ದೇವನಹಳ್ಳಿ: ತಾಲೂಕಿನ ಕನ್ನಮಂಗಲ ಪಾಳ್ಯದಲ್ಲಿ ಒಳಚರಂಡಿ ಪೈಪ್‌ಲೈನ್ ಕಾಮಗಾರಿಗೆ ರಸ್ತೆ ಆಗಿದಿದ್ದರಿಂದ ಕಳೆದ ಮೂರು ದಿವಸಗಳಿಂದ ಮಳೆಯಿಂದ ರಸ್ತೆಗಳು ಪೂರ್ಣವಾಗಿ ಕೆಸರು ಗದ್ದೆಯಾಗಿ ಮಾರ್ಪಾಡಾಗುವುದರ ಮೂಲಕ ಶಾಲೆಗೆ ಹೋಗುವ ವಿದ್ಯಾರ್ಥಿಗಳು ಹಾಗೂ ಸಾರ್ವ ಜನಿಕರು ಪರ ದಾಡುವ ಸ್ಥಿತಿ ನಿರ್ಮಾಣವಾಗಿದೆ.
ಸರ್ಕಾರ ರಸ್ತೆಗಳ ಅಭಿವೃದ್ಧಿಗೆ ಕೋಟ್ಯಂತರ ರೂಪಾಯಿ ವ್ಯಯ ಮಾಡುತ್ತಿದ್ದರು ಸಹ ಇಂದಿಗೂ ಗ್ರಾಮೀಣ ರಸ್ತೆಗಳು ಗುಂಡಿಗಳ ರಸ್ತೆಗಳಾಗಿಯೇ ಉಳಿದಿದೆ. ಈಗಾಗಲೇ ಕನ್ನಮಂಗಲ ಪಾಳ್ಯದ ದರ್ಗಾದ ಬಳಿ ಒಳಚರಂಡಿ ಆರೋಗ್ಯ ಸಮಸ್ಯೆ ಕುರಿತು ಸುದ್ದಿ ಯಾಗಿತ್ತು. ಆದರೆ ಇಲ್ಲಿವರೆಗೂ ಪಂಚಾಯತಿ ಅಧಿಕಾರಿ ಗಳು ಯಾವುದೇ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಸಾರ್ವಜನಿಕರ ಆರೋಪವಾಗಿದೆ.
ಮಳೆ ಬೀಳುತ್ತಿರು ವುದರಿಂದ ಸಾರ್ವಜನಿಕರು ಮತ್ತು ದ್ವಿಚಕ್ರ ವಾಹನ ಸವರರು ಈ ರಸ್ತೆಯಲ್ಲಿ ಓಡಾ ಡುವುದು ಕಷ್ಟಕರ ವಾಗಿದೆ. ಆಯತಪ್ಪಿ ಏನಾದರೂ ಬಿದ್ದರೆ ಆಸ್ಪತ್ರೆ ಸೇರು ವುದು ಖಚಿತ. ರಸ್ತೆಯಲ್ಲಿ ಎದ್ದು ಬೀಳುವುದು ಸಾಮಾ ನ್ಯವಾಗಿದೆ. ಶಾಲಾ ಮಕ್ಕಳು ಸಮವಸ್ತ್ರಗಳು ಪೂರ್ಣ ಪ್ರಮಾ ಣದಲ್ಲಿ ಕೆಸರು ಪುನಃ ಮನೆಗೆ ತೆರಳಿ ಬಟ್ಟೆ ಬದಲಾಯಿಸಿಕೊಂಡು ಶಾಲೆಗೆ ಬರುವ ಪರಿಸ್ಥಿತಿ ನಿರ್ಮಾಣವಾಗಿದೆ.
ಅತಿ ಹೆಚ್ಚು ಅಲ್ಪಸಂಖ್ಯಾತ ಸಮುದಾ ಯದವರು ವಾಸಿಸುವ ಈ ಪ್ರದೇಶ ಅಭಿವೃದ್ಧಿ ಮಾಡಲು ಪಂಚಾಯಿತಿ ಆಡಳಿತ ಮಂಡಳಿಯು ನಿರ್ಲಕ್ಷಿಸುತ್ತಿದೆಎಂದು ಎಂದು ಸ್ಥಳೀ ಯ ಸಾರ್ವ ಜನಿಕರು ಆರೋಪ ಕೇಳಿ ಬರುತ್ತಿದೆ. ಕನ್ನಮಂಗಲ ಗ್ರಾಪಂ ವ್ಯಾಪ್ತಿಯ ಲ್ಲಿಯೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಗ್ರಾಮ ಇದಾಗಿದೆ.
3 ಶಾಲೆಗಳು ಗಳಿವೆ ನಿತ್ಯ ಶಾಲೆಗೆ ತೆರಳುವ ವಿದ್ಯಾರ್ಥಿ ಗಳು ಮಳೆಯಿಂದಾಗಿ ರಸ್ತೆಗಳು ಕೆಸರು ಗದ್ದೆಯಾಗಿದ್ದು ಇದೇ ರಸ್ತೆಯಲ್ಲಿ ವಿದ್ಯಾರ್ಥಿಗಳು. ಸಾರ್ವಜನಿಕರು ನಡೆದುಕೊಂಡು ಹೋಗಬೇಕು. ಶಾಲೆಯ ಬಸ್‌ಗಳು ಬರಲು ಆಗುತ್ತಿಲ್ಲ ಅಷ್ಟು ರಸ್ತೆ ಹದಗೆಟ್ಟಿದೆ ಇದೆ ಎಂದು ಶಾಲಾ ಶಿಕ್ಷಕರು ಮತ್ತು ಮಕ್ಕಳು ಹೇಳುತ್ತಾರೆ. ಇನ್ನಾದರೂ ಸಂಬಂಧಪಟ್ಟ ಪಂಚಾಯಿತಿ ಅಧಿಕಾ ರಿಗಳು ಹಾಗೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಗಮನಹರಿಸಿ ಗುಂಡಿ ಬಿದ್ದ ರಸ್ತೆಗಳನ್ನು ಸರಿಪಡಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಕನ್ನಮಂಗಲ ಗ್ರಾಪಂ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಜನಸಂಖ್ಯೆ ಇರುವ ಪ್ರದೇಶವಾಗಿದೆ. ಯಾವುದೇ ರೀತಿಯ ಅಭಿವೃದ್ಧಿ ಕೆಲಸಗಳನ್ನು ಪೂರ್ಣಗೊಳಿಸಲು ಬಿಡುವುದಿಲ್ಲ. ನಿಗದಿತ ಅನುದಾನ ನೀಡುವಲ್ಲಿ ತಾರತಮ್ಯ ಮಾಡಲಾಗುತ್ತಿದೆ. ರಸ್ತೆ ಸಂಪೂರ್ಣ ಮಳೆಯಿಂದ ಕೆಸರುಗದ್ದೆಯಾಗಿದೆ ಸಾರ್ವಜನಿಕರೇ ಇದರಿಂದ ಸಾಕಷ್ಟು ಅನಾನುಕೂಲವಾಗುತ್ತಿದೆ.
● ಕೆ .ಸೋಮಶೇಖರ್, ಕನ್ನಮಂಗಲ ಗ್ರಾಪಂ ಸದಸ್ಯ
ಮಳೆ ಬರುತ್ತಿರುವುದರಿಂದ ರಸ್ತೆಯಲ್ಲಿ ಓಡಾಡಲು ಆಗುತ್ತಿಲ್ಲ. ಕೆಸರು ಗದ್ದೆಯಾಗಿ ಮಾರ್ಪಾಡಾ ಗಿರುವು ದರಿಂದ ಶಾಲಾ ವಾಹನ ಹಾಗೂ ದ್ವಿಚಕ್ರ ವಾಹನಗಳಲ್ಲಿ ಬರಲು ಆಗುತ್ತಿಲ್ಲ. ಶಿಕ್ಷಕರು ಮತ್ತು ಮಕ್ಕಳು ಇದೇ ರಸ್ತೆಯನ್ನು ಅವಲಂಬಿಸಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ರಸ್ತೆಯನ್ನು ಸರಿಪಡಿಸಿಕೊಡಬೇಕು.
● ಶಾಜೀನ್ ಹೈದರ್ ಸಾಬ್, ಶಿಕ್ಷಕಿ
ಶಾಲೆಗೆ ಹೋಗಲು ಸಾಧ್ಯವಾಗದಂತಹ ರಸ್ತೆಗಳಿವೆ. ಯಾವ ರೀತಿ ಶಾಲೆಗೆ ತೆರಳಬೇಕು ಪಂಚಾಯತಿಯ ಎಡವಟ್ಟಿ ನಿಂದಾಗಿ ಶಿಕ್ಷಕರಿಂದ ಯಾವುದೇ ತಪ್ಪು ಮಾಡದ ನಾವುಗಳು ಬೈಯಿಸಿಕೊಳ್ಳುವ ರೀತಿಯಾಗಿದೆ.
● ಸುಲೇಮಾನ್, ವಿದ್ಯಾರ್ಥಿ