Advertisement

ರಸ್ತೆಯೋ, ಕೃಷಿ ಹೊಂಡವೋ?

05:33 PM Nov 11, 2019 | Suhan S |

ಹುಳಿಯಾರು: ಹುಳಿಯಾರಿನ ಕೇಶವಾಪುರ ಬಳಿ ಇರುವ ರಸ್ತೆ ನೋಡಿದರೆ ತಕ್ಷಣ ಕಾಡುವ ಪ್ರಶ್ನೆ ಏನೆಂದರೆ, ಇದೇನು ರಸ್ತೆಯೋ, ಕೃಷಿ ಹೊಂಡವೋ ಎಂದು ನಿತ್ಯ ಸಾವಿರಾರು ವಾಹನಗಳು ಓಡಾಡುವ ರಸ್ತೆ ದುಸ್ಥಿತಿ ಇದಾಗಿದೆ.

Advertisement

ಆಳೆತ್ತರದ ಗುಂಡಿಗಳು ಬಿದ್ದು ವಾಹನ ಸವಾರರು ಭಯದಿಂದ ಓಡಾಡುವಂತ್ತಾಗಿದೆ. ರಸ್ತೆಯಲ್ಲಿ ಜಲ್ಲಿ ಮೇಲೆದ್ದು ದಾರಿ ಹೋಕರಿಗೆ ಬಡಿದು ಗಾಯಗಳಾಗುವ ಆತಂಕ ಕಾಡುತ್ತಿದೆ. ಅಕ್ಕಪಕ್ಕದ ಮನೆಗಳಿಗೆ ರಸ್ತೆಯ ಧೂಳು ನುಗ್ಗಿ ಕಾಯಿಲೆಗೆ ಕಾರಣವಾಗುತ್ತಿದೆ. ಆದರೂ ಅಧಿಕಾರಿಗಳು ಕುಂಭಕರ್ಣ ನಿದ್ರೆಯಿಂದ ಎದ್ದಂತೆ ಕಾಣುತ್ತಿಲ್ಲ. ಈ ರಸ್ತೆಯಲ್ಲಿ ಹೊಸದುರ್ಗದಿಂದ ಬೆಂಗಳೂರು ಕಡೆ ಹಾಗೂ ಪಂಚನಹಳ್ಳಿ, ಅರಸೀಕೆರೆಯಿಂದ ಹುಳಿಯಾರಿಗೆ ನಿತ್ಯ ನೂರಾರು ಬಸ್‌, ಆಟೋ, ಲಾರಿ ಸೇರಿ ಇತರೆ ವಾಹನಗಳು ಕಷ್ಟದಿಂದ ಸಂಚರಿಸಬೇಕಾಗಿದೆ. ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳಲ್ಲಿ ನೀರು ತುಂಬಿ ರಸ್ತೆಯೇ ಕಾಣದಂತಾಗಿ ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ.

ತಾತ್ಕಾಲಿಕವಾಗಿ ಮುಚ್ಚಿ: ಈ ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿ 234 ಹಾದು ಹೋಗಲಿದ್ದು, ಆ ರಸ್ತೆಯ ಕಾಮಗಾರಿಗೆ ಚಾಲನೆ ದೊರೆತಿರುವ ಹಿನ್ನೆಲೆಯಿಂದ ಗುಂಡಿ ಮುಚ್ಚುವ ಗೋಜಿಗೆ ಹೋಗದೆ ನಿರ್ಲಕ್ಷಿಸಿದ್ದಾರೆ. ಆದರೆ ರಾಷ್ಟ್ರೀಯ ಹೆದ್ದಾರಿ ಕಾರ್ಯ ಇನ್ನೂ 25 ಕಿಮೀ ದೂರದ ಪಂಚನಹಳ್ಳಿ ಭಾಗದಲ್ಲಿ ನಡೆಯುತ್ತಿದ್ದು, ಈ ಭಾಗಕ್ಕೆ ಬರಲು ಇನ್ನೂ ಆರೇಳು ತಿಂಗಳು ಬೇಕಾಗುತ್ತದೆ. ಅಷ್ಟು ತಿಂಗಳು ಜನ ಪ್ರಾಣಾಪಾಯದಿಂದ ಓಡಾಡುವುದನ್ನು ತಪ್ಪಿಸುವ ಸಲುವಾಗಿಯಾದರೂ ಈಗ ಬಿದ್ದಿರುವ ಗುಂಡಿ ತಾತ್ಕಾಲಿಕವಾಗಿ ಮುಚ್ಚಿ ಸಂಚಾರಕ್ಕೆ ಅನುಕೂಲ ಮಾಡಿಕೊಡುವಂತೆ ಸಾರ್ವಜನಿಕರು ಮನವಿ ಮಾಡಿದ್ದಾರೆ.

 

-ಎಚ್‌.ಬಿ.ಕಿರಣ್‌ ಕುಮಾರ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next