ಕಾಪು: ಉದ್ಯಾವರ ಮೇಲ್ಪೇಟೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಗೆ ಸ್ಕೂಟರ್ ಢಿಕ್ಕಿ ಹೊಡೆದು ಪಾದಚಾರಿ ಮತ್ತು ಸ್ಕೂಟರ್ ಸವಾರರಿಬ್ಬರು ಗಾಯಗೊಂಡ ಘಟನೆ ಶನಿವಾರ ಬೆಳಗ್ಗೆ ನಡೆದಿದೆ.
ಉದ್ಯಾವರ ಮೇಲ್ಪೇಟೆ ನಿವಾಸಿ ಬಾಷಾ ಫಕೀರ್ ಸಿದ್ಗಾ, ಸ್ಕೂಟರ್ ಸವಾರರಾದ ಹಿತೇಶ್ ಮತ್ತು ನಿತೇಶ್ ಗಾಯಗೊಂಡವರು.
ಬಾಷಾ ಅವರು ಉದ್ಯಾವರದ ಶಾಲೆಯೊಂದರ ಎದುರಿನಲ್ಲಿ ಹೋಗುತ್ತಿದ್ದಾಗ ಸ್ಕೂಟರ್ ಢಿಕ್ಕಿ ಹೊಡೆದಿದೆ. ಢಿಕ್ಕಿಯ ಪರಿಣಾಮ ಬಾಷಾ ಫಕೀರ್ ಸಿದ್ಗಾ, ಸ್ಕೂಟರ್ ಸವಾರ ಹಿತೇಶ್, ಸಹ ಸವಾರ ನಿತೇಶ ರಸ್ತೆಗೆ ಬಿದ್ದಿದ್ದು ಬಾಷಾ ಅವರ ತಲೆಯ ಒಳಭಾಗಕ್ಕೆ ಗಂಭೀರ ಗಾಯವಾಗಿ ಪ್ರಜ್ಞೆ ತಪ್ಪಿದ್ದಾರೆ.
ಬಾಷಾ ಅವರನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಸ್ಕೂಟರ್ ಸವಾರರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.