Advertisement

ರಸ್ತೆ ತುಂಬಾ ಹೊಂಡಗಳು; ದಿನಂಪ್ರತಿ ಟ್ರಾಫಿಕ್‌ ದಟ್ಟಣೆ    

08:30 PM Aug 02, 2021 | Team Udayavani |

ಉಡುಪಿ: ಮೀನುಗಾರಿಕೆ ಸಹಿತ ಪ್ರವಾಸೋದ್ಯಮಕ್ಕೆ ಪ್ರಸಿದ್ಧಿ ಪಡೆದಿರುವ ಮಲ್ಪೆಗೆ ಸಾಗಲು ಹೆದ್ದಾರಿಯಲ್ಲಿ ಸೃಷ್ಟಿಯಾಗಿರುವ ಹಲ ವಾರು ಹೊಂಡ ವ್ಯೂಹಗಳನ್ನು ಸಂಭಾಳಿಸಿ ಕೊಂಡು ಹೋಗುವ ಎದೆಗಾರಿಕೆ ಅಗತ್ಯವಾಗಿದೆ. ಸವಾರರಿಗಷ್ಟೇ ಅಲ್ಲದೆ ಟ್ರಾಫಿಕ್‌ ಪೊಲೀಸರಿಗೂ ಈ ಹೊಂಡಗಳು ಸಮಸ್ಯೆ ಸೃಷ್ಟಿಸಿವೆ.

Advertisement

ಉಡುಪಿಯಿಂದ ಕರಾವಳಿ ಬೈಪಾಸ್‌ ಸಂಪರ್ಕ ರಸ್ತೆ ಹಾಗೂ ಫ್ಲೈಓವರ್‌ನ ಕೆಳಭಾಗದ ಸರ್ವಿಸ್‌ ರಸ್ತೆ ಸಂಪೂರ್ಣ ಹದಗೆಟ್ಟು ಹೋಗಿದ್ದು, ಸವಾರರೆಲ್ಲರೂ ಮುನಿಸಿಕೊಂಡೇ ಸಂಚರಿಸುತ್ತಿದ್ದಾರೆ.

ಟ್ರಾಫಿಕ್‌ ದಟ್ಟಣೆ:

ರಸ್ತೆಯ ಹೊಂಡಗಳ ಪರಿಣಾಮ ಟ್ರಾಫಿಕ್‌ ದಟ್ಟಣೆ ದಿನನಿತ್ಯದ ಕೊಡುಗೆಯಾಗಿದೆ. ಬೆಳಗ್ಗೆ ಹಾಗೂ ಸಂಜೆ ವೇಳೆಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಿರುವ ದೃಶ್ಯ ಕಂಡುಬರುತ್ತವೆ. ಉಡುಪಿಯಿಂದ ಆಗಮಿಸುವ ವಾಹನಗಳ ಸರದಿ ಸಾಲು ಒಂದೆಡೆಯಾದರೆ ಕುಂದಾಪುರದತ್ತ ತೆರಳುವ ವಾಹನಗಳ ಸಾಲು ಮತ್ತೂಂದೆಡೆ ಕಂಡುಬರುತ್ತದೆ.

ಸೂಕ್ತ ಬಸ್‌ ತಂಗುದಾಣವೂ ಇಲ್ಲ:

Advertisement

ಮಲ್ಪೆ ಭಾಗಕ್ಕೆ ತೆರಳುವ ಪ್ರಯಾಣಿಕರಿಗೆ ಹಾಗೂ ಕುಂದಾಪುರ ಭಾಗಕ್ಕೆ ತೆರಳುವ ಪ್ರಯಾಣಿಕರ ನಿಲುಗಡೆಗೆ ಸೂಕ್ತ ಬಸ್‌ತಂಗುದಾಣವೂ ಈ ಭಾಗದಲ್ಲಿಲ್ಲ. ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು ಬಸ್ಸುಗಳು ಎಲ್ಲೆಂದರಲ್ಲಿ ನಿಲ್ಲುವ ಕಾರಣದಿಂದಲೂ ವಾಹನದಟ್ಟಣೆ ಕಂಡುಬರುತ್ತದೆ.

ಹೆದ್ದಾರಿ ಇಲಾಖೆಯಿಂದ ಸ್ಪಂದನೆಯಿಲ್ಲ :

ರಸ್ತೆಯನ್ನು ದುರಸ್ತಿ ಮಾಡು ವಂತೆ ಹೆದ್ದಾರಿ ಇಲಾಖೆಯ ವರಿಗೆ ತಿಳಿಸಿದರೆ ಇಂದು, ನಾಳೆ ಎಂದು ದಿನದೂಡುತ್ತಿದ್ದಾರೆ. ಮಳೆಗಾಲವಾದ್ದರಿಂದ ಹೊಂಡ ಗಳಲ್ಲಿ ನೀರು ನಿಂತು ಸವಾರರಿಗೆ ಅರಿವಾಗದೆ ಸಣ್ಣಪುಟ್ಟ ಅವಘಡಗಳೂ ಇಲ್ಲಿ ಸಂಭವಿಸುತ್ತಿ ರುತ್ತವೆ ಎನ್ನುತ್ತಾರೆ ಸ್ಥಳೀಯ ನಿವಾಸಿಯೊಬ್ಬರು.

ಉಡುಪಿಯ ಕರಾವಳಿ ಜಂಕ್ಷನ್‌ನಲ್ಲಿ ರಸ್ತೆ ಮಾಯವಾಗಿದೆ. ರಸ್ತೆ ಇತ್ತು ಎಂದು ಹೇಳುವ ಈ ಪರಿಸರದಲ್ಲಿ ಹೊಂಡಗಳೇ  ಎದ್ದು ಕಾಣುತ್ತವೆ. ಮಲ್ಪೆಗೆ ತೆರಳುವ ನಿತ್ಯ ಪ್ರಯಾಣಿಕರಿಗೂ, ಪ್ರವಾಸಿಗರಿಗೂ ಈ ಜಂಕ್ಷನ್‌ ಪ್ರಯಾಸವನ್ನು ತಂದು ಕೊಡುತ್ತಿದೆ. ಈ ಹೊಂಡಗಳನ್ನು ದಾಟಲು ವಾಹನ ಚಾಲಕರು ಪ್ರತಿನಿತ್ಯ ಹರಸಾಹಸ ಪಡಬೇಕಾಗಿದೆ. ಇದರಿಂದಾಗಿ  ಸುಗಮ ಸಂಚಾರಕ್ಕೂ ತಡೆಯಾಗು¤ದೆ.

ಗುಂಡಿ ಮುಚ್ಚುವ  ಪ್ರಮೇಯವೇ ಇಲ್ಲ  : ದಿನಂಪ್ರತಿ ಸಾರ್ವಜನಿಕರು ಈ ರಸ್ತೆಯಲ್ಲಿ ಇಷ್ಟೆಲ್ಲ ಕಸರತ್ತು ನಡೆಸುತ್ತಿದ್ದರೂ ಹೆದ್ದಾರಿ ಇಲಾಖೆಯವರಾಗಲಿ, ಸ್ಥಳೀಯಾಡಳಿತ ಅಥವಾ ಜನಪ್ರತಿನಿಧಿಗಳೂ ಈ ಬಗ್ಗೆ ಯಾವುದೇ ಚಕಾರವೆತ್ತುತ್ತಿಲ್ಲ. ಸಂಘ-ಸಂಸ್ಥೆಗಳಾದರೂ ಶ್ರಮದಾನ ಮಾಡಿ ಹೊಂಡ ತುಂಬಿಸುವ ಕೆಲಸ ಮಾಡಿದರೆ ಸಮಸ್ಯೆ ತಕ್ಕಮಟ್ಟಿಗಾದರೂ ಈಡೇರಬಹುದು.

ರಸ್ತೆ ಅವ್ಯವಸ್ಥೆ ಬಗ್ಗೆ ಶಾಸಕರು, ಸಂಸದರ ಗಮನ ಸೆಳೆಯಲಾಗಿದೆ. ಹೆದ್ದಾರಿ ಇಲಾಖೆಯ ಅಧಿಕಾರಿಗಳಿಗೂ  ಸೂಚಿಸಿದರೂ ಸ್ಪಂದಿಸುತ್ತಿಲ್ಲ.  ಹೀಗೆ ಆದರೆ ಸ್ಥಳೀಯ ನಗರಸಭೆ ಸದಸ್ಯರೆಲ್ಲ ಸೇರಿ ದುರಸ್ತಿ ಕಾರ್ಯ ಮಾಡಬೇಕೆಂದು ತೀರ್ಮಾನಿಸಿದ್ದೇವೆ. -ಸುಂದರ ಜೆ.ಕಲ್ಮಾಡಿ,ಕಲ್ಮಾಡಿ ವಾರ್ಡ್‌ ಸದಸ್ಯರು

Advertisement

Udayavani is now on Telegram. Click here to join our channel and stay updated with the latest news.

Next