Advertisement

Road Mishap ಶಿಕಾರಿಪುರ: ಕಾರು-ಟ್ರ್ಯಾಕ್ಟರ್ ಡಿಕ್ಕಿ; ತಂದೆ-ಮಗಳು ಸಾವು

11:27 PM May 12, 2024 | Shreeram Nayak |

ಶಿಕಾರಿಪುರ: ತಾಲೂಕಿನ ಹೊನ್ನಾಳಿ ರಸ್ತೆಯ ಸಿದ್ದನಪುರ ಗ್ರಾಮ ಸಮೀಪದ ರಸ್ತೆಯಲ್ಲಿ ಶನಿವಾರ ಕಾರು ಹಾಗೂ ನೀರಿನ ಟ್ಯಾಂಕ್‌ ಹೊಂದಿದ್ದ ಟ್ರ್ಯಾಕ್ಟರ್‌ ಪರಸ್ಪರ ಢಿಕ್ಕಿ ಹೊಡೆದು ಕಾರಿನಲ್ಲಿದ್ದ ತಂದೆ-ಮಗಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

Advertisement

ನಗರದ ಹಳಿಯೂರು ಹೊಸಕೇರಿ ನಿವಾಸಿ ಸಯ್ಯದ್‌ ಇಸ್ಮಾಯಿಲ್‌ ಸಾಬ್‌ (56) ಹಾಗೂ ಅವರ ಪುತ್ರಿ ಉಮೇ ಹಬೀಬಾ (26) ಮೃತಪಟ್ಟವರು.

ಮೃತ ಸಯ್ಯದ್‌ ಇಸ್ಮಾಯಿಲ್‌ ಸಾಬ್‌ ತಮ್ಮ ಮೊಮ್ಮಗಳನ್ನು ತುಮಕೂರಿನಲ್ಲಿರುವ ವಸತಿ ಶಾಲೆಗೆ ಸೇರಿಸಲು ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಕಾರಿನ ಚಾಲಕ ಸಹಿತ ಇತರರಿಗೆ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next