಂದ 24.5 ಬಿಎಚ್‌ಪಿ, 32ಎನ್‌ಎಂ ಟಾರ್ಕ್ ಶಕ್ತಿ ಉತ್ಪಾದಿಸುವಂಥ ಸಾಮರ್ಥ್ಯ ಹೊಂದಿದೆ. ಕ್ಲಾಸಿಕ್‌ನಲ್ಲಿರುವಂತೆ 5 ಸ್ಪೀಡ್ ಗೇರ್‌ಬಾಕ್ಸ್ ಬೈಕ್ ಇದಾಗಿದೆ. ಯಾವುದೇ ಕ್ರೂಸರ್ ಬೈಕ್‌ಗಳಿಗೆ ಕಡಿಮೆ ಇಲ್ಲದಂತೆ ತಯಾರಿಸಲಾಗಿದೆ.
ಎಬಿಎಸ್ ‘ಆರ್‌ಇ’ಯಲ್ಲಿ ಮಾತ್ರರಾಯಲ್ ಎನ್‌ಫೀಲ್ಡ್ ಸದ್ಯಕ್ಕೆ ಕ್ಲಾಸಿಕ್ 500ನಲ್ಲಿ ಮಾತ್ರ ಎಬಿಎಸ್ ವ್ಯವಸ್ಥೆ ಅಳವಡಿಸುವ ಸುಳಿವು ನೀಡಿದೆ. ಥಂಡರ್‌ಬರ್ಡ್ 500ನಲ್ಲಿ ಎಬಿಎಸ್ ಅಳವಡಿಸುವ ಸಾಧ್ಯತೆ ಕಡಿಮೆ. ಎಬಿಎಸ್ ಅಳವಡಿಕೆ ಬಗ್ಗೆ ನಿರ್ದಿಷ್ಟವಾದ ನಿರ್ಧಾರ ಕೈಗೊಂಡಿರುವ ಕಂಪನಿ, ಮುಂದಿನ ವರ್ಷದ ಅಂತ್ಯಕ್ಕೆ ತನ್ನೆಲ್ಲಾ ಶ್ರೇಣಿಯ ಬೈಕ್‌ಗಳಲ್ಲಿಯೂ ಎಬಿಎಸ್ ವ್ಯವಸ್ಥೆ ಅಳವಡಿಸುವ ಗುರಿ ಹೊಂದಿದೆ. ಆದರೂ, ಎಲ್ಲಾ ವರ್ಗದ ರೈಡರ್‌ಗಳನ್ನು ಮೆಚ್ಚಿಸಲಾಗದು ಎನ್ನುವ ಲೆಕ್ಕಾಚಾರದಿಂದ ಹಿಂದೇಟು ಹಾಕುತ್ತಿರಬಹುದು ಎನ್ನುವುದು ತಜ್ಞರ ಮಾತು. ಸುರಕ್ಷತೆ ಮಾನದಂಡ
ಇತ್ತೀಚಿನ ತನ್ನೆಲ್ಲಾ ಮಾಡೆಲ್ ಬೈಕ್‌ಗಳಲ್ಲಿ ಡಿಸ್ಕ್ ಬ್ರೇಕ್ ಅಳವಡಿಸಿರುವ ರಾಯಲ್ ಎನ್‌ಫೀಲ್ಡ್, ಈ ಎರಡು ಬೈಕ್‌ಗಳಲ್ಲಿಯೂ ಅದನ್ನು ಉಳಿಸಿಕೊಂಡಿದೆ. ಜತೆಗೆ ಕೇಂದ್ರ ಸರ್ಕಾರದ ಎಬಿಎಸ್ ಕಡ್ಡಾಯ ನಿಯಮದಂತೆ ಸುರಕ್ಷತೆ ದೃಷ್ಟಿಯಿಂದ ಅಳವಡಿಸಲು ನಿರ್ಧರಿಸಿದೆ. ಹೀಗಾಗಿ ಇಂದಿನ ವೇರಿಯಂಟ್‌ಗಳಿಗಿಂತ ರೈಡಿಂಗ್ ಫೀಲ್ ಕೊಂಚ ಬದಲಾಗಿರಲಿದೆ. ಕೇಂದ್ರ ಸರ್ಕಾರ 125ಸಿಸಿ ಮೇಲ್ಪಟ್ಟ ಎಲ್ಲಾ ಬೈಕ್‌ಗಳಲ್ಲಿಯೂ ಎಬಿಎಸ್ ಅಳವಡಿಕೆ ಕಡ್ಡಾಯಗೊಳಿಸಿದ್ದರಿಂದ ಈ ಕ್ರಮ ಎಲ್ಲಾ ಕಂಪನಿಗಳಿಗೆ ಅನಿವಾರ್ಯ. ರಾಯಲ್ ಸವಾರರಿಗೆ ಸಿಹಿ ಸುದ್ದಿ
ಎಬಿಎಸ್ ಅಳವಡಿಕೆ ಸಹಜವಾಗಿ ಕಾಯಂ ಸವಾರರಲ್ಲಿ ಖುಷಿ ಹುಟ್ಟಿಸಿದೆ. ಸುರಕ್ಷತೆ ದೃಷ್ಟಿಯಿಂದ ಹೆಚ್ಚಿನ ಬೈಕ್ ಸವಾರರು ಎಬಿಎಸ್ ಬಯಸುತ್ತಾರೆ. ಬ್ರೇಕ್ ವ್ಯವಸ್ಥೆಯ ಕಾರ್ಯಕ್ಷಮತೆ ವೃದ್ಧಿಸಲಿಕ್ಕಾಗಿಯೇ ಎಬಿಎಸ್ ಅಳವಡಿಸಲಾಗುತ್ತದೆ. – ಎಬಿಎಸ್ ವ್ಯವಸ್ಥೆಯೊಂದಿಗೆ ಕ್ಲಾಸಿಕ್ 500, ಹಿಮಾಲಯನ್ 500 ಶೀಘ್ರ ಮಾರುಕಟ್ಟೆಗೆ